Thursday, November 5, 2026
spot_img
More
    spot_img
    HomeLatest newsಬ್ರಹ್ಮಾಚಾರಿಗಳಿಗೆ ಹನುಮಂತ, ಇಬ್ಬರನ್ನು ಮದುವೆಯಾದವರಿಗೆ ಇನ್ನೊಬ್ಬ ದೇವರಿದ್ದಾನೆ: ಹಿಂದೂ ದೇವರುಗಳ ಬಗ್ಗೆ ರೇವಂತ್ ರೆಡ್ಡಿ ಜೋಕ್;...

    ಬ್ರಹ್ಮಾಚಾರಿಗಳಿಗೆ ಹನುಮಂತ, ಇಬ್ಬರನ್ನು ಮದುವೆಯಾದವರಿಗೆ ಇನ್ನೊಬ್ಬ ದೇವರಿದ್ದಾನೆ: ಹಿಂದೂ ದೇವರುಗಳ ಬಗ್ಗೆ ರೇವಂತ್ ರೆಡ್ಡಿ ಜೋಕ್; ವಿಡಿಯೊ

    ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಿಂದೂ ದೇವರುಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕಿಡಿಕಾರಿದ್ದಾರೆ. ಕಾರ್ಯಕ್ರಮವೊಂದರ ವೇದಿಕೆ ಮೇಲೆ ರೇವಂತ್ ರೆಡ್ಡಿ ಒಟ್ಟಾರೆ ಹಿಂದೂ ಸಮುದಾಯ ಪೂಜಿಸುವ ಮೂರು ಕೋಟಿ ದೇವರುಗಳನ್ನು ಕಾಂಗ್ರೆಸ್ ಪಕ್ಷದ ರಚನೆ ಬಗ್ಗೆ ಉದಾಹರಣೆಯನ್ನಾಗಿ ತೆಗೆದುಕೊಂಡು ಮಾತನಾಡಿದ್ದು ಇದು ಹಿಂದೂಗಳ ಭಾವನೆಗೆ ಧಕ್ಕೆಯುಂಟಾಗಿದೆ ಎಂಬ ಆರೋಪ ಕೇಳಿಬಂದಿದೆ.

    ಕಾಂಗ್ರೆಸ್‌ ದೊಡ್ಡ ಇತಿಹಾಸ ಇರುವ ಪಕ್ಷ, ಇಲ್ಲಿ ಎಲ್ಲ ರೀತಿಯ ನಾಯಕರೂ ಸಹ ಇದ್ದಾರೆ ಎಂದ ರೇವಂತ್ ರೆಡ್ಡಿ ಅದಕ್ಕೆ ಹಿಂದೂ ದೇವರುಗಳನ್ನು ಉದಾಹರಣೆಯನ್ನಾಗಿ ನೀಡಿದರು.

    ‘ಹಿಂದೂಗಳು ಎಷ್ಟು ದೇವರನ್ನು ನಂಬುತ್ತಾರೆ? ಮೂರು ಕೋಟಿನಾ? ಯಾಕೆ ಅಷ್ಟೊಂದು ದೇವರುಗಳಿದ್ದಾರೆ? ಮದುವೆಯಾಗದವರಿಗೆ ಒಬ್ಬ ದೇವರಿದ್ದಾನೆ ಹನುಮಂತ. ಇಬ್ಬರನ್ನು ಮದುವೆಯಾದವರಿಗೆ ಇನ್ನೊಬ್ಬ ದೇವರಿದ್ದಾನೆ. ಹಾಗೆಯೇ ಮದ್ಯಪಾನ ಮಾಡುವವರಿಗೆ ಮತ್ತೊಂದು ದೇವರು. ಕೋಳಿ ಬಲಿ ಕೊಡುವುದಕ್ಕೆ ಒಂದು ದೇವರು ಹಾಗೂ ಅನ್ನ ದಾಲ್‌ಗೆ ಮತ್ತೊಂದು ದೇವರು. ಪ್ರತಿ ಗುಂಪಿಗೂ ಒಂದು ದೇವರು’ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.

    ಹೀಗೆ ಹಿಂದೂಗಳಲ್ಲಿ ಎಷ್ಟು ವಿಭಿನ್ನ ದೇವರುಗಳಿದ್ದಾರೋ ಹಾಗೆಯೇ ಕಾಂಗ್ರೆಸ್ ಪಕ್ಷದಲ್ಲೂ ಸಹ ವಿಭಿನ್ನ ಮನಸ್ಥಿತಿ ಇರುವ ನಾಯಕರಿದ್ದಾರೆ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ. ಆದರೆ ಈ ಹೇಳಿಕೆ ಹಿಂದೂಗಳನ್ನು ಹಾಗೂ ವಿಪಕ್ಷಗಳನ್ನು ಕೆರಳಿಸಿದ್ದು, ರೇವಂತ್ ರೆಡ್ಡಿ ಕ್ಷಮೆಯಾಚಿಸಬೇಕು ಎಂದು ಪಟ್ಟುಹಿಡಿದಿದ್ದಾರೆ.

    ಇದೇ ರೇವಂತ್ ರೆಡ್ಡಿ ಈ ಹಿಂದೆ ದೇವರ ಫೋಟೊ ಹಿಡಿದು ಏನನ್ನಾದರೂ ಪಡೆಯುವ ನಿರೀಕ್ಷೆ ಹೊಂದಿರುವವರು ಹಿಂದೂಗಳಲ್ಲ ಭಿಕ್ಷುಕರು ಎಂದೂ ಸಹ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು.

    ಯುವಕನಿಂದ ಲೈಂಗಿಕ ಕಿರುಕುಳ: ನಟಿ ಆಶಿಕಾ ರಂಗನಾಥ್ ಮಾವನ ಮಗಳು ಆತ್ಮಹತ್ಯೆ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search