Tuesday, March 24, 2026
spot_img
More
    spot_img
    HomeEntertainment2025ರ ಮೊದಲ 6 ತಿಂಗಳಲ್ಲಿ ಕನ್ನಡ ಚಿತ್ರಗಳು ಮಾಡಿದ ಕಲೆಕ್ಷನ್‌; ಇಷ್ಟೇ ಸಾಕಾ?

    2025ರ ಮೊದಲ 6 ತಿಂಗಳಲ್ಲಿ ಕನ್ನಡ ಚಿತ್ರಗಳು ಮಾಡಿದ ಕಲೆಕ್ಷನ್‌; ಇಷ್ಟೇ ಸಾಕಾ?

    2025ರ ಜುಲೈ ತಿಂಗಳು ಆಗಮಿಸಿದ್ದು, ವರ್ಷದ ಮೊದಲಾರ್ಧ ಮುಕ್ತಾಯಗೊಂಡಿದೆ. ಆದರೆ ಕನ್ನಡ ಚಿತ್ರರಂಗ ಮಾತ್ರ ಬ್ಲಾಕ್‌ಬಸ್ಟರ್‌ ಚಿತ್ರವನ್ನು ಮಾತ್ರ ಕಂಡಿಲ್ಲ. ಜನವರಿಯಿಂದ ಜೂನ್‌ವರೆಗೆ ಹಲವಾರು ಕನ್ನಡ ಚಿತ್ರಗಳು ಬಿಡುಗಡೆಗೊಂಡಿದ್ದು, ಕೆಲ ಚಿತ್ರಗಳು ಮಾತ್ರ ನಷ್ಟದಿಂದ ಪಾರಾಗಿವೆ.

    ಇನ್ನು ಈ ಪೈಕಿ ಕೇವಲ 3 ಚಿತ್ರಗಳು ಮಾತ್ರ 5 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದ್ದು, ಇದೇ ಈ ವರ್ಷ ಕನ್ನಡ ಚಿತ್ರರಂಗ ಮಾಡಿದ ಸಾಧನೆಯಾಗಿದೆ. ಸ್ಟಾರ್‌ ನಟರ ಚಿತ್ರಗಳಾವುವೂ ಬಿಡುಗಡೆಯಾಗದೇ ಇರುವುದು ಚಿತ್ರರಂಗದ ಹಿನ್ನಡೆಗೆ ಕಾರಣವಾದ ಅಂಶಗಳಲ್ಲೊಂದಾಗಿದ್ದು, ಒಳ್ಳೆ ಚಿತ್ರ ಬಂದರೆ ಹೀರೊ ಯಾರೇ ಆದರೂ ಸಿನಿಮಾ ನೋಡುತ್ತಾರೆ ಎನ್ನುತ್ತಾರೆ ಸಿನಿ ರಸಿಕರು.

    ಈ ವರ್ಷದ ಮೊದಲಾರ್ಧದಲ್ಲಿ ಅತ್ಯಧಿಕ ಕಲೆಕ್ಷನ್ ಮಾಡಿದ ಕನ್ನಡ ಚಿತ್ರವೆಂದರೆ ಅದು ಶರಣ್‌ ನಟನೆಯ ಛೂ ಮಂತರ್.‌ ಎರಡನೇ ಸ್ಥಾನದಲ್ಲಿ ವಿನೋದ್‌ ಪ್ರಭಾಕರ್‌ ನಟನೆಯ ಮಾದೇವ ಇದ್ದರೆ, ಮೂರನೇ ಸ್ಥಾನದಲ್ಲಿ ಯುದ್ಧಕಾಂಡ ಚಾಪ್ಟರ್‌ 2 ಇದೆ. ಇನ್ನು ಈ ವರ್ಷ ಕನ್ನಡ ಚಿತ್ರಗಳು ಮಾಡಿದ ಟಾಪ್‌ 10 ಕನ್ನಡ ಚಿತ್ರಗಳ ಪಟ್ಟಿ ಮುಂದಿದೆ.

    1. ಛೂ ಮಂತರ್‌ – 6.45 ಕೋಟಿ ಗ್ರಾಸ್‌
    2. ಮಾದೇವ – 6.26 ಕೋಟಿ ಗ್ರಾಸ್‌
    3. ಯುದ್ಧಕಾಂಡ ಚಾಪ್ಟರ್‌ 2 – 5.54 ಕೋಟಿ ಗ್ರಾಸ್‌
    4. ವಾಮನ – 3.40 ಕೋಟಿ ಗ್ರಾಸ್‌
    5. ಮನದ ಕಡಲು – 1.78 ಕೋಟಿ ಗ್ರಾಸ್‌
    6. ಫಾರೆಸ್ಟ್‌ – 1.63 ಕೋಟಿ ಗ್ರಾಸ್‌
    7. ವೀರ ಚಂದ್ರಹಾಸ – 1.62 ಕೋಟಿ ಗ್ರಾಸ್‌
    8. ಸಂಜು ವೆಡ್ಸ್‌ ಗೀತಾ 2 – 1.32 ಕೋಟಿ ಗ್ರಾಸ್‌
    9. ರಾಯಲ್‌ – 1.07 ಕೋಟಿ ಗ್ರಾಸ್‌
    10. ಭಗೀರಥ – 1.04 ಕೋಟಿ ಗ್ರಾಸ್
      ( ಮೂಲ: ಸ್ಯಾಕ್‌ನಿಕ್‌ )

    ಇಸ್ರೇಲ್‌ ದಾಳಿಯಿಂದ ಗಾಜಾದಲ್ಲಿ ಮೃತಪಟ್ಟ ಪತ್ರಕರ್ತರೆಷ್ಟು? ಮಾಹಿತಿ ಬಹಿರಂಗ

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬ್ರೇಕಿಂಗ್! ರೂಪಾಯಿ ಕುಸಿತ—ಮೊದಲ ಬಾರಿಗೆ ₹93 ದಾಟಿದ ಡಾಲರ್, ಆರ್ಥಿಕತೆಗೆ ಶಾಕ್!

    “ರೂಪಾಯಿ ಕುಸಿತ 93” ಇದೀಗ ದೇಶದ ಆರ್ಥಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆ, ಭಾರತೀಯ ರೂಪಾಯಿ ಇತಿಹಾಸದಲ್ಲೇ ಮೊದಲ ಬಾರಿಗೆ ಡಾಲರ್ ಎದುರು ₹93 ಗಡಿ...

    ತೆಲಂಗಾಣ ಬಜೆಟ್ 2026: ಆರೋಗ್ಯ ಕ್ಷೇತ್ರಕ್ಕೆ ಭಾರೀ ಉತ್ತೇಜನ—₹1286 ಕೋಟಿ ಹೆಚ್ಚಳ!

    “ತೆಲಂಗಾಣ ಆರೋಗ್ಯ ಬಜೆಟ್ 2026” ಈಗ ರಾಜ್ಯ ರಾಜಕೀಯ ಹಾಗೂ ಸಾರ್ವಜನಿಕರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆರೋಗ್ಯ ಸೇವೆಗಳನ್ನು ಬಲಪಡಿಸಲು ಸರ್ಕಾರ ದೊಡ್ಡ ಮಟ್ಟದ ಹೂಡಿಕೆ ಮಾಡಿದ್ದು, ಹೆಚ್ಚುವರಿ ₹1286 ಕೋಟಿ ಅನುದಾನ...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading