Tuesday, November 3, 2026
spot_img
More
    spot_img
    HomeLatest newsಫಾಸ್ಟ್‌ಟ್ಯಾಗ್ ಬಳಕೆ: ವಾಹನ ಮಾಲೀಕರು ಕೆವೈವಿ ಮಾಡುವುದು ಹೇಗೆ?

    ಫಾಸ್ಟ್‌ಟ್ಯಾಗ್ ಬಳಕೆ: ವಾಹನ ಮಾಲೀಕರು ಕೆವೈವಿ ಮಾಡುವುದು ಹೇಗೆ?

    ವಾಹನ ಸವಾರರು ಕೆವೈವಿ ಮಾಡಿಸದಿದ್ದರೆ ನವೆಂಬರ್ 1ರಿಂದ ಫಾಸ್ಟ್‌ಟ್ಯಾಗ್ ಕೆಲಸ ಮಾಡುವುದಿಲ್ಲ. ನೊ ಯುವರ್ ವೆಹಿಕಲ್ (ಕೆವೈವಿ) ಪ್ರಕ್ರಿಯೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಹೆಚ್‌ಎಐ) ಸರಳಗೊಳಿಸಿ, ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

    ಅಕ್ಟೋಬರ್ 31ರ ಬಳಿಕ ಭಾರತದ ಎಲ್ಲಾ ವಾಹನಗಳ ಮಾಲೀಕರು ಕೆವೈವಿ ಪ್ರಕ್ರಿಯೆ ಮಾಡಿದರೆ ಮಾತ್ರ ಫಾಸ್ಟ್‌ಟ್ಯಾಗ್ ಬಳಕೆ ಮಾಡಲು ಸಾಧ್ಯವಿದೆ. ಟೋಲ್ ಸಂಗ್ರಹದಲ್ಲಿ ಪಾರದರ್ಶಕತೆಯನ್ನು ತರಲು ಈ ಮಾದರಿಯ ವ್ಯವಸ್ಥೆ ಅಗತ್ಯವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

    ಒಂದು ವೇಳೆ ಕೆವೈವಿ ಮಾಡಿಸದಿದ್ದರೆ ಫಾಸ್ಟ್‌ಟ್ಯಾಗ್ ಕೆಲಸ ಮಾಡುವುದಿಲ್ಲ, ಅಲ್ಲದೇ ಟೋಲ್‌ ಬೂತ್‌ಗಳಲ್ಲಿ ಹಣ ಪಾವತಿ ಮಾಡಬೇಕಾಗುತ್ತದೆ. ವಾಹನ ಸವಾರರ ಅನುಕೂಲಕ್ಕಾಗಿ ಕೆವೈವಿ ಪ್ರಕ್ರಿಯೆಯನ್ನು ಸಹ ಸರಳಗೊಳಿಸಲಾಗಿದ್ದು, ಕಾರು, ಜೀಪ್‌ ಹಾಗೂ ವ್ಯಾನ್‌ಗಳ ಚಿತ್ರಗಳನ್ನು ಅಪ್ಲೋಡ್ ಮಾಡುವ ವಿಧಾನವನ್ನು ಬದಲಾವಣೆ ಮಾಡಲಾಗಿದೆ.

    ಏಕೆ ಕೆವೈವಿ?: ಎನ್‌ಹೆಚ್‌ಎಐ ಅಧಿಕಾರಿಗಳು ಫಾಸ್ಟ್‌ಟ್ಯಾಗ್ ದುರುಪಯೋಗದ ಹಲವಾರು ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ಒಂದೇ ಟ್ಯಾಗ್‌ ಹಲವು ವಾಹನಗಳಲ್ಲಿ ಬಳಕೆ ಮಾಡುವುದು. ಕಡಿಮೆ ಟೋಲ್ ಪಾವತಿಸಲು ಕಾರುಗಳ ಫಾಸ್ಟ್‌ಟ್ಯಾಗ್ ಲಾರಿಗಳಿಗೆ ಅಂಟಿಸುವುದು ಪತ್ತೆಯಾಗಿದೆ. ಆದ್ದರಿಂದ ಕೆವೈವಿ ಮೂಲಕ ಪ್ರತಿ ಟ್ಯಾಗ್ ಅ‌ನ್ನು ಅದರ ಸಂಬಂಧಿತ ವಾಹನಕ್ಕೆ ಸರಿಯಾಗಿ ಸಂಪರ್ಕಿಸಿ, ನಿಖರವಾದ ಟೋಲ್ ವರ್ಗೀಕರಣ, ಸಂಗ್ರಹ ಮಾಡಲಾಗುತ್ತದೆ.

