Sunday, September 6, 2026
spot_img
More
    spot_img
    HomeLatest newsಪರಮೇಶ್ವರ್‌ ಸಭೆ ನಡೆಸಿದ್ರೆ ಆಕಾಶ ಕೆಳಗೆ ಬೀಳುತ್ತಾ?: ಸಚಿವ ಸತೀಶ್‌ ಜಾರಕಿಹೊಳಿ ಪ್ರಶ್ನೆ

    ಪರಮೇಶ್ವರ್‌ ಸಭೆ ನಡೆಸಿದ್ರೆ ಆಕಾಶ ಕೆಳಗೆ ಬೀಳುತ್ತಾ?: ಸಚಿವ ಸತೀಶ್‌ ಜಾರಕಿಹೊಳಿ ಪ್ರಶ್ನೆ

    ಬೆಂಗಳೂರು: ಗೃಹಸಚಿವ ಡಾ.ಪರಮೇಶ್ವರ್ ಅವರು ಸಭೆ ನಡೆಸಿದರೆ ಆಕಾಶ ಕೆಳಗೆ ಬೀಳುತ್ತದೆಯೇ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಪ್ರಶ್ನಿಸಿದರು.

    Advertisement

    ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಸಚಿವರು ಸಭೆಗೆ ಆಹ್ವಾನ ನೀಡಿದರೆ ನಾವು ಹೋಗುತ್ತೇವೆ. ಹೈಕಮಾಂಡ್ ತಡೆಯೊಡ್ಡಿದ್ದ ಸಭೆಯ ವಿಚಾರವೇ ಬೇರೆ, ದಲಿತ ಶಾಸಕರ ಸಭೆಯೇ ಬೇರೆ ಎಂದು ಹೇಳಿದರು.

    ನಾವು ಸಭೆ ನಡೆಸಿದರೆ ಆಕಾಶ ಕೆಳಗೆ ಬೀಳುತ್ತದೆಯೇ? ಬೇರೆಯವರು ಸಭೆಯನ್ನು ನಡೆಸುವುದಿಲ್ಲವೇ? ನಾವು ಸಭೆ ನಡೆಸಿದರೆ ಮಾತ್ರ ಸಮಸ್ಯೆಯೇ? ನಮ್ಮ ಸಮಸ್ಯೆ ಪರಿಹಾರಕ್ಕಾಗಿ ಸಭೆಯನ್ನು ಕರೆದಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

    ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಪ್ರಸ್ತಾಪಿಸಿದ ಹನಿಟ್ರ್ಯಾಪ್ ವಿಚಾರಕ್ಕೆ ಸಂಬಂಧಿಸಿದಂತೆ ವರದಿ ಬಂಧಿರಬಹುದು. ಆಗಲೇ ಸಾಕ್ಷ್ಯಾಧಾರಗಳು ಇಲ್ಲ ಎಂದು ಹೇಳಿದ್ದೆವು. ಈಗ ಸಾಕ್ಷ್ಯಾಧಾರಗಳು ಇಲ್ಲ ಎಂದು ಪ್ರಕರಣ ಮುಕ್ತಾಯಗೊಂಡಿರುವ ಸಾಧ್ಯತೆಯೂ ಇದೆ. ಇಲ್ಲದೆಯೂ ಇರಬಹುದು. ಸಾಕ್ಷಿಗಳಿಲ್ಲದೆ ಮುಂದುವರೆಯಲು ಆಗದು. ಆರೋಪ ಸಾಬೀತು ಪಡಿಸಲು ರಾಜಣ್ಣ ಅವರಿಗೆ ಆಗದೆ ಇರಬಹುದು ಎಂದರು.

    ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಪ್ರತಿಭಟನೆ ಮಾಡಲು ನಗರಕ್ಕೆ ಬರುತ್ತಿದ್ದಾರೆ. ಅವರು ಚುನಾವಣಾ ಅಕ್ರಮದ ಬಗ್ಗೆ ಆರೋಪ ಮಾಡಿದ್ದರು. ಮುಂದೆ ಆಗದಂತೆ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

    ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯಾಗಬೇಕಾಗಿದೆ. ಚುನಾವಣೆ ಎದುರಾದಾಗ ಯಾವ ರೀತಿ ಎಂಬುದನ್ನು ನೋಡಬೇಕಿದೆ. ಈಗಲೇ ಏನೂ ಹೇಳಲು ಆಗುವುದಿಲ್ಲ. ರಾಘವೇಂದ್ರ ಹಿಟ್ನಾಳ್ ಅವರು ಕೆಎಂಎಫ್ ವಿಚಾರವಾಗಿ ತಮ್ಮನ್ನು ಭೇಟಿ ಮಾಡಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

    ಆಟೋ ಪ್ರಯಾಣ ಈಗ ಇನ್ನಷ್ಟು ದುಬಾರಿ: ಬೆಂಗಳೂರಿನಲ್ಲಿ ನಾಳೆಯಿಂದ ಹೊಸ ದರಗಳು ಜಾರಿ

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading