ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಅಸಮಾಧಾನ ಇರುವುದು ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಅಕ್ಷರಶಃ ಸತ್ಯ ಎಂಬುದು ಬಯಲಾಗಿದೆ. ಪಕ್ಷದಲ್ಲಿ ಎದ್ದಿರುವ ಅಸಮಾಧಾನದ ಹೊಗೆಯನ್ನು ಹೋಗಲಾಡಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರೇ ಆಗಮಿಸುವ ಮಟ್ಟಕ್ಕೆ ಪರಿಸ್ಥಿತಿ ತಲುಪಿದೆ.
ವಸತಿ ಯೋಜನೆಯಲ್ಲಿ ಮನೆ ವಿತರಣೆಗೆ ಹಣ ಪಡೆಯಲಾಗುತ್ತದೆ ಎಂದು ಗಂಭೀರ ಭ್ರಷ್ಟಾಚಾರ ಆರೋಪ ಮಾಡಿದ್ದ ಆಳಂದ ಶಾಸಕ ಬಿಆರ್ ಪಾಟೀಲ್ ಭಾರೀ ವಿವಾದವನ್ನೇ ಎಬ್ಬಿಸಿದ್ದರು. ಹೀಗೆ ಪಕ್ಷದ ವಿರುದ್ಧವೇ ಮಾತನಾಡಿದ್ದ ಬಿಆರ್ ಪಾಟೀಲ್ ಇದೀಗ ಸಿದ್ದರಾಮಯ್ಯನವರ ಕುರಿತು ಮಾತನಾಡಿರುವ ವಿಡಿಯೊವೊಂದು ಲೀಕ್ ಆಗುವ ಮೂಲಕ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ ʼಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ ಮುಖ್ಯಮಂತ್ರಿಯಾದ. ಸಿದ್ದರಾಮಯ್ಯಗೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿಸಿದ್ದು ನಾನು. ಅವನ ಗ್ರಹಚಾರ ಚೆನ್ನಾಗಿತ್ತು ಅವನು ಆಗಿಬಿಟ್ಟ. ನಮಗೆ ಗಾಡು ಇಲ್ಲ, ಗಾಡ್‌ಫಾದರ್ ಇಲ್ಲʼ ಎಂದು ಹೇಳಿದ್ದರು.
ಈ ಹೇಳಿಕೆ ವೈರಲ್ ಆದ ಬೆನ್ನಲ್ಲೇ ಇದೀಗ ಬಿಆರ್ ಪಾಟೀಲ್ ಪ್ರತಿಕ್ರಿಯಿಸಿದ್ದು ʼಕೆಆರ್ ಪೇಟೆಯಲ್ಲಿ ಆತ್ಮೀಯ ಸ್ನೇಹಿತರ ಜತೆ ಮಾತನಾಡುವಾಗ ಸಿದ್ದರಾಮಯ್ಯನವರ ಹೆಸರು ಪ್ರಸ್ತಾಪವಾದಾಗ ನಾನು ಕೆಲವೊಂದು ಅವರ ಬಗ್ಗೆ ಮಾತನಾಡಿದ್ದೇನೆ. ಲಕ್ಕಿ ಲಾಟರಿ ಹೊಡೆದು ಸಿಎಂ ಆದ್ರು ಎಂದು ಹೇಳಿದೆ. ನಾನು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿಸಿದ್ದೇನೆ ಅಂತಾ ಹೇಳಿರೋದು ತಪ್ಪು. ಸೋನಿಯಾ ಗಾಂಧಿ ಭೇಟಿಯಾದಾಗ ಅವರ ಜೊತೆಗೆ ಹೋಗಿದ್ದೆ. ಅವರು ಸೋನಿಯಾ ಗಾಂಧಿ ಭೇಟಿ ಈ ಸಲ ಬೇಡ ಅಂತಿದ್ರು. ನಾನೇ ಒತ್ತಾಯ ಮಾಡಿ ಸೋನಿಯಾ ಗಾಂಧಿಯನ್ನು ಭೇಟಿ ಮಾಡೋಕೆ ಹೇಳಿದಾಗ ಹೋದ್ರು. ಅವರೊಬ್ಬರು ಮಾಸ್ ಲೀಡರ್. ಅವರು ಮುಖ್ಯಮಂತ್ರಿ ಮಾಡುವ ಶಕ್ತಿ ನನಗಿಲ್ಲ. ಅವರು ಮತ್ತು ನನ್ನ ಸಂಬಂಧವನ್ನು ಹಾಳು ಮಾಡೋಕೆ ಈ ರೀತಿ ಮಾಡುತ್ತಿದ್ದಾರೆ. ಜನಬೆಂಬಲದಿಂದ ಅವರು ಮುಖ್ಯಮಂತ್ರಿಯಾಗಿದ್ದಾರೆಯೇ ಹೊರತು ನಾವು ಹೇಳಿದ್ದರಿಂದ ಮುಖ್ಯಮಂತ್ರಿಯಾಗಿಲ್ಲʼ ಎಂದು ಹೇಳಿಕೆ ನೀಡಿ ಉಲ್ಟಾ ಹೊಡೆದಿದ್ದಾರೆ.
2025ರ ಮೊದಲ 6 ತಿಂಗಳಲ್ಲಿ ಕನ್ನಡ ಚಿತ್ರಗಳು ಮಾಡಿದ ಕಲೆಕ್ಷನ್; ಇಷ್ಟೇ ಸಾಕಾ?
ಕೃಷಿ ಕನ್ನಡ ಎಐ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