    ಕೆವೈವಿ ಮಾಡಿಸಲು ವಾಹನಗಳ ಮಾಲೀಕರು ವಾಹನದ ಆರ್‌ಸಿಯನ್ನು ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕಿದೆ. ಇದನ್ನು ವಾಹನ ಮಾಲೀಕರ ಹೆಸರು ಸರಿಯಾಗಿ ಕಾಣುವಂತೆ ಅಪ್‌ಲೋಡ್ ಮಾಡಬೇಕು. ಇದರ ಜೊತೆಗೆ ಆಧಾರ್, ಪ್ಯಾನ್ ಅಥವ ಪಾಸ್‌ಪೋರ್ಟ್ ಹೀಗೆ ಗುರುತಿನ ಚೀಟಿ ಅಪ್‌ಲೋಡ್ ಮಾಡಬೇಕಿದೆ. ಮಾಲೀಕರ ಇತ್ತೀಚಿನ ಫೋಟೋವನ್ನು ಸಹ ಕೆಲವು ಸಂದರ್ಭದಲ್ಲಿ ಅಪ್‌ಲೋಡ್ ಮಾಡಬೇಕಿದೆ. ವಾಹನ ಮುಂಭಾಗ ಮತ್ತು ಒಂದು ಸೈಡ್ ಫೋಟೋವನ್ನು ಅಪ್‌ಲೋಡ್ ಮಾಡಬೇಕು.

    ಕೆವೈವಿಯನ್ನು ನೀವು ಫಾಸ್ಟ್‌ಟ್ಯಾಗ್ ಪಡೆದ ಬ್ಯಾಂಕ್‌ನ ವೆಬ್‌ಸೈಟ್ ಅಥವಾ ಮೊಬೈಲ್ ಆಪ್ಲಿಕೇಶನ್ ಮೂಲಕವೂ ಪೂರ್ಣಗೊಳಿಸಬಹುದು. ಲಾಗಿನ್ ಮಾಡಿ ಅಪ್‌ಡೇಟ್ ಕೆವೈವಿ ಅಥವ ನೊ ಯುವರ್ ವೆಹಿಕಲ್ ಎಂಬ ಆಯ್ಕೆ ಕ್ಲಿಕ್ ಮಾಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು OTP ಹಾಕಬೇಕು. ದೃಢೀಕರಣ ಪೂರ್ಣಗೊಂಡ ನಂತರ, ಟ್ಯಾಗ್ ಪರಿಶೀಲಿಸಲಾಗಿದೆ, ಸಕ್ರಿಯವಾಗಿದೆ ಎಂಬ ಸಂದೇಶ ಬರುತ್ತದೆ.

    ಕೆವೈವಿ ಹೇಗೆ ಸಹಕಾರಿಯಾಗುತ್ತದೆ?

    • ಫಾಸ್ಟ್‌ಟ್ಯಾಗ್ ದುರುಪಯೋಗವನ್ನು ಕೆವೈವಿ ತಡೆಗಟ್ಟಲು ಸಹಕಾರಿಯಾಗಿದೆ
    • ಒಂದು ವೇಳೆ ವಾಹನ ಕಳೆದು ಹೋದರೆ ಅದನ್ನು ಹುಡುಕಲು ಉಪಯುಕ್ತವಾಗಿದೆ
    • ಟೋಲ್‌ ವರ್ಗೀಕರಣದಲ್ಲಿ ಆಗುವ ಗೊಂದಲ ತಪ್ಪಿಸುತ್ತದೆ
    • ವಾಹನಗಳ ಮಾಲೀಕರಿಗೆ ಪಾರದರ್ಶಕವಾದ ಸೇವೆ ಸಿಗಲಿದೆ
    • ಬಹಳ ಕಾಲದ ಡಿಜಿಟಲ್ ಟೋಲ್ ಕಲೆಕ್ಷನ್ ತಪ್ಪುಗಳನ್ನು ಸರಿಪಡಿಸಲಾಗುತ್ತದೆ
    • ವಾಹನಗಳ ಮಾಲೀಕರ ಕುರಿತು ಸಮಗ್ರವಾದ ವಿವರ ಸಿಗಲಿದೆ

    ವಾಹನವನ್ನು ಮಾರಾಟ ಮಾಡಿದರೆ ಅಥವ ಕೊಂಡುಕೊಳ್ಳುವ ತನಕ ಕೆವೈವಿ ಜಾರಿಯಲ್ಲಿರುತ್ತದೆ. ಮಾಲೀಕತ್ವ ಬದಲಾದ ಬಳಿಕ ಪುನಃ ಮಾಲೀಕತ್ವದ ವಿವರವನ್ನು ಕೆವೈವಿ ಮೂಲಕ ಬದಲಾವಣೆ ಮಾಡಬೇಕಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search