ತಿರುವನಂತಪುರಂ: ಕೇರಳದ ಆಳಪ್ಪುಳ ಜಿಲ್ಲೆಯ ಮನೆಯೊಂದರಲ್ಲಿ 10ಕ್ಕೂ ಹೆಚ್ಚು ಸುಟ್ಟ ಮೂಳೆಗಳು, ತಲೆಬುರುಡೆ ಮತ್ತು ಹಲ್ಲುಗಳು ಪತ್ತೆಯಾಗಿವೆ.
ಕೊಟ್ಟಾಯಂ ಜಿಲ್ಲೆಯ ಎಟ್ಟುಮನೂ ಮೂಲದ ಜೈನ್ ಮ್ಯಾಥ್ ಅಲಿಯಾಸ್ ಜೈನಮ್ಮ (65) ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಪ್ಪುಳ ಜಿಲ್ಲೆಯ ಚೆರ್ತಲಾ ಬಳಿಯ ಪುಲ್ಲಿಪುರಂನಲ್ಲಿರುವ ರಿಯಲ್ ಎಸ್ಟೇಟ್ ಬ್ರೇಕರ್ ಸಿ.ಎಂ. ಸೆಬಾಸ್ಟಿಯನ್ (68) ರ ಮನೆ ಕಾಂಪೌಂಡ್ ನಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದರು.
ಜುಲೈ 28 ರಂದು ನಡೆಸಿದ ಶೋಧಕಾರ್ಯದ ವೇಳೆ ಸುಟ್ಟ ಸ್ಥಿತಿಯಲ್ಲಿದ್ದ ತಲೆಬುರುಡೆ, ತೊಡೆಯ ಮೂಳೆ ಮತ್ತು ಕತ್ತರಿಸಿದ ಹಲ್ಲಿನ ಅವಶೇಷಗಳು ಪತ್ತೆಯಾಗಿದ್ದವು. ಸೋಮವಾರ ಸೆಬಾಸ್ಟಿಯನ್ ಗೆ ಸೇರಿದ 2 ಎಕರೆ ಪ್ರದೇಶದಲ್ಲಿ ಮತ್ತಷ್ಟು ಉತ್ಪನನ ನಡೆಸಲಾಯಿತು. ಜೈನಮ್ಮ, ಬಿಂದು ಪದ್ಮನಾಭನ್ ಮತ್ತು ಆಯೆಷಾ ಎಂಬ ಮಹಿಳೆಯರ ನಾಪತ್ತೆ ಪ್ರಕರಣದ ತನಿಖೆ ಮೇಲೆ ಈ ಪಕರಣ ಬೆಳಕಿಗೆ ಬಂದಿದೆ.
ಟೀ ಪುಡಿಗೆ 24 ರೂ. ಜಾಸ್ತಿ ಪಡೆದಿದ್ದಕ್ಕೆ 25 ಸಾವಿರ ದಂಡ!
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


