Tuesday, March 24, 2026
spot_img
More
    spot_img
    HomeSportsCricketಜೈಸ್ವಾಲ್ ಶತಕ, ರೋ - ಕೊ ಅರ್ಧಶತಕ: ಸೌತ್ ಆಫ್ರಿಕಾ ಮಣಿಸಿ ಸರಣಿ ಗೆದ್ದ ಭಾರತ

    ಜೈಸ್ವಾಲ್ ಶತಕ, ರೋ – ಕೊ ಅರ್ಧಶತಕ: ಸೌತ್ ಆಫ್ರಿಕಾ ಮಣಿಸಿ ಸರಣಿ ಗೆದ್ದ ಭಾರತ

    ವಿಶಾಖಪಟ್ಟಣದಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳ ಗೆಲುವನ್ನು ದಾಖಲಿಸುವ ಮೂಲಕ ಸರಣಿಯನ್ನು 2 – 1 ಅಂತರದಿಂದ ವಶಪಡಿಸಿಕೊಂಡಿದೆ.

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 47.5 ಓವರ್‌ಗಳಲ್ಲಿ 270 ರನ್ ಕಲೆಹಾಕಿ ಆಲ್‌ಔಟ್ ಆಗಿ ಭಾರತಕ್ಕೆ 271 ರನ್‌ಗಳ ಸಾಧಾರಣ ಗುರಿ ನೀಡಿತು ಈ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಭಾರತ 39.5 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 271 ರನ್ ಕಲೆಹಾಕಿತು.

    ದಕ್ಷಿಣ ಆಫ್ರಿಕಾ ಇನ್ನಿಂಗ್ಸ್: ಮೊದಲ ಓವರ್‌ನಲ್ಲೇ ರಿಕಲ್ಟನ್ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಬಳಿಕ ಎರಡನೇ ವಿಕೆಟ್‌ಗೆ ಒಂದಾದ ಕ್ವಿಂಟನ್ ಡಿ ಕಾಕ್ ಹಾಗೂ ಟೆಂಬಾ ಬವುಮಾ ಜೋಡಿ ಶತಕದ ಜತೆಯಾಟವನ್ನಾಡಿ ಸುಧಾರಣೆ ತಂದರು. ಬವುಮ ವಿಕೆಟ್ ಬಳಿಕ ಡಿ ಕಾಕ್ ಒಂದೆಡೆ ಹೋರಾಟ ನಡೆಸಿದರೆ, ಇನ್ನುಳಿದ ಆಟಗಾರರು ಹೆಚ್ಚು ಹೊತ್ತು ಕಣದಲ್ಲಿರದೇ ವಿಕೆಟ್ ಒಪ್ಪಿಸಿದರು. ಭಾರತದ ಪರ ಪ್ರಸಿದ್ಧ್ ಕೃಷ್ಣ ಹಾಗೂ ಕುಲ್‌ದೀಪ್ ಯಾದವ್ ಅಗತ್ಯವಿದ್ದ ಸಮಯಕ್ಕೆ ಸರಿಯಾಗಿ ವಿಕೆಟ್ ಪಡೆದು ಹರಿಣಗಳು ರನ್ ಗಳಿಸಲು ತೆವಳುವಂತೆ ಮಾಡಿದರು.

    ದಕ್ಷಿಣ ಆಫ್ರಿಕಾ ಪರ ಕ್ವಿಂಟನ್ ಡಿ ಕಾಕ್ 106, ರಿಯಾನ್ ರಿಕಲ್ಟನ್ ಡಕ್‌ಔಟ್, ಟೆಂಬಾ ಬವುಮ 48, ಮ್ಯಾಥ್ಯೂ ಬ್ರೀಟ್ಜ್ಕೆ 24, ಏಡನ್ ಮಾರ್ಕ್ರಮ್ 1, ಡಿವಾಲ್ಡ್ ಬ್ರೆವಿಸ್ 29, ಮಾರ್ಕೊ ಯಾನ್ಸನ್ 17, ಕಾರ್ಬಿನ್ ಬಾಷ್ 9, ಲುಂಗಿ ಎನ್‌ಗಿಡಿ 1 , ಆಟ್‌ನೀಲ್ ಬಾರ್ಟ್‌ಮನ್ 3 ರನ್ ಹಾಗೂ ಕೇಶವ್ ಮಹಾರಾಜ್ ಅಜೇಯ 20 ರನ್ ದಾಖಲಿಸಿದರು.

    ಭಾರತದ ಪರ ಕುಲ್‌ದೀಪ್ ಯಾದವ್ 4 ವಿಕೆಟ್, ಪ್ರಸಿದ್ಧ್ ಕೃಷ್ಣ 4 ವಿಕೆಟ್, ಅರ್ಷ್‌ದೀಪ್ ಸಿಂಗ್ ಹಾಗೂ ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು.

    ಭಾರತದ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಜೋಡಿ 155 ರನ್‌ಗಳ ಜತೆಯಾಟವನ್ನಾಡಿ ತಂಡವನ್ನು ಗೆಲುವಿನೆಡೆಗೆ ಮುಖ ಮಾಡುವಂತೆ ಮಾಡಿದರು. ರೋಹಿತ್ 75 ರನ್ ಗಳಿಸಿ ಔಟ್ ಆದರೆ. ಜೈಸ್ವಾಲ್ ಅಜೇಯ 116 ರನ್ ಬಾರಿಸಿದರು ಹಾಗೂ ವಿರಾಟ್ ಕೊಹ್ಲಿ ಅಜೇಯ 65 ರನ್ ಬಾರಿಸಿದರು.

    ದಕ್ಷಿಣ ಆಫ್ರಿಕಾದ ಪರ ಕೇಶವ್ ಮಹಾರಾಜ್ ಒಂದು ವಿಕೆಟ್ ಪಡೆದರು.

    ಶಿವಮೊಗ್ಗ: ಒಂದೇ ಮನೆಯಲ್ಲಿ ತಾಯಿ, ಮಗ ನೇಣಿಗೆ ಶರಣು; ಈ ಹಿಂದೆ ಮಾವ, ಸೊಸೆಯೂ ಇದೇ ಮನೆಯಲ್ಲಿ ಆತ್ಮಹತ್ಯೆ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬ್ರೇಕಿಂಗ್! ರೂಪಾಯಿ ಕುಸಿತ—ಮೊದಲ ಬಾರಿಗೆ ₹93 ದಾಟಿದ ಡಾಲರ್, ಆರ್ಥಿಕತೆಗೆ ಶಾಕ್!

    “ರೂಪಾಯಿ ಕುಸಿತ 93” ಇದೀಗ ದೇಶದ ಆರ್ಥಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆ, ಭಾರತೀಯ ರೂಪಾಯಿ ಇತಿಹಾಸದಲ್ಲೇ ಮೊದಲ ಬಾರಿಗೆ ಡಾಲರ್ ಎದುರು ₹93 ಗಡಿ...

    ತೆಲಂಗಾಣ ಬಜೆಟ್ 2026: ಆರೋಗ್ಯ ಕ್ಷೇತ್ರಕ್ಕೆ ಭಾರೀ ಉತ್ತೇಜನ—₹1286 ಕೋಟಿ ಹೆಚ್ಚಳ!

    “ತೆಲಂಗಾಣ ಆರೋಗ್ಯ ಬಜೆಟ್ 2026” ಈಗ ರಾಜ್ಯ ರಾಜಕೀಯ ಹಾಗೂ ಸಾರ್ವಜನಿಕರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆರೋಗ್ಯ ಸೇವೆಗಳನ್ನು ಬಲಪಡಿಸಲು ಸರ್ಕಾರ ದೊಡ್ಡ ಮಟ್ಟದ ಹೂಡಿಕೆ ಮಾಡಿದ್ದು, ಹೆಚ್ಚುವರಿ ₹1286 ಕೋಟಿ ಅನುದಾನ...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading