ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳು ಸಂಭವಿಸಿದ್ದು, ಅವುಗಳ ಶವಗಳನ್ನು ತಾನೇ ಹೂತುಹಾಕಿದ್ದಾಗಿ ಹೇಳಿಕೊಂಡಿದ್ದ ಅನಾಮಿಕ ವ್ಯಕ್ತಿ ಹೂತಿಟ್ಟ ಜಾಗದಲ್ಲಿ ಅಸ್ತಿಪಂಜರ ಹೊರತೆಗೆದು ತೋರಿಸುವುದಾಗಿ ಸಹ ದೂರು ನೀಡಿದ್ದ.
ಆ ದೂರಿನ ಮೇರೆಗೆ ಎಸ್‌ಐಟಿ ರಚನೆಯಾಗಿತ್ತು. ಮೊದಲಿಗೆ ಎರಡು ದಿನಗಳ ಕಾಲ ಅನಾಮಿಕನನ್ನು ವಿಚಾರಣೆ ನಡೆಸಿದ ಎಸ್‌ಐಟಿ ತಂಡ ಬಳಿಕ ಸ್ಥಳ ಮಹಜರು ನಡೆಸಿತು. ಈ ವೇಳೆ 13 ಜಾಗಗಳಲ್ಲಿ ಹೆಣ ಹೂತಿದ್ದಾಗಿ ಅನಾಮಿಕ ಗುರುತಿಸಿದ್ದ.
ಅದರಂತೆ ಮೊದಲಿಗೆ 5 ಜಾಗಗಳಲ್ಲಿ ಉತ್ಖಲನ ಮಾಡಲಾಗಿದ್ದು, ಅಲ್ಲಿ ಯಾವುದೇ ರೀತಿಯ ಅಸ್ತಿಪಂಜರ ಪತ್ತೆಯಾಗಿರಲಿಲ್ಲ. ಹೀಗೆ ಮೊದಲ 5 ಪಾಯಿಂಟ್‌ಗಳಲ್ಲಿ ಅಸ್ತಿಪಂಜರದ ಯಾವುದೇ ಕುರುಹು ಪತ್ತೆಯಾಗದ್ದನ್ನು ಕಂಡು ಬಹುತೇಕರು ಈತ ಸುಳ್ಳು ಹೇಳುತ್ತಿದ್ದಾನೆ, ಈತ ಒಬ್ಬ ಹುಚ್ಚ ಸಮಯ ವ್ಯರ್ಥ ಮಾಡಿಸುತ್ತಿದ್ದಾನೆ ಎಂದು ಅಭಿಪ್ರಾಯ ಹೊರಹಾಕಿದ್ದರು.
ಆದರೆ ಇಂದು ( ಜುಲೈ 31 ) ಆರನೇ ಪಾಯಿಂಟ್‌ನಲ್ಲಿ ಅಸ್ತಿಪಂಜರದ ಮೂಳೆಗಳು ಪತ್ತೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಳೆದೆರಡು ದಿನಗಳಿಂದ ಅನಾಮಿಕ ವ್ಯಕ್ತಿ ವಿರುದ್ಧ ಮಾತನಾಡಿದ್ದವರೆಲ್ಲ ಸೈಲೆಂಟ್ ಆಗಿಬಿಟ್ಟಿದ್ದಾರೆ.
ಕಾಂತಾರ 1’ ರಿಲೀಸ್‌ಗೂ ಮುನ್ನವೇ ಹೊಸ ಪ್ಯಾನ್ ಇಂಡಿಯಾ ಚಿತ್ರಕ್ಕೆ ಸಹಿ ಹಾಕಿದ ರಿಷಬ್ ಶೆಟ್ಟಿ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


