Thursday, September 3, 2026
spot_img
More
    spot_img
    HomeLatest newsಇಂದಿನಿಂದ ವಾಣಿಜ್ಯ LPG ಸಿಲಿಂಡರ್ ಬೆಲೆಯಲ್ಲಿ ₹33.50ರಷ್ಟು ಕಡಿತ!

    ಇಂದಿನಿಂದ ವಾಣಿಜ್ಯ LPG ಸಿಲಿಂಡರ್ ಬೆಲೆಯಲ್ಲಿ ₹33.50ರಷ್ಟು ಕಡಿತ!

    ದೇಶೀಯ ಮತ್ತು ವಾಣಿಜ್ಯ ಎಲ್‌ಪಿಜಿ ಬೆಲೆಗಳನ್ನು ಸಾಮಾನ್ಯವಾಗಿ ಪ್ರತಿ ತಿಂಗಳ ಮೊದಲ ದಿನದಂದು ಪರಿಷ್ಕರಿಸಲಾಗುತ್ತದೆ.ಹಲವು ದಿನಬಳಕೆ ವಸ್ತುಗಳ ಬೆಲೆ ಏರಿಕೆಯ ನಡುವೆ ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ₹33.50 ರೂಪಾಯಿಗಳಷ್ಟು ಕಡಿಮೆ ಮಾಡಿವೆ,ಈ ತಿಂಗಳು ಸಿಲಿಂಡರ್ ದರವನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ದೇಶಾದ್ಯಂತ ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆ ಕಡಿಮೆ ಮಾಡಿರುವುದಾಗಿ ತೈಲ ಮಾರುಕಟ್ಟೆ ಕಂಪನಿಗಳು ಘೋಷಿಸಿವೆ. ಇದು ಆಗಸ್ಟ್ 1ರಿಂದ ಇಂದಿನಿಂದಲೇ ಜಾರಿಗೆ ಬರುತ್ತಿದೆ. ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಹಣದುಬ್ಬರದ ಒತ್ತಡಗಳ ನಡುವೆ ಈ ಬೆಲೆ ಪರಿಷ್ಕರಣೆಯು ಗ್ರಾಹಕರಿಗೆ ಕೊಂಚ ನಿರಾಳತೆ ಉಂಟುಮಾಡಿದೆ.ಇನ್ನು ಗೃಹೋಪಯೋಗಿ ಉದ್ದೇಶಗಳಿಗಾಗಿ ಬಳಸುವ ದೇಶೀಯ ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

    Advertisement

    ಜುಲೈ 1ರ ಪರಿಷ್ಕರಣೆಯ ಸಂದರ್ಭದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯು ₹58.50ರಷ್ಟು ಇಳಿಕೆಯಾಗಿದೆ. ಏಪ್ರಿಲ್ 1ರಿಂದ ಇದುವರೆಗೆ ಒಟ್ಟು ₹176ರಷ್ಟು ಇಳಿಕೆಯಾಗಿದೆ. ಉದಾಹರಣೆಗೆ, ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್‌ ಬೆಲೆ ₹1836.50 ಇದ್ದರೆ, ಆಗಸ್ಟ್ 1ರ ವೇಳೆಗೆ ಅದು ₹1704.50ಕ್ಕೆ ಇಳಿದಿದೆ.ಒಟ್ಟಾರೆ, ಈ ಕ್ರಮವು ಬೃಹತ್ ಅಡುಗೆ ಸಂಸ್ಥೆಗಳು ಮತ್ತು ವ್ಯವಹಾರಗಳಿಗೆ ನಿಟ್ಟುಸಿರು ನೀಡಿದರೂ, ಗೃಹ ಬಳಕೆದಾರರು ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆಯ ನಿರೀಕ್ಷೆಯಲ್ಲಿ ಮುಂದುವರಿಯಬೇಕಾಗುತ್ತದೆ.

    ಪ್ರಮುಖ ನಗರಗಳಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಹೊಸ ದರಗಳು (ಆಗಸ್ಟ್ 1, 2025)

    ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು ₹33.50 ಇಳಿಸಿದ್ದಾರೆ. ಈ ಹೊಸ ದರಗಳು ಆಗಸ್ಟ್ 1ರಿಂದ ಜಾರಿಗೆ ಬಂದಿದ್ದು, ವಿವಿಧ ನಗರಗಳಲ್ಲಿ ಈ ರೀತಿ ಇವೆ:

    ದೆಹಲಿ: ₹1,631.50

    ಕೋಲ್ಕತ್ತಾ: ₹1,735.50

    ಮುಂಬೈ: ₹1,583.00

    ಚೆನ್ನೈ: ₹1,790.00

    ಜುಲೈ ಆರಂಭದಲ್ಲಿ ಕೂಡ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಪ್ರತಿ ಟ್ಯಾಂಕ್‌ಗೆ ₹50ಕ್ಕಿಂತ ಹೆಚ್ಚು ಇಳಿಸಲಾಗಿತ್ತು.

    ದೆಹಲಿಯಲ್ಲಿ ₹1,723.50 ರಿಂದ ₹1,665.00

    ಕೋಲ್ಕತ್ತಾದಲ್ಲಿ ₹1,826.00 ರಿಂದ ₹1,769.00

    ಮುಂಬೈನಲ್ಲಿ ₹1,666.50

    ಚೆನ್ನೈನಲ್ಲಿ ₹1,823.50

    ಆಟೋ ಪ್ರಯಾಣ ಈಗ ಇನ್ನಷ್ಟು ದುಬಾರಿ: ಬೆಂಗಳೂರಿನಲ್ಲಿ ನಾಳೆಯಿಂದ ಹೊಸ ದರಗಳು ಜಾರಿ

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading