Tuesday, November 3, 2026
spot_img
More
    spot_img
    HomeLatest newsಡಿಕೆಶಿ ಖಾಲಿ ಡಬ್ಬಾ, ಡಿಸಿಎಂ ಆದ್ರೇನು ಅವನ ವಿರುದ್ಧವೂ ದೂರು ಕೊಟ್ಟಿದ್ದೇವೆ: ರೊಚ್ಚಿಗೆದ್ದ ಲಾಯರ್‌ ಜಗದೀಶ್‌;...

    ಡಿಕೆಶಿ ಖಾಲಿ ಡಬ್ಬಾ, ಡಿಸಿಎಂ ಆದ್ರೇನು ಅವನ ವಿರುದ್ಧವೂ ದೂರು ಕೊಟ್ಟಿದ್ದೇವೆ: ರೊಚ್ಚಿಗೆದ್ದ ಲಾಯರ್‌ ಜಗದೀಶ್‌; ವಿಡಿಯೊ

    ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ರಚನೆಯಾಗಿರುವ ಎಸ್‌ಐಟಿ ಇನ್ನೇನು ಕೆಲವೇ ದಿನಗಳಲ್ಲಿ ಅಂತಿಮ ವರದಿ ಸಲ್ಲಿಸಲಿದೆ ಎನ್ನುವಾಗಲೇ ಹೈಕೋರ್ಟ್‌ ಸಾಕ್ಷಿದಾರರು ಸಲ್ಲಿಸಿದ ರಿಟ್‌ ಅರ್ಜಿ ಆಧಾರದ ಮೇಲೆ ತನಿಖೆಗೆ ತಾತ್ಕಾಲಿಕ ತಡೆ ನೀಡಿದೆ.

    ಈ ಮಹತ್ವದ ಬೆಳವಣಿಗೆ ನಡುವೆಯೇ ಪ್ರಕರಣದಲ್ಲಿ ನಿಜಕ್ಕೂ ನ್ಯಾಯ ಸಿಗಲಿದೆಯಾ ಅಥವಾ ನ್ಯಾಯ ಮಣ್ಣಿನಲ್ಲೇ ಹುದುಗಿಹೋಗಲಿದೆಯಾ ಎಂಬ ಅನುಮಾನ ಮತ್ತು ಪ್ರಶ್ನೆ ಎಲ್ಲರಲ್ಲೂ ಎದ್ದಿದೆ. ಹೀಗಿರುವಾಗಲೇ ಲಾಯರ್‌ ಜಗದೀಶ್‌ ತನ್ನ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಎಸ್‌ಐಟಿ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ವಿರುದ್ಧ ಹಂಚಿಕೊಂಡಿರುವ ವಿಡಿಯೊ ಸದ್ದು ಮಾಡತೊಡಗಿದೆ.

    ವಿಡಿಯೊದಲ್ಲಿ ಎಸ್‌ಐಟಿ ಬುಕ್‌ ಆಗಿದೆ, ಆಮಿಷಕ್ಕೆ ಮಾರಾಟವಾಗಿದೆ ಎಂದಿರುವ ಲಾಯರ್‌ ಜಗದೀಶ್‌ ಅರಣ್ಯ ಇಲಾಖೆಯ ಈಶ್ವರ್‌ ಖಂಡ್ರೆಯವರು ಕಾಡಿನಲ್ಲಿ ಶವಗಳನ್ನು ಬಿಸಾಕಿದ್ದರೂ ಅದರ ವಿರುದ್ಧ ಪರಿಶೀಲನೆ ನಡೆಸದೇ ಸುಮ್ಮನಿದ್ದಾರೆ ಎಂದೂ ಸಹ ಕಿಡಿಕಾರಿದ್ದಾರೆ.

    ಇನ್ನು ಡಿಕೆ ಶಿವಕುಮಾರ್‌ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿರುವ ಲಾಯರ್‌ ಜಗದೀಶ್‌ ಡಿಕೆ ಶಿವಕುಮಾರನ ಹೇಳಿಕೆ ಮೇಲೆ ಎಸ್‌ಐಟಿ ನಡೆಯುತ್ತಿದೆ, ಅದರಲ್ಲಿ ಯಾವುದೇ ಅನುಮಾನ ಬೇಡ ನಾವು ಡಿಕೆ ಶಿವಕುಮಾರ್‌ ವಿರುದ್ಧವೂ ದೂರನ್ನು ದಾಖಲಿಸಿದ್ದೇವೆ. ಡಿಕೆ ಶಿವಕುಮಾರ್‌ ಧರ್ಮಸ್ಥಳದ ವಿರುದ್ಧ ತನ್ನ ತಲೆಯನ್ನು ತೂರಿಸುತ್ತಿದ್ದಾನೆ. ಖಾಲಿ ಡಬ್ಬದ ಹಾಗೆ ಬೇಡದ ಹೇಳಿಕೆಗಳನ್ನು ಕೊಡುತ್ತಿದ್ದಾನೆ, ಇನ್ನೂ ಏನೇನೋ ಮಾಡುತ್ತಿದ್ದಾನೆ, ಅದರ ವಿವರಗಳೆಲ್ಲ ಶೀಘ್ರದಲ್ಲೇ ಸಿಗಲಿದೆ ಎಂದಿದ್ದಾರೆ.

    ಅಲ್ಲದೇ ಯಾವ ಯಾವ ಮಂತ್ರಿ ಪ್ರಕರಣದ ಮೇಲೆ ಒತ್ತಡ ಹೇರುತ್ತಿದ್ದಾರೆ, ಎಸ್‌ಐಟಿ ಮೇಲೆ ಯಾರ ಪ್ರಭಾವ ಬೀರುತ್ತಿದ್ದಾರೆ, ಯಾರು ಧರ್ಮಸ್ಥಳ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ ಎಲ್ಲವನ್ನೂ ಬಿಚ್ಚಿಡುತ್ತೇನೆ ಎಂದಿದ್ದಾರೆ. ಎಸ್‌ಐಟಿ ರಚನೆಯಾದ ಮೇಲೆ ಧರ್ಮಸ್ಥಳ ಪ್ರಕರಣದ ಬಗ್ಗೆ ಮಾತನಾಡುವವರ ಮೇಲೆ 150ಕ್ಕೂ ಹೆಚ್ಚು ನಕಲಿ ದೂರುಗಳನ್ನು ದಾಖಲು ಮಾಡಿದ್ದಾರೆ. ಡಿಕೆ ಶಿವಕುಮಾರ ಎಸ್‌ಐಟಿಯಿಂದ ಕೊಲೆಗಾರರಿಗೆ ಕ್ಲೀನ್‌ಚಿಟ್‌ ಕೊಡಿಸುವ ಯತ್ನದಲ್ಲಿದ್ದಾನೆ ಎಂದು ಕಿಡಿಕಾರಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search