Wednesday, September 2, 2026
spot_img
More
    spot_img
    HomeLatest newsಮೆಟ್ರೋ ಟಿಕೆಟ್‌ಗಾಗಿ ಲೈನ್ ಬೇಡ ಈ 9 ಟ್ರಾವೆಲ್ ಆಪ್‌ಗಳಲ್ಲೂ ಟಿಕೆಟ್ ಲಭ್ಯ

    ಮೆಟ್ರೋ ಟಿಕೆಟ್‌ಗಾಗಿ ಲೈನ್ ಬೇಡ ಈ 9 ಟ್ರಾವೆಲ್ ಆಪ್‌ಗಳಲ್ಲೂ ಟಿಕೆಟ್ ಲಭ್ಯ

    ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಂತಸದ ಸುದ್ದಿ ಈಗ ಮೆಟ್ರೋ ಟಿಕೆಟ್‌ಗಳನ್ನು ಕೇವಲ ವ್ಯಾಟ್ಸಪ್‌, ಪೇಟಿಎಂ ಮತ್ತು ಬಿಎಂಆರ್‌ಸಿಎಲ್‌ (ನಮ್ಮ ಮೆಟ್ರೋ) ಆಪ್‌ಗಳಲ್ಲಿ ಮಾತ್ರವಲ್ಲದೆ, ಓಲಾ, ರ್ಯಾಪಿಡೋ, ನಮ್ಮ ಯಾತ್ರಿಯಂತಹ ಹೊಸ 9 ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿಯೂ ಪಡೆಯಬಹುದು. ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಆರ್‌ಸಿಎಲ್‌ ಹೊಸ ಒಪ್ಪಂದ ಮಾಡಿಕೊಂಡಿದ್ದು, ಹೆಚ್ಚುವರಿ ಆಪ್‌ಗಳಲ್ಲಿಯೂ ಟಿಕೆಟ್ ಸೇವೆ ಲಭ್ಯವಾಗಿದೆ.ಈ ಹೊಸ ವ್ಯವಸ್ಥೆಯೊಂದಿಗೆ, ಮೆಟ್ರೋ ಟಿಕೆಟ್‌ಗಳು ಒಟ್ಟು 9 ಜನಪ್ರಿಯ ಡಿಜಿಟಲ್ ಅಪ್ಲಿಕೇಶನ್‌ಗಳಲ್ಲಿ ಲಭ್ಯವಿದ್ದು, ಪ್ರಯಾಣಿಕರಿಗೆ ಸುಗಮ ಹಾಗೂ ತಡೆರಹಿತ ಟಿಕೆಟ್ ಬುಕ್ಕಿಂಗ್ ಅನುಭವ ಒದಗಿಸುತ್ತದೆ. ಟೊಕನ್‌ಗಾಗಿ ನಿಲ್ದಾಣದಲ್ಲಿ ಸಾಲಿನಲ್ಲಿ ನಿಲ್ಲಬೇಕಾದ ಅಗತ್ಯವಿಲ್ಲದೆ, ಡಿಜಿಟಲ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಟಿಕೆಟ್ ವಿತರಣೆ ವ್ಯವಸ್ಥೆಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಈ ಸೇವೆ ಪ್ರಯಾಣಿಕರಿಗೆ ಬಹುಪಾಲು ಅನುಕೂಲಕರವಾಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಇದು ಪ್ರಯಾಣಿಕರ ಅನುಕೂಲತೆಯನ್ನು ಹೆಚ್ಚಿಸುವ ಸ್ನೇಹಪೂರಿತ ವ್ಯವಸ್ಥೆಯಾಗಿದ್ದು, ಡಿಜಿಟಲ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಟಿಕೆಟ್ ವಿತರಣೆಯಲ್ಲಿ ಇಟ್ಟಿರುವ ಮಹತ್ವದ ಹೆಜ್ಜೆಯಾಗಿದೆ.

    Advertisement

    ಇಂದಿನಿಂದ 9 ಆಪ್‌ನಲ್ಲಿ ಮೆಟ್ರೋ ಟೀಕೆಟ್ ಲಭ್ಯ.

    • ಈಸಿ ಮೈ ಟ್ರಿಪ್ (EaseMyTrip)
    • ಹೈವೇ ಡಿಲೈಟ್ (Highway Delite)
    • ಮೈಲ್ಸ್ ಆಂಡ್ ಕಿಲೋ ಮೀಟರ್ಸ್ (Miles & Kilometres via Telegram)
    • ನಮ್ಮ ಯಾತ್ರಿ (Namma Yatri)
    • ಒನ್ ಟಿಕೆಟ್ (OneTicket)
    • ರ್ಯಾಪಿಡೋ (Rapido)
    • ರೆಡ್ ಬಸ್ (Redbus)
    • ಟಮ್ಮಾಕ್ (Tummoc)
    • ಯಾತ್ರಿಸಿಟಿ ಟ್ರಾವೆಲ್ ಗೈಡ್ (Yatri City Travel Guide)

    ಈ ಹೊಸ ಆಯ್ಕೆಗಳು ಈಗಾಗಲೇ ಲಭ್ಯವಿರುವ ಟಿಕೆಟ್ ಬುಕ್ಕಿಂಗ್ ಮಾರ್ಗಗಳಾದ ನಮ್ಮ ಮೆಟ್ರೋ ಮೊಬೈಲ್ ಆಪ್, ಬಿಎಂಆರ್‌ಸಿಎಲ್ ವಾಟ್ಸಾಪ್ ಚಾಟ್‌ಬಾಟ್ (8105556677), ಮತ್ತು ಪೇಟಿಎಂ (Paytm) ಆಪ್‌ಗಳಿಗೆ ಪೂರಕವಾಗಿ ಸೇರಿವೆ. ಇದರಿಂದ ಡಿಜಿಟಲ್ ಬಳಕೆದಾರರಿಗೆ ಇನ್ನಷ್ಟು ಸುಲಭ ಹಾಗೂ ವ್ಯಾಪಕ ಟಿಕೆಟ್ ಬುಕ್ಕಿಂಗ್ ಅನುಭವ ಲಭ್ಯವಾಗುತ್ತದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.ಸದ್ಯ ನಮ್ಮ ಮೆಟ್ರೋದಲ್ಲಿ ಪ್ರತಿದಿನ 8.5 ಲಕ್ಷಕ್ಕಿಂತ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಸುಗಮ, ಏಕೀಕೃತ ಹಾಗೂ ಆಪ್ ಆಧಾರಿತ ಸಾರಿಗೆ ಅನುಭವವನ್ನು ಒದಗಿಸುವತ್ತ ನಿಗಮ ವಿಶೇಷ ಗಮನಹರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರಯಾಣಿಕರು ಈಗ ಒಂದೇ ಅಪ್ಲಿಕೇಶನ್‌ನಿಂದ ತಮ್ಮ ಮನೆಯಿಂದ ಗಮ್ಯಸ್ಥಳದವರೆಗೆ ಸಂಪೂರ್ಣ ಪ್ರಯಾಣವನ್ನು ಸುಲಭವಾಗಿ ಯೋಜಿಸಬಹುದು. ಈ ವ್ಯವಸ್ಥೆ ಪ್ರಯಾಣಿಕರ ಸಮಯ ಮತ್ತು ಶ್ರಮವನ್ನು ಉಳಿತಾಯ ಮಾಡುತ್ತದೆ. ಬಿಎಂಆರ್‌ಸಿಎಲ್ ಈ ಮೂಲಕ ಮುಕ್ತ, ಒಳಗೊಳ್ಳುವಿಕೆ ಹೊಂದಿರುವ ಹಾಗೂ ತಂತ್ರಜ್ಞಾನಾಧಾರಿತ ನಗದುರಹಿತ ನಗರ ಸಂಚಾರ ವ್ಯವಸ್ಥೆ ನಿರ್ಮಾಣದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

    ಇಎಂಐ ಪಡೆದು ಮನೆ ಖರೀದಿಸುವ ಮೊದಲು ತಪ್ಪದೇ ತಿಳಿಯಬೇಕಾದ ಪ್ರಮುಖ ವಿಷಯಗಳು


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading