Monday, August 3, 2026
spot_img
More
    spot_img
    HomeEntertainmentರೇಣುಕಾಸ್ವಾಮಿ ಕೇಸ್: ಬೇರೆಯವರ ಬಗ್ಗೆ ನನಗೆ ಗೊತ್ತಿಲ್ಲ, ಎ1 ಬಿಡುಗಡೆಯಾಗ್ತಾರೆ; ಪವಿತ್ರಾ ಗೌಡ ವಕೀಲರ ವಿಶ್ವಾಸ!

    ರೇಣುಕಾಸ್ವಾಮಿ ಕೇಸ್: ಬೇರೆಯವರ ಬಗ್ಗೆ ನನಗೆ ಗೊತ್ತಿಲ್ಲ, ಎ1 ಬಿಡುಗಡೆಯಾಗ್ತಾರೆ; ಪವಿತ್ರಾ ಗೌಡ ವಕೀಲರ ವಿಶ್ವಾಸ!

    ಬೆಂಗಳೂರು: ನಿನ್ನೆಯಷ್ಟೇ ( ನವೆಂಬರ್‌ 3 ) ಬೆಂಗಳೂರಿನ 64ನೇ ಸಿಸಿಎಚ್‌ ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎಲ್ಲ 17 ಆರೋಪಿಗಳಿಗೂ ದೋಷಾರೋಪ ನಿಗದಿ ಮಾಡಲಾಯಿತು.

    Advertisement

    ಪ್ರಕರಣದಲ್ಲಿ ಯಾರ ಪಾತ್ರವೇನು, ಯಾರ ವಿರುದ್ಧ ಯಾವೆಲ್ಲ ದೂರು ದಾಖಲಾಗಿದೆ ಎಂಬುದನ್ನು ನ್ಯಾಯಾಧೀಶರು ಓದಿ ಹೇಳಿದ್ದು, ಎಲ್ಲ ಆರೋಪಿಗಳು ನಿರೀಕ್ಷೆಯಂತೆ ತಮಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂದಿದ್ದಾರೆ.

    ಇನ್ನು ದೋಷಾರೋಪ ನಿಗದಿಯಾದ ಬಳಿಕ ದರ್ಶನ್‌, ಪವಿತ್ರಾ ಗೌಡ ಸೇರಿ ಜೈಲಿನಲ್ಲಿದ್ದ ಆರೋಪಿಗಳು ಮತ್ತೆ ಪರಪ್ಪನ ಅಗ್ರಹಾರ ಸೇರಿದ್ದಾರೆ. ಹೀಗೆ ದೋಷಾರೋಪ ನಿಗದಿಯಾದ ಬಳಿಕ ಆರೋಪಿಗಳ ವಕೀಲರು ತಮ್ಮ ಕಕ್ಷೀಧಾರರ ಪರ ವಾದ ಮಂಡಿಸಲಿದ್ದು, ಸರ್ಕಾರಿ ವಕೀಲರು ಪೊಲೀಸರ ಪರ ವಾದ ಮಾಡಲಿದ್ದಾರೆ. ಡಿಜಿಟಲ್‌ ಸಾಕ್ಷಿ, ಪ್ರತ್ಯಕ್ಷ ಸಾಕ್ಷಿ ಹೀಗೆ ಎಲ್ಲ ರೀತಿಯ ಸಾಕ್ಷಿಗಳನ್ನು ನ್ಯಾಯಾಧೀಶರು ಪರಿಶೀಲಿಸಲಿದ್ದಾರೆ.

    ಈ ಕುರಿತು ಪವಿತ್ರಾ ಗೌಡ ಪರ ವಾದ ಮಂಡಿಸಲಿರುವ ವಕೀಲ ಬಾಲನ್‌ ಕರ್ನಾಟಕ ಟಿವಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದು, ವಾದ ಹೇಗೆ ನಡೆಯಲಿದೆ, ನ್ಯಾಯಾಧೀಶರು ಎನೆಲ್ಲ ಪರಿಶೀಲಿಸಲಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ ಹೆಚ್ಚು ದುಡ್ಡಿದ್ದರೆ ಒಳ್ಳೆಯ ವಕೀಲರನ್ನು ನೇಮಿಸಿಕೊಳ್ಳಬಹುದು ಎಂಬುದರ ಕುರಿತೂ ಸಹ ಮಾತನಾಡಿರುವ ಬಾಲನ್‌ ಬೇರೆ ಆರೋಪಿಗಳ ಬಗ್ಗೆ ನನಗೆ ಗೊತ್ತಿಲ್ಲ, ಆದರೆ ಎ1 ಬಿಡುಗಡೆಯಾಗಲಿದ್ದಾರೆ ಎಂಬುದನ್ನು ನಾನು ಹೇಳಬಲ್ಲೆ ಎಂದು ಹೇಳಿಕೊಂಡಿದ್ದಾರೆ.

    ಈ ಮೂಲಕ ಪವಿತ್ರಾ ಗೌಡ ಪರ ವಾದ ಮಂಡಿಸಿ ಅವರನ್ನು ನಿರಪರಾಧಿಯನ್ನಾಗಿ ಹೊರತರುವ ಬಗ್ಗೆ ಬಾಲನ್‌ ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ.

    ಶಿವ ನನ್ನ ಕೈನಲ್ಲಿ ಮಾಡಿಸಿದ್ದಾನೆ ಎಂದು ಚನ್ನಪಟ್ಟಣದಲ್ಲಿ ಸಂಪೂರ್ಣ ಹಣ ಹಾಕಿ ಬೃಹತ್‌ ದೇವಸ್ಥಾನ ನಿರ್ಮಿಸಿದ ಮುಸ್ಲಿಂ ನಾಯಕ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading