ಬೆಂಗಳೂರು: ಜುಲೈ 1ರಂದು ʼವೈದ್ಯರ ದಿನಾಚರಣೆʼ ಪ್ರಯುಕ್ತ ಗಿರಿನಗರ ರೋಟರಿ ಕ್ಲಬ್ ವತಿಯಿಂದ ಆಯುರ್ವೇದ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಡಾ ಪ್ರಿಯಾ ಪೂಜಾರ್ ಅವರನ್ನು ಸನ್ಮಾನಿಸಿದೆ. ವೈದ್ಯರ ದಿನಾಚರಣೆಯಂದು ಆಯುರ್ವೇದ ವೈದ್ಯರಿತೆ ಸನ್ಮಾನಿಸಿದ ರೋಟರಿ ಕ್ಲಬ್‌ನ ಯೋಚನೆ ವಿಭಿನ್ನ ಹಾಗೂ ಮನ್ನಣೆ ಪಡೆದುಕೊಂಡಿತು.
ಕ್ಲಿನಿಕ್ ತೆರೆಯದೆ ಮನೆಯಲ್ಲಿಯೇ ಜನರನ್ನು ಗುಣಮುಖರನ್ನಾಗಿ ಮಾಡುತ್ತಾ, ಆಯುರ್ವೇದವನ್ನು ವರ್ಕ್ ಫ್ರಮ್ ಹೋಮ್ ಮಾಡುತ್ತಾ ಬೆಳೆಸುತ್ತಿರುವ ಧೀಮಂತ ವೈದ್ಯೆ ಪ್ರಿಯಾ ಪೂಜಾರ್ ಆಯುರ್ವೇದ ಎಂಡಿಯಲ್ಲಿ ರಾಂಕ್ ಹೋಲ್ಡರ್ ಆಗಿದ್ದು, ಚಳ್ಳಕೆರೆ ಮೈಸೂರು ಬೆಂಗಳೂರುಗಳಲ್ಲಿ ಅಳಿಲು ಸೇವೆಯಂತೆ ಆಯುರ್ವೇದ ಜಾಗೃತಿಯ ಕೆಲಸವನ್ನು 15 ವರ್ಷಗಳಿಂದ ನಡೆಸಿದ್ದಾರೆ.
ಒಂದು ದಿನ ದೊಡ್ಡದಾದ ಆಯುರ್ವೇದಿಕ್ ರಿಸರ್ಚ್ ಸೆಂಟರ್ ತೆಗೆದು, ಆಯುರ್ವೇದ ಎನ್ನುವ ಹೊಸಜೀವನ ಪದ್ಧತಿಯನ್ನು ಭಾರತೀಯರಿಗೆ ಮತ್ತು ಇಡೀ ವಿಶ್ವಕ್ಕೆ ಪರಿಚಯಿಸಬೇಕು ಎಂಬುದು ಇವರ ಕನಸಾಗಿದೆ. ವೇಟ್ ಲಾಸ್, ಒಬೆಸಿಟಿ, ಹೈಪೋಥೈರಾಯ್ಡಿಸ್ಮ್, ಡಯಾಬಿಟೀಸ್, ಪಿಸಿಒಎಸ್ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ನಮ್ಮದೇ ಆದ ಆಯುರ್ವೇದದ ಮೂಲಕ ಪರಿಹಾರ ಒದಗಿಸಬೇಕು ಎಂಬುದು ಇವರ ಯೋಚನೆ. ರೋಟರಿ ಅಂತಹ ಸಂಸ್ಥೆಗಳು ಇದನ್ನು ಪ್ರಪಂಚದಾದ್ಯಂತ ಮಾಡಿದಲ್ಲಿ ಒಂದು ಸುವರ್ಣ “ಆಯುರ್” ಯುಗವು ಬರುವುದೆಂದು ಅವರ ಬಲವಾದ ನಂಬಿಕೆ.
ಪ್ರೋಗ್ರಾಮ್ ನಲ್ಲಿ ಇವರನ್ನು ಸನ್ಮಾನಿಸಿದ ಬಸವನಗುಡಿಯ ಎಂಎಲ್ಎ ಆದ ರವಿ ಸುಬ್ರಹ್ಮಣ್ಯ ಅವರು ಆಯುರ್ವೇದವು ಬೆಳೆಯಲಿದೆ ಎನ್ನುವ ದಿಕ್ಸೂಚಿಯನ್ನು ಕೊಡುತ್ತಾ ಡಾಕ್ಟರ್ ಪ್ರಿಯಾರನ್ನು ಇದೇ ಮಾರ್ಗದಲ್ಲಿ ದೇಶ ಸೇವೆ ಮಾಡಿ ಎಂದು ಹುರಿದುಂಬಿಸಿದರು.
ಡಾ. ಪ್ರಿಯ ರವರ ಆಯುರ್ವೇ ಜೀವನ ಪದ್ಧತಿಯ ರುಚಿ ಸವಿಯಲು ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳಿಗೆ, ಕಡಿಮೆ ಖರ್ಚಿನಲ್ಲಿ ಪರಿಹಾರ ಕಂಡುಕೊಳ್ಳಲು ಕೆಳಗಿನ ಲಿಂಕ್ ಅಲ್ಲಿ ಅವರನ್ನು ಸಂಪರ್ಕಿಸಬಹುದು.
AyurWay On WhatsApp – http://wa.me/917760742391
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
ರಾಮಾಯಣ ಗ್ಲಿಂಪ್ಸ್ ಬಿಡುಗಡೆ: ರಾವಣನ ಪ್ರತೀಕಾರ vs ರಾಮನ ಧರ್ಮದ ಯುದ್ಧ; ಹೇಗಿದೆ ಗ್ಲಿಂಪ್ಸ್?
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


