Friday, March 20, 2026
spot_img
More
    spot_img
    HomeSportsCricketFact Check: ಪಹಲ್ಗಾಮ್‌ ದಾಳಿಯನ್ನು ಭಾರತದವರೇ ಮಾಡಿದ್ದು, ಮೋದಿ ಎಂಥ ಚೈಲ್ಡ್‌ ಎಂದ ಅಫ್ರಿದಿ!

    Fact Check: ಪಹಲ್ಗಾಮ್‌ ದಾಳಿಯನ್ನು ಭಾರತದವರೇ ಮಾಡಿದ್ದು, ಮೋದಿ ಎಂಥ ಚೈಲ್ಡ್‌ ಎಂದ ಅಫ್ರಿದಿ!

    ಬೆಂಗಳೂರು: ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಭಾರತದ ಸೇನೆ ಆಪರೇಷನ್‌ ಸಿಂಧೂರ್‌ ನಡೆಸಿ ಪಾಕ್‌ನಲ್ಲಿನ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು. ಈ ಸಮಯಲ್ಲಿ ಭಾರತ ಸರ್ಕಾರ ಪಾಕಿಸ್ತಾನ ಮೂಲದ ನ್ಯೂಸ್‌ ಚಾನೆಲ್‌ಗಳು, ಯುಟ್ಯೂಬ್‌ ಚಾನೆಲ್‌ಗಳು, ಸೆಲೆಬ್ರಿಟಿ ಹಾಗೂ ಕ್ರಿಕೆಟಿಗರ ಸಾಮಾಜಿಕ ಜಾಲತಾಣದ ಖಾತೆಗಳನ್ನು ಬ್ಯಾನ್‌ ಮಾಡಿತ್ತು.

    ಏಪ್ರಿಲ್‌ ತಿಂಗಳಿನಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿತ್ತು. ಆದರೆ ಈ ನಿಷೇಧವನ್ನು ಇದೀಗ ಕೇಂದ್ರ ಸರ್ಕಾರ ವಾಪಸ್‌ ಪಡೆದಿದ್ದು, ಬ್ಯಾನ್‌ ಆಗಿದ್ದ ಪಾಕ್‌ನ ಸುದ್ದಿ ವಾಹಿನಿಗಳು, ಯುಟ್ಯೂಬ್‌ ಚಾನೆಲ್‌ಗಳು ಹಾಗೂ ಸೆಲೆಬ್ರಟಿಗಳ ಖಾತೆಗಳು ಇದೀಗ ಮತ್ತೆ ಭಾರತದಲ್ಲಿ ಲಭ್ಯವಾಗಿವೆ.

    ಹೀಗೆ ಕೇಂದ್ರ ಸರ್ಕಾರ ವಿಧಿಸಿದ್ದ ಬ್ಯಾನ್‌ ತೆರವಾಗಿರುವುದರ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪಾಕ್‌ನ ಕ್ರಿಕೆಟಿಗ ಶಾಹಿದ್‌ ಅಫ್ರಿದಿ ಹೆಸರಿನಲ್ಲಿ ಮೋದಿಗೆ ತೆಗಳಿರುವ ಇನ್ಸ್ಟಾಗ್ರಾಮ್‌ ಸ್ಟೋರಿ ಸಹ ವೈರಲ್‌ ಆಗಿದೆ. ಆಪರೇಷನ್‌ ಸಿಂಧೂರ್‌ ವೇಳೆ ಬ್ಯಾನ್‌ ಆದ ಖಾತೆಗಳ ಪೈಕಿ ಶಾಹಿದ್‌ ಅಫ್ರಿದಿ ಅವರ ಸಾಮಾಜಿಕ ಜಾಲತಾಣದ ಖಾತೆಗಳು ಹಾಗೂ ಯುಟ್ಯೂಬ್‌ ಚಾನೆಲ್‌ ಸಹ ಸೇರಿತ್ತು.

