ದಕ್ಷಿಣ ಕನ್ನಡ: ಈ ಹಿಂದೆ ಧರ್ಮಸ್ಥಳ ನೇತ್ರಾವತ್ರಿ ಸ್ನಾನಘಟ್ಟದಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಅನಾಮಿಕ ವ್ಯಕ್ತಿಯೊಬ್ಬ ತಾನು ಕೆಲಸ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಸರಣಿ ಕೊಲೆಗಳು ನಡೆದಿದ್ದು, ಅವುಗಳ ಶವಗಳನ್ನು ತಾನೇ ಹೂತುಹಾಕಿದ್ದಾಗಿ ದೂರು ನೀಡಿದ್ದ.
ಅಲ್ಲದೇ ಶವ ಹೂತುಹಾಕಿದ್ದ ಜಾಗ ತೋರಿಸುವುದಾಗಿ ಹೇಳಿಕೊಂಡಿದ್ದ. ಈ ದೂರಿನ ಮೇರೆಗೆ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದ್ದು, ತನಿಖೆ ಆರಂಭಗೊಂಡಿದೆ. ಅನಾಮಿಕನನ್ನು ಎರಡು ದಿನ ವಿಚಾರಣೆ ನಡೆಸಿದ ಎಸ್‌ಐಟಿ ಬಳಿಕ ಸ್ಥಳ ಮಹಜರು ನಡೆಸಿ 13 ಸ್ಥಳಗಳನ್ನು ಮಾರ್ಕ್ ಮಾಡಿತ್ತು.
ಈ 13 ಸ್ಥಳಗಳಲ್ಲಿ ಅಸ್ತಿಪಂಜರಕ್ಕಾಗಿ ಶೋಧ ಕಾರ್ಯ ಆರಂಭಿಸಿದ ಎಸ್‌ಐಟಿ ಅಧಿಕಾರಿಗಳಿಗೆ ಮೊದಲ 5 ಪಾಯಿಂಟ್‌ಗಳಲ್ಲಿ ಯಾವುದೇ ಕುರುಹು ಪತ್ತೆಯಾಗಿಲ್ಲ ಎನ್ನಲಾಗಿದೆ. ಈ ಕುರಿತಾದ ಸುದ್ದಿಗಳು ಹರಿದುಬರುತ್ತಿದ್ದಂತೆ ಅನಾಮಿಕ ವ್ಯಕ್ತಿ ಗುರುತಿಸಿದ ಸ್ಥಳಗಳ ಬಗ್ಗೆ ಅನುಮಾನಗಳು ಮೂಡಿದ್ದು, ಸದ್ಯ ಈ ಸ್ಥಳಗಳಲ್ಲಿ ಯಾವುದೇ ಕುರುಹು ಸಿಗದಿರಲು ಕಾರಣ ಏನಿರಬಹುದು ಎಂಬ ಚರ್ಚೆಗಳು ಆರಂಭಗೊಂಡಿವೆ.
ಇನ್ನು ಅನಾಮಿಕ ಗುರುತಿಸಿರುವ ಮೊದಲ 8 ಪಾಯಿಂಟ್‌ಗಳು ನೇತ್ರಾವತಿ ನದಿ ತೀರದಲ್ಲಿದ್ದು, ನದಿ ಪ್ರವಾಹ ಬಂದಾಗ ಈ ಸ್ಥಳಗಳಗವರೆಗೂ ನೀರು ಬರುತ್ತದೆ ಎನ್ನಲಾಗಿದೆ. ಅಲ್ಲದೇ ಚಾರ್ಮಾಡಿ ಭೂಕುಸಿತವಾದಾಗಲೂ ಇಲ್ಲಿಗೆ ಹೆಚ್ಚಿನ ಮಣ್ಣು ಬಂದಿರಬಹುದು, ಹೀಗಾಗಿ ಈ ಸ್ಥಳಗಳಲ್ಲಿ ಸಂಪೂರ್ಣ ಅಸ್ತಿಪಂಜರ ಸಿಗದೇ ಇರಬಹುದು ಎನ್ನಲಾಗಿದೆ.
ಆದರೆ 9ರಿಂದ 13ರವರೆಗಿನ ಪಾಯಿಂಟ್‌ಗಳು ಹೆದ್ದಾರಿ ಬದಿಯಲ್ಲಿದ್ದು, ಈ ಸ್ಥಳಗಳಲ್ಲಿ ಅಸ್ತಿಪಂಜರ ಸಿಗುವುದು ಖಚಿತ ಎನ್ನಲಾಗಿದೆ.
ಧರ್ಮಸ್ಥಳ ಸರಣಿ ಕೊಲೆ: ಎಸ್‌ಐಟಿಗೆ ಮತ್ತೆ 9 ಮಂದಿ ಪೊಲೀಸ್ ಅಧಿಕಾರಿಗಳ ನೇಮಕ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


