ತಿರುಪತಿ: ತಿರುಮಲದ ಕರ್ನಾಟಕ ಸರ್ಕಾರ ನಿರ್ಮಿಸಿರುವ ಕಲ್ಯಾಣ ಮಂಟಪ ಇಂದಿನಿಂದ ಸೇವೆಗೆ ಸಿದ್ಧವಾಗಿದೆ. ತಿರುಮಲ ಕಲ್ಯಾಣ ಮಂಟಪದಲ್ಲಿ ಕರ್ನಾಟಕದ ಜೋಡಿಯ ಮೊದಲ ಮದುವೆ ಇಂದು ಆಗುತ್ತಿದ್ದು, ಇನ್ನು ಎಂಟು ಮದುವೆಗಳು ಬುಕ್ ಆಗಿವೆ.
ಕಳೆದ ತಿಂಗಳು ತಿರುಮಲದಲ್ಲಿ ರಾಜ್ಯ ಮುಜರಾಯಿ ಇಲಾಖೆ ಕಲ್ಯಾಣ ಮಂಟಪ ಉದ್ಘಾಟನೆ ಮಾಡಿತ್ತು. ಈಗ ಈ ಕಲ್ಯಾಣ ಮಂಟಪದಲ್ಲಿ ಮೊದಲ ಮದುವೆ ಇಂದು ನಡೆಯುತ್ತಿದೆ.
ಕರ್ನಾಟಕ ರಾಜ್ಯದ ಜೋಡಿಗಳ ಮೊದಲ ಮದುವೆ ನಡೆಯುತ್ತಿದ್ದು. ತಿರುಮಲ ಕಲ್ಯಾಣ ಮಂಟಪದಲ್ಲಿ ಮದುವೆಗಾಗಿ ರಾಜ್ಯದ ವಿವಿಧ ಜಿಲ್ಲೆಯ 8 ಜೋಡಿ ಮದುವೆಗೆ ಬುಕ್ಕಿಂಗ್ ಮಾಡಿದ್ದಾರೆ. ಈ ಕಲ್ಯಾಣ ಮಂಟಪದಲ್ಲಿ 36 ಕೊಠಡಿಗಳು ಇದ್ದು, 500 ಆಸನದ ವ್ಯವಸ್ಥೆ ಇದೆ. ಒಂದು ಮದುವೆಗೆ ಜಿಎಸ್‍ಟಿ ಸೇರಿಸಿ ಮೂರುವರೆ ಲಕ್ಷ ರೂ. ಆಗಲಿದೆ.
ಸದ್ಯಕ್ಕೆ ಕಲ್ಯಾಣ ಮಂಟಪಕ್ಕೆ ತೆರಳಿ ಬುಕ್ಕಿಂಗ್ ಮಾಡುತ್ತಿದ್ದು, ಶೀಘ್ರದಲ್ಲೇ ಆನ್‍ಲೈನ್ ವ್ಯವಸ್ಥೆ ಕೂಡ ಜಾರಿ ಮಾಡಲಿದ್ದೇವೆ ಎಂದು ಮುಜರಾಯಿ ಇಲಾಖೆ ತಿಳಿಸಿದೆ.
ಒಟ್ಟಾರೆ ತಿರುಪತಿಗೆ ತೆರಳುವ ಕರ್ನಾಟಕ ಭಕ್ತರು ತಿರುಪತಿಯಲ್ಲೇ ಮದುವೆ ಮಾಡಬೇಕು ಎಂಬ ಇಚ್ಛೆ ಇದ್ದರೆ ಮುಜರಾಯಿ ಇಲಾಖೆ ಅವಕಾಶ ಕಲ್ಪಿಸಿದೆ. ಬುಕ್ಕಿಂಗ್ ಮಾಡಿ ತಿರುಮಲದಲ್ಲಿ ಮದುವೆ ಆಗಬಹುದಾಗಿದೆ.
ಆಗಸ್ಟ್ ಅಂತ್ಯಕ್ಕೆ ರಾಜ್ಯದಲ್ಲಿ ಮತ್ತೆ ಟೋಯಿಂಗ್ ಆರಂಭ: ಗೃಹ ಸಚಿವ ಪರಮೇಶ್ವರ್
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


