ಬೆಂಗಳೂರು: ಇತ್ತೀಚೆಗಷ್ಟೆ ಕರ್ನಾಟಕ ರಾಜ್ಯ ಸರ್ಕಾರ ರಾಜ್ಯಾದ್ಯಂತ ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ಬೈಕ್ ಟ್ಯಾಕ್ಸಿ ಸೇವೆಗೆ ಅನುಮೋದನೆಯನ್ನು ನೀಡಿದೆ.
ಇದೇ ಮೊದಲ ಬಾರಿಗೆ ಬೈಕ್ ಟ್ಯಾಕ್ಸಿ ಸೇವೆಗಳಿಗೆ ಅನುಮೋದನೆಯನ್ನು ನೀಡಿರುವ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನೂ ಸಹ ನೀಡಿದೆ.
ವಾಣಿಜ್ಯೇತರ ಖಾಸಗಿ ಬೈಕ್‌ಗಳನ್ನು ಬಳಸಿ ಗ್ರಾಹಕರಿಗೆ ಬೈಕ್ ಟ್ಯಾಕ್ಸಿ ಸೇವೆ ನೀಡಬಹುದು, ಸಾರ್ವಜನಿಕರಿಗೆ ಅಗ್ರಿಗೇಟರ್ ಸೇವೆಗಳನ್ನು ನೀಡಬಹುದು ಎಂದು ತಿಳಿಸಿದೆ. ಆದರೆ ಇದಕ್ಕೆ ಆಯಾ ರಾಜ್ಯ ಸರ್ಕಾರಗಳ ಅನುಮತಿ ಕಡ್ಡಾಯ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸದ್ಯ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಬ್ಯಾನ್ ಆಗಿದ್ದು, ಗ್ರಾಹಕರಿಂದ ಈಗಾಗಲೇ ಬೈಕ್ ಟ್ಯಾಕ್ಸಿ ಪುನರಾಂಭಿಸಿ ಎಂದು ಕಿಡಿಕಾರಿದ್ದಾರೆ. ದೊಡ್ಡ ಮಟ್ಟದ ಸಂಬಳ ಪಡೆಯುವವರು ಆಟೊ, ಟ್ಯಾಕ್ಸಿ ಬಳಸುತ್ತಾರೆ, ಆದರೆ ಕಡಿಮೆ ಸಂಬಳ ಪಡೆಯುವವರ ತುರ್ತು ಚಾಲನೆಗೆ ಬೈಕ್ ಟ್ಯಾಕ್ಸಿಗಳೇ ಆಸರೆಯಾಗಿದ್ದವು ಎಂದು ಮಧ್ಯಮ ವರ್ಗದ ಮಂದಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.
2025ರ ಮೊದಲ 6 ತಿಂಗಳಲ್ಲಿ ಕನ್ನಡ ಚಿತ್ರಗಳು ಮಾಡಿದ ಕಲೆಕ್ಷನ್; ಇಷ್ಟೇ ಸಾಕಾ?
ಎಐ ಕೃಷಿ ಕನ್ನಡ ವೆಬ್‌ಸೈಟ್‌ಗೆ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


