ನವದೆಹಲಿ: ಇಂದು (ಫೆಬ್ರವರಿ 8) ದೆಹಲಿ ವಿಧಾನಸಭಾ ಚುನಾವಣೆಯ ಮತಎಣಿಕೆ ನಡೆಯುತ್ತಿದ್ದು, ಬಿಜೆಪಿ ಸ್ಪಷ್ಟ ಬಹುಮತ ಪಡೆದುಕೊಂಡು ಪ್ರಚಂಡ ಗೆಲುವು ಸಾಧಿಸುವತ್ತ ದಾಪುಗಾಲು ಇಟ್ಟಿದೆ.
ಇನ್ನು ಆಮ್ ಆದ್ಮಿ ಪಾರ್ಟಿಯ ಅರವಿಂದ್ ಕೇಜ್ರಿವಾಲ್ ಹಾಗೂ ಮನೀಶ್ ಸಿಸೊಡಿಯಾ ರೀತಿಯ ಬಲಿಷ್ಠ ನಾಯಕರೇ ಸೋಲನ್ನು ಅನುಭವಿಸಿದ್ದು, ಕೇಜ್ರಿವಾಲ್ ಬಳಿಕ ಸಿಎಂ ಜವಾಬ್ದಾರಿ ಹೊತ್ತಿದ್ದ ಅತಿಶಿ ಮರ್ಲೇನಾ ಗೆಲುವು ಸಾಧಿಸಿದ್ದಾರೆ.
ಹೌದು, ಕಲ್ಕಾಜಿ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಅತಿಶಿ ಮರ್ಲೇನಾ ಬಿಜೆಪಿಯ ರಮೇಶ್ ಬಿಧೂರಿ ಹಾಗೂ ಕಾಂಗ್ರೆಸ್‌ನ ಅಲ್ಕಾ ಲಂಬಾ ವಿರುದ್ಧ ಗೆಲುವು ಕಂಡಿದ್ದಾರೆ. ಈ ಮೂಲಕ ಕಲ್ಕಾಜಿ ಕ್ಷೇತ್ರದಲ್ಲಿ ಅತಿಶಿ ಎರಡನೇ ಬಾರಿಗೆ ಗೆಲುವಿನ ನಗೆ ಬೀರಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


