Monday, November 2, 2026
spot_img
More
    spot_img
    HomeLatest newsದೇಶ ಬಿಟ್ಟು ತೊಲಗಿ, ಸನಾತನಕ್ಕಾದ್ರೂ ಹೋಗಿ, ಮನುಸ್ಮೃತಿಗಾದ್ರೂ ಹೋಗಿ; ಲಿಂಗಾಯತರನ್ನು ತಾಲಿಬಾನಿಗಳು ಎಂದ ಕನ್ನೇರಿ ಶ್ರೀ...

    ದೇಶ ಬಿಟ್ಟು ತೊಲಗಿ, ಸನಾತನಕ್ಕಾದ್ರೂ ಹೋಗಿ, ಮನುಸ್ಮೃತಿಗಾದ್ರೂ ಹೋಗಿ; ಲಿಂಗಾಯತರನ್ನು ತಾಲಿಬಾನಿಗಳು ಎಂದ ಕನ್ನೇರಿ ಶ್ರೀ ವಿರುದ್ಧ ಕಾಶಪ್ಪನವರ್ ಕಿಡಿ

    ರಾಯಬಾಗದ ಹನುಮ ಮಾಲಾ ದೀಕ್ಷಾ ಸಮಾರಂಭದಲ್ಲಿ ಮಾತನಾಡಿದ್ದ ಕನ್ನೇರಿ ಶ್ರೀ ಹನುಮ ಮಾಲೆಯ ಕುರಿತು ಪ್ರಸ್ತಾಪಿಸಿ ಬಸವ ತಾಲಿಬಾನಿಗಳು ಎಂದು ಹೇಳಿಕೆಯನ್ನು ನೀಡಿ ಭಾರೀ ವಿವಾದ ಎಬ್ಬಿಸಿದ್ದರು. ಇದು ಲಿಂಗಾಯತ ಸಮುದಾಯವನ್ನು ಕೆರಳಿಸಿತ್ತು.

    ಹನುಮ ಮಾಲೆಯ ಕುರಿತು ಯಾರೂ ಟೀಕೆ ಮಾಡಬಾರದು ಎಂದಿದ್ದ ಕನ್ನೇರಿ ಶ್ರೀ ಕಮ್ಯೂನಿಸ್ಟರು ಹಾಗೂ ನಮ್ಮಂತಹ ಬಟ್ಟೆ ಹಾಕಿಕೊಂಡ ಬಸವ ತಾಲಿಬಾನಿಗಳು ನಿಮ್ಮ ಮೇಲೆ ಟೀಕೆ ಮಾಡಬಹುದು. ಏಕೆಂದರೆ ಅವರು ಹಿಂದೆ ಬೇರೆ ಬೇರೆ ಸಂಪ್ರದಾಯಗಳ ಮೇಲೆ ಸಿಕ್ಕಾಪಟ್ಟೆ ಟೀಕೆ ಮಾಡಿದ್ದಾರೆ, ನಿಮ್ಮ ಮೇಲೂ ಟೀಕೆ ಮಾಡಬಹುದು ಎಂದಿದ್ದರು.

    ಈ ಹೇಳಿಕೆಗೆ ಹಲವರು ಪ್ರತಿಕ್ರಿಯಿಸಿ ಕಿಡಿಕಾರಿದ್ದು, ಇದೀಗ ವೀರಶೈವ – ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ್ ಮಾತನಾಡಿ ಕನ್ನೇರಿ ಶ್ರೀ ವಿರುದ್ಧ ಕಿಡಿಕಾರಿದ್ದಾರೆ.

    ಕನ್ನೇರಿ ಸ್ವಾಮಿಗಳಿಗೆ ಹುಚ್ಚು ಹಿಡಿದಿದೆ, ಮದ ಏರಿದೆ. ನಾನೇ ಶ್ರೇಷ್ಠ, ನಾನೇ ದೇವರು ಎನ್ನುವವರಿಗೆ ಏನು ಹೇಳುತ್ತೀರ? ಕನ್ನೇರಿ ಶ್ರೀ ಏನಾದರೂ ಆಕಾಶದಿಂದ ಇಳಿದು ಬಂದಿದ್ದಾನಾ? ಅವನೂ ಮನುಷ್ಯನಾಗಿಯೇ ಹುಟ್ಟಿದ್ದಾನೆ, ತಾಯಿ ಹೊಟ್ಟೆಯಲ್ಲೇ ಜನಿಸಿದ್ದಾನೆ. ಸ್ವಾಮಿಗಳು ಯಾರಾದರೂ ಮೇಲಿಂದ ಇಳಿದು ಬಂದಿದ್ದಾರಾ? ದೇವಮಾನವರು ಯಾರಾದರೂ ಇದ್ದಾರಾ? ಇವನೇನು ಬಾಯಿಗೆ ಬಂದ ಹಾಗೆ ಮಾತನಾಡುವುದು? ಇವೆಲ್ಲ ಮಾತನಾಡುವ ಮಾತುಗಳಾ? ಕಾವಿ ಬಿಟ್ಟು ಖಾದಿ ಹಾಕಿ ಬಂದು ಮಾತನಾಡಲು ಹೇಳಿ, ಮಾತನಾಡುತ್ತೇವೆ ಎಂದು ಕಿಡಿಕಾರಿದರು.

    ಇನ್ನೂ ಮುಂದುವರಿದು ಮಾತನಾಡಿದ ಕಾಶಪ್ಪನವರ್ ಬಾಯಿ ಇದೆ ಎಂದು ಮಾತನಾಡುತ್ತಾರೆ. ಎಲ್ಲಿಯವರೆಗೆ ಕೇಳುತ್ತಾರೆ ಒಂದು ದಿನ ಹೊಡೆಸಿಕೊಳ್ತಾರೆ. ಧರ್ಮದ ಬಗ್ಗೆ, ಯಾರ ಬಗ್ಗೆಯಾದರೂ ಮಾತನಾಡಿದರೆ ಜನ ಸುಮ್ಮನೆ ಬಿಡ್ತಾರಾ? ಖಾವಿ ಹಾಕಿಕೊಂಡು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದೀರಲ್ಲ ಈ ರಾಷ್ಟ್ರ ಬಿಟ್ಟು ತೊಲಗಿ. ಸನಾತನ ಧರ್ಮಕ್ಕಾದ್ರೂ ಹೋಗಿ, ಮನುಸ್ಮೃತಿಗಾದರೂ ಹೋಗಿ, ಯಾವ ಧರ್ಮ ಬೇಕಾದರೂ ಕಟ್ಟಿಕೊಂಡುಹೋಗಿ, ಪತ್ಯೇಕ ಮಾಡಿಕೊಳ್ಳಿ ಎಂದು ಆಕ್ರೋಶ ಹೊರಹಾಕಿದರು.

    ಬಾಡಿಗೆದಾರರಿಗೆ ಬಿಗ್ ರಿಲೀಫ್! ಇನ್ಮುಂದೆ 10 ತಿಂಗಳ ಠೇವಣಿ ಇಲ್ಲ, 2 ತಿಂಗಳ ಅಡ್ವಾನ್ಸ್ ಮಾತ್ರ: ಹೊಸ ನಿಯಮಗಳು ಜಾರಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search