    ಇದೀಗ ಶಾಹಿದ್‌ ಅಫ್ರಿದಿ ಖಾತೆ ಪುನಃ ಬಂದಿದ್ದು, ಎಕ್ಸ್‌ ಖಾತೆಯಲ್ಲಿ ಅಫ್ರಿದಿ ಇನ್ಸ್ಟಾಗ್ರಾಮ್‌ ಸ್ಟೋರಿಯಲ್ಲಿ ʼಭಾರತ ಸರ್ಕಾರ ನನ್ನ ಖಾತೆಯ ಮೇಲೆ ಹೇರಿದ್ದ ನಿಷೇಧವನ್ನು ವಾಪಸ್‌ ಪಡೆದಿದೆ. ಪಹಲ್ಗಾಮ್‌ ದಾಳಿಯನ್ನು ಅವರ ದೇಶದವರೇ ಮಾಡಿದ್ದು ಎಂಬುದು ಅವರಿಗೆ ಅರಿವಾಗಿರಬೇಕು. ಭಾರತ ಸರ್ಕಾರಕ್ಕೆ ನನ್ನದೊಂದು ಸಲಹೆ. ಕಾಶ್ಮೀರದ ಸಮಸ್ಯೆ ಬಗೆಹರಿಯಬೇಕೆಂದರೆ ಕಾಶ್ಮೀರವನ್ನು ಪಾಕ್‌ಗೆ ಕೊಟ್ಟುಬಿಡಿ. ಮೊದಲು ನಮ್ಮ ಖಾತೆಗಳನ್ನು ಮಾಡಿ ಈಗ ತೆರೆದಿರುವ ಮೋದಿ ಎಂಥ ಕಿಡ್‌ʼ ಎಂದು ಬರೆದುಕೊಂಡಿದ್ದಾರೆ ಎಂಬ ಸ್ಕ್ರೀನ್‌ಶಾಟ್‌ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

    ಆದರೆ ಅಸಲಿಯತ್ತೇನೆಂದರೆ ಇದೊಂದು ನಕಲಿ ಸ್ಕ್ರೀನ್‌ಶಾಟ್‌, ಶಾಹಿದ್‌ ಅಫ್ರಿದಿ ಖಾತೆ ಮೇಲಿನ ಬ್ಯಾನ್‌ ತೆರವಾಗಿರುವುದು ನಿಜ, ಆದರೆ ಅಫ್ರಿದಿ ಇಂತಹ ಸ್ಟೋರಿ ಬರೆದುಕೊಂಡಿಲ್ಲ. ಕಿಡಿಗೇಡಿಗಳು ನಕಲಿ ಸ್ಟೋರಿ ಸೃಷ್ಟಿಸಿದ್ದಾರೆ.

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ಆಪರೇಷನ್‌ ಸಿಂಧೂರ್‌ ವೇಳೆ ಪಾಕ್‌ ಚಾನೆಲ್‌ಗಳ ಮೇಲೆ ಹೇರಿದ್ದ ನಿಷೇಧ ಹಿಂಪಡೆದ ಕೇಂದ್ರ ಸರ್ಕಾರ!


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    KVS ಪ್ರವೇಶ 2026: ಅರ್ಜಿ ಪ್ರಕ್ರಿಯೆ ಶುರು!

    “KVS ಪ್ರವೇಶ 2026” ಇದೀಗ ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೇಂದ್ರೀಯ ವಿದ್ಯಾಲಯ ಸಂಘಟನೆ (KVS) 2026-27 ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆಯನ್ನು ಅಧಿಕೃತವಾಗಿ ಆರಂಭಿಸಿದೆ. ಆಸಕ್ತ ಪೋಷಕರು ಇದೀಗ...

    ಬ್ರೇಕಿಂಗ್! ದೆಹಲಿ EV ಪಾಲಿಸಿ 2.0: 2030ರವರೆಗೆ 100% ರೋಡ್ ಟ್ಯಾಕ್ಸ್ ಫ್ರೀ—₹1 ಲಕ್ಷವರೆಗೆ ಲಾಭ!

    “ದೆಹಲಿ EV ಪಾಲಿಸಿ 2.0” ಈಗ ದೇಶದ ವಾಹನ ಮಾರುಕಟ್ಟೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ದೆಹಲಿ ಸರ್ಕಾರ ಭರ್ಜರಿ ಸೌಲಭ್ಯಗಳನ್ನು ಘೋಷಿಸಿದ್ದು, ವಾಹನ ಖರೀದಿದಾರರಿಗೆ ದೊಡ್ಡ ಬೂಸ್ಟ್...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading