ಬೆಂಗಳೂರು ದಕ್ಷಿಣ ಜಿಲ್ಲೆ, ರಾಮನಗರ ತಾಲ್ಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಪ್ರೀತಿಯಲ್ಲಿ ಮೋಸಕ್ಕೊಳಗಾದ 22 ವರ್ಷದ ಎಂಎಸ್‌ಸಿ ವಿದ್ಯಾರ್ಥಿನಿ ವರ್ಷಿಣಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೈಸೂರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವರ್ಷಿಣಿ, ಸಾಯುವ ಮುನ್ನ ಬರೆದಿರುವ ಡೆತ್‌ನೋಟ್‌ನಲ್ಲಿ ತನ್ನ ಪ್ರೇಮಿ, ಕುಣಿಗಲ್ ಮೂಲದ ಅಭಿ (ದೇವರದೊಡ್ಡಿ ಗ್ರಾಮದವನು) ವಿರುದ್ಧ ವಂಚನೆ ಮತ್ತು ಲೈಂಗಿಕ ಶೋಷಣೆಯ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಡೆತ್‌ನೋಟ್‌ನಲ್ಲಿ ವರ್ಷಿಣಿ ಬರೆದದ್ದು ಏನು?
“ನನ್ನ ಸಾವಿಗೆ ಅಭಿ ದೇವರದೊಡ್ಡಿ ಕಾರಣ. ಅಮ್ಮಾ, ಸಾಧ್ಯವಾದರೆ ನನ್ನ ಕ್ಷಮಿಸು. ಇದು ಆತ್ಮಹತ್ಯೆಗೆ ಶರಣಾದ ಎಂಎಸ್‌ಸಿ ವಿದ್ಯಾರ್ಥಿನಿ ವರ್ಷಿಣಿ ಬರೆದಿರುವ ಡೆತ್‌ನೋಟ್‌ನ ಪ್ರಮುಖ ಸಾಲುಗಳು. ಪ್ರೀತಿಯ ಹೆಸರಿನಲ್ಲಿ ವರ್ಷಿಣಿಯನ್ನು ವಂಚಿಸಿದ, ಬ್ಲ್ಯಾಕ್‌ಮೇಲ್ ಮಾಡಿದ ಅಭಿ ವಿರುದ್ಧ ಯುವತಿ ಆರೋಪಗಳನ್ನು ಮಾಡಿದ್ದಾರೆ.
ಖಾಸಗಿ ಫೋಟೋಗಳನ್ನು ಮುಂದಿಟ್ಟು ಲೈಂಗಿಕವಾಗಿ ಶೋಷಣೆ ಮಾಡಿದ ಕ್ರೂರ ಸತ್ಯವನ್ನು ವರ್ಷಿಣಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಬ್ಲ್ಯಾಕ್‌ಮೇಲ್‌ಗೆ ಹೆದರಿ ಕೊನೆಗೆ ಆತನಿಗೆ ಸಹಕರಿಸಿದೆ ಎಂದು ಉಲ್ಲೇಖಿಸಿರುವ ವರ್ಷಿಣಿ, ಗರ್ಭಿಣಿಯಾದಾಗ ಆತ ಗರ್ಭಪಾತವನ್ನೂ ಮಾಡಿಸಿದ್ದಾಗಿ ಬರೆದಿದ್ದಾರೆ. “ಸಾಯೋದಕ್ಕೂ ಭಯವಾಗುತ್ತಿದೆ, ಆದರೆ ಬೇರೆ ದಾರಿ ಇಲ್ಲ.
ಆತನನ್ನು ಸುಮ್ಮನೆ ಬಿಡಬೇಡಿ. ಇಂತವರನ್ನು ನಂಬಿ ಯಾರೂ ತಮ್ಮ ಜೀವನ ಹಾಳುಮಾಡಿಕೊಳ್ಳಬೇಡಿ” ಎಂದು ಇಡೀ ಸಮಾಜಕ್ಕೆ ಮನವಿ ಮಾಡಿ, ಶಿಕ್ಷಕರ ಬಳಿಯೂ ಕ್ಷಮೆ ಕೇಳಿದ್ದಾರೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅಭಿಯ ಬಂಧನಕ್ಕೆ ಪೊಲೀಸರ ಮೇಲೆ ಒತ್ತಡ ಹೆಚ್ಚಿದೆ.
ಚಿನ್ನದ ಬೆಲೆ ಏರಿಕೆ: 24 ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂಗೆ ₹270 ಏರಿಕೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


