Friday, March 20, 2026
spot_img
More
    spot_img
    HomeLatest newsಬಿಡಿಎ ಸೂಪರ್‌ವೈಸರ್ ಮನೆ ಮೇಲೆ ಲೋಕಾಯುಕ್ತ ದಾಳಿ: ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಪತ್ತೆ

    ಬಿಡಿಎ ಸೂಪರ್‌ವೈಸರ್ ಮನೆ ಮೇಲೆ ಲೋಕಾಯುಕ್ತ ದಾಳಿ: ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಪತ್ತೆ

    ಬೆಂಗಳೂರು: ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ನೌಕರನಿಗೆ ಲೋಕಾಯುಕ್ತ ಪೊಲೀಸರು ಶಾಕ್ ನೀಡಿದ್ದಾರೆ. ಬಿಡಿಎ ಸೂಪರ್‌ವೈಸರ್ ವೆಂಕಟೇಶ್ ಅವರಿಗೆ ಸೇರಿದ ನಿವಾಸ ಸೇರಿದಂತೆ ಒಟ್ಟು ಐದು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿರುವ ಅಧಿಕಾರಿಗಳು, ಭಾರಿ ಪ್ರಮಾಣದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ.

    ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಬಿಡಿಎ ಸೂಪರ್‌ವೈಸರ್ ವೆಂಕಟೇಶ್ ಅವರಿಗೆ ಲೋಕಾಯುಕ್ತ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ಬಿಸಿ ಮುಟ್ಟಿಸಿದ್ದಾರೆ. ಲೋಕಾಯುಕ್ತ ಎಸ್ಪಿ ವಂಶಿಕೃಷ್ಣ ಅವರ ನೇತೃತ್ವದಲ್ಲಿ 10ಕ್ಕೂ ಹೆಚ್ಚು ಅಧಿಕಾರಿಗಳ ತಂಡವು ಏಕಕಾಲಕ್ಕೆ ದಾಳಿ ನಡೆಸಿದೆ.

    ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ವೆಂಕಟೇಶ್ ಅವರ ನಿವಾಸ, ಅವರ ಕಚೇರಿ ಮತ್ತು ಸಂಬಂಧಿಕರ ಮನೆಗಳು ಸೇರಿದಂತೆ ಒಟ್ಟು ಐದು ಆಯಕಟ್ಟಿನ ಸ್ಥಳಗಳಲ್ಲಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಭ್ರಷ್ಟಾಚಾರದ ದೂರುಗಳ ಹಿನ್ನೆಲೆಯಲ್ಲಿ ನಡೆದಿರುವ ಈ ದಿಢೀರ್ ಕಾರ್ಯಾಚರಣೆಯು ಬಿಡಿಎ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

    ಪತ್ತೆಯಾದ ಆಸ್ತಿಯ ವಿವರ:

    ಬೆಳ್ಳಂಬೆಳಗ್ಗೆ ನಡೆದ ಈ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ಕಂಡುಬಂದ ಆಸ್ತಿಯ ಮೊತ್ತ ನೋಡಿ ದಂಗಾಗಿದ್ದಾರೆ. ವೆಂಕಟೇಶ್ ಅವರ ಆದಾಯಕ್ಕೂ ಮೀರಿ ಸುಮಾರು 1.53 ಕೋಟಿ ರೂಪಾಯಿ ಅಸಮತೋಲನ ಆಸ್ತಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

    ಸ್ಥಿರಾಸ್ತಿ (ಸುಮಾರು 90.77 ಲಕ್ಷ ರೂ.):ಬೆಂಗಳೂರಿನ ವಿವಿಧೆಡೆ 7 ನಿವೇಶನಗಳು,ಬಸವೇಶ್ವರ ನಗರದಲ್ಲಿ ವಾಸದ ಮನೆ,6 ಎಕರೆ 20 ಗುಂಟೆ ಕೃಷಿ ಜಮೀನು.

    ಚರಾಸ್ತಿ (ಸುಮಾರು 62.82 ಲಕ್ಷ ರೂ.):ಭಾರಿ ಪ್ರಮಾಣದ ಚಿನ್ನಾಭರಣಗಳು,ದುಬಾರಿ ವಾಹನಗಳು,ಬ್ಯಾಂಕ್ ಖಾತೆಯಲ್ಲಿ 1.4 ಲಕ್ಷ ರೂಪಾಯಿ ನಗದು ಠೇವಣಿ

    ಶೀತ ಎಂದು ಸೈನಸ್ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ, ಚಳಿಗಾಲದಲ್ಲಿ ಇದು ಹೆಚ್ಚಾಗಲು ಕಾರಣವೇನು?


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    KVS ಪ್ರವೇಶ 2026: ಅರ್ಜಿ ಪ್ರಕ್ರಿಯೆ ಶುರು!

    “KVS ಪ್ರವೇಶ 2026” ಇದೀಗ ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೇಂದ್ರೀಯ ವಿದ್ಯಾಲಯ ಸಂಘಟನೆ (KVS) 2026-27 ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆಯನ್ನು ಅಧಿಕೃತವಾಗಿ ಆರಂಭಿಸಿದೆ. ಆಸಕ್ತ ಪೋಷಕರು ಇದೀಗ...

    ಬ್ರೇಕಿಂಗ್! ದೆಹಲಿ EV ಪಾಲಿಸಿ 2.0: 2030ರವರೆಗೆ 100% ರೋಡ್ ಟ್ಯಾಕ್ಸ್ ಫ್ರೀ—₹1 ಲಕ್ಷವರೆಗೆ ಲಾಭ!

    “ದೆಹಲಿ EV ಪಾಲಿಸಿ 2.0” ಈಗ ದೇಶದ ವಾಹನ ಮಾರುಕಟ್ಟೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ದೆಹಲಿ ಸರ್ಕಾರ ಭರ್ಜರಿ ಸೌಲಭ್ಯಗಳನ್ನು ಘೋಷಿಸಿದ್ದು, ವಾಹನ ಖರೀದಿದಾರರಿಗೆ ದೊಡ್ಡ ಬೂಸ್ಟ್...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading