Saturday, September 19, 2026
spot_img
More
    spot_img
    HomeMoneyನಿಮ್ಮ ಹಣ ಬ್ಯಾಂಕ್‌ನಲ್ಲಿದೆಯೇ?, ‘ನಿಮ್ಮ ಹಣ ನಿಮ್ಮ ಹಕ್ಕು’ ಅಭಿಯಾನ ತಿಳಿಯಿರಿ

    ನಿಮ್ಮ ಹಣ ಬ್ಯಾಂಕ್‌ನಲ್ಲಿದೆಯೇ?, ‘ನಿಮ್ಮ ಹಣ ನಿಮ್ಮ ಹಕ್ಕು’ ಅಭಿಯಾನ ತಿಳಿಯಿರಿ

    ನಿಮ್ಮ ಹಣ ಬ್ಯಾಂಕ್‌ನಲ್ಲಿದ್ದರೆ ಕೇಂದ್ರ ಹಣಕಾಸು ಸಚಿವಾಲಯ ಆರಂಭಿಸಿರುವ ‘ನಿಮ್ಮ ಹಣ ನಿಮ್ಮ ಹಕ್ಕು’ ಅಭಿಯಾನದ ಕುರಿತು ತಿಳಿಯಿರಿ. ಅಕ್ಟೋಬರ್ 2025ರಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ ನೀಡಿರುವ ಈ ಅಭಿಯಾನ  ಡಿಸೆಂಬರ್ 2025ರ ವರೆಗೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಲಿದೆ.  

    Advertisement

    ಹಣಕಾಸು ವಲಯದಲ್ಲಿ ಕ್ಲೇಮು ಪಡೆಯದ ಸ್ವತ್ತುಗಳ ದಕ್ಷ ಮತ್ತು ತ್ವರಿತ ಇತ್ಯರ್ಥಕ್ಕಾಗಿ ‘ನಿಮ್ಮ ಹಣ ನಿಮ್ಮ ಹಕ್ಕು; ಅಭಿಯಾನವನ್ನು ಆಯೋಜಿಸಲಾಗಿದೆ. ಈ ಅಭಿಯಾನದ ಭಾಗವಾಗಿ ಕ್ಲೇಮು ಪಡೆಯದ ಸ್ವತ್ತುಗಳ ಕುರಿತು ಜಾಗೃತಿ ಹಾಗೂ ಇತ್ಯರ್ಥಕ್ಕಾಗಿ ಕ್ರಮ ಕೈಗೊಳ್ಳಲಾಗುತ್ತದೆ.

    ದೀರ್ಘ ಕಾಲದಿಂದ ಬ್ಯಾಂಕ್‍ನಲ್ಲಿರುವ ತಮ್ಮ ಹಣ ಪಡೆಯದೆ ಉಳಿದಿರುವ ಠೇವಣಿ, ವಿಮಾ ಕಂತುಗಳನ್ನು ಅವುಗಳ ಮಾಲೀಕರು ಅಥವಾ ಕಾನೂನುಬದ್ಧ ವಾರಸುದಾರರು ಹಣವನ್ನು ವಾಪಸ್ ಪಡೆಯುವ ಸಂಬಂಧ ‘ನಿಮ್ಮ ಹಣ ನಿಮ್ಮ ಹಕ್ಕು’ ಅಭಿಯಾನ ಕೈಗೊಳ್ಳಲಾಗಿದೆ.

    ಹಲವು ಕಾರಣಗಳಿಂದ ಬ್ಯಾಂಕ್‍ನಲ್ಲಿ ದೀರ್ಘಕಾಲದಿಂದ ಇರುವ ಹಣ ಹಾಗೂ ವಿಮಾ ಕಂತನ್ನು ಪಡೆಯದಿರುವ ಗ್ರಾಹಕರಿಗೆ ಮಾಹಿತಿ ನೀಡಿ ಹಣವನ್ನು ವಾಪಸ್ಸು ಪಡೆಯಲು ಹೆಚ್ಚಿನ ಅರಿವು ಮೂಡಿಸಲಾಗುತ್ತದೆ.

    ಬ್ಯಾಂಕ್‍ನಲ್ಲಿ 10 ವರ್ಷಕ್ಕಿಂತ ಹೆಚ್ಚು ಕಾಲ ನಿಷ್ಕ್ರೀಯವಾಗಿರುವ ಖಾತೆಯಲ್ಲಿನ ಹಣ ಮತ್ತು ಕ್ಲೈಮ್ ಮಾಡದ ಠೇವಣಿಯನ್ನು ಆರ್‌ಬಿಐನಿಂದ ಡಿಇಎಎಫ್ ನಿಧಿಗೆ ವರ್ಗಾಯಿಸಲಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಗ್ರಾಹಕರು/ ಕಾನೂನು ಬದ್ಧ ಉತ್ತರಾಧಿಕಾರಿಗಳು ಯಾವುದೇ ಸಮಯದಲ್ಲಿ ಹಣವನ್ನು ವಾಪಸ್ಸು ಪಡೆಯಬಹುದು.

    ಗ್ರಾಹಕರು ತಮ್ಮ ಗುರುತಿನ ದಾಖಲೆಗಳನ್ನು ಅರ್ಹತಾ ಪತ್ರದೊಂದಿಗೆ ನೀಡಿ ಈ ಅಭಿಯಾನದ ಉಪಯೋಗ ಪಡೆದುಕೊಳ್ಳಬೇಕು. ಹಣಕಾಸು ಸಚಿವಾಲಯದ ಮಾರ್ಗಸೂಚಿ ಪ್ರಕಾರ ಎಲ್ಲಾ ಬ್ಯಾಂಕು, ವಿಮೆ ಮತ್ತು ಇತರ ಇಲಾಖಾ ಶಾಖೆಗಳಲ್ಲಿ ಡಿಸೆಂಬರ್ 31ರವರೆಗೆ ಕಾನೂನು ಬದ್ಧ ವಾರಸುದಾರರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಲಿದೆ.

    ದೀರ್ಘ ಕಾಲದವರೆಗೆ ಹಕ್ಕು ಪಡೆಯದ ಹಣಕಾಸಿನ ಸ್ವತ್ತುಗಳನ್ನು ಕಾನೂನು ಬದ್ಧ ವಾರಸುದಾರರಿಗೆ ಮರು ಪಡೆಯಲು ಈ ಅಭಿಯಾನ ಏರ್ಪಡಿಸಲಾಗಿದೆ. ಈ ಅಭಿಯಾನದ ಭಾಗವಾಗಿ ಕೆಲವು ಠೇವಣಿದಾರರಿಗೆ ತಮ್ಮ ಖಾತೆಯಲ್ಲಿರುವ ಹಣವನ್ನು ಆನ್‍ಲೈನ್ ಮೂಲಕ ಹಸ್ತಾಂತರ ಸಹ ಮಾಡಲಾಗುತ್ತಿದೆ.

    ಅಭಿಯಾನದ ಮಾಹಿತಿ: ನಿಮ್ಮ ಹಳೆಯ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಮರೆತು ಬಿಟ್ಟಿದ್ದರೆ, ಆರ್‌ಬಿಐ ನಿಮಗೆ ಸೇರಿದ್ದ ಹಣವನ್ನು ಮರಳಿ ಪಡೆಯಲು ನೆರವಾಗುತ್ತದೆ. ನಿಮ್ಮ ಬ್ಯಾಂಕ್‍ನ ನಿಷ್ಕ್ರೀಯ ಖಾತೆಯಲ್ಲಿರುವ( 2 ರಿಂದ 10 ವರ್ಷದವರೆಗೂ ಚಲನೆ ಇಲ್ಲದ) ಹಣ/ ಕ್ಲೈಮ್ ಮಾಡದ ಡೆಪಾಸಿಟ್‍ಗಳು (10 ವರ್ಷಕ್ಕೂ ಹೆಚ್ಚು) ಆರ್‌ಬಿಐನ ಫಂಡ್‍ಗೆ ವರ್ಗಾಯಿಸಲ್ಪಡುತ್ತದೆ.

    ನೀವು ಅಥವಾ ನಿಮ್ಮ ಕಾನೂನು ಬದ್ಧ ವಾರಸುದಾರರು ಯಾವಾಗ ಬೇಕಾದರೂ ಕ್ಲೈಮ್ ಮಾಡಬಹುದು. ನಿಮ್ಮ ಹಣ ಕ್ಲೈಮ್ ಮಾಡಲು ಬ್ಯಾಂಕ್‍ನ ಶಾಖೆಗೆ ಭೇಟಿ ನೀಡುವುದು. ಕೆವೈಸಿ ದಾಖಲೆಯೊಂದಿಗೆ ಒಂದು ಫಾರಂ ಸಲ್ಲಿಸುವುದು (ಆಧಾರ್, ಪಾಸ್‍ಪೋರ್ಟ್, ಚುನಾವಣಾ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್) ನಿಮ್ಮ ಕ್ಲೈಮ್ ಆಗಿಲ್ಲದ ಠೇವಣಿಗಳ ಬಗ್ಗೆ ತಿಳಿಯಲು https://udgam.rbi.org.in ವೆಬ್‌ಸೈಟ್‌ಗೆ ಸಹ ಭೇಟಿ ನೀಡಬಹುದಾಗಿದೆ.

    ಒಟ್ಟು 6 ಹಂತಗಳಲ್ಲಿ ‘ನಿಮ್ಮ ಹಣ ನಿಮ್ಮ ಹಕ್ಕು’ ಅಭಿಯಾನ ನಡೆಯುತ್ತಿದೆ. ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಕೊಲ್ಕತ್ತಾ, ಹೈದರಾಬಾದ, ಪುಣೆ ಹಾಗೂ ಅಹಮದಾಬಾದ್‌ ನಂತಹ ದೇಶದ ಬೃಹತ್ ನಗರಗಳ ಮೇಲೆ ಅಭಿಯಾನ ಹೆಚ್ಚು ಗಮನಹರಿಸಲಿದೆ. 30 ಜೂನ್, 2025ರ ಅನುಸಾರ ಕರ್ನಾಟಕದಲ್ಲಿ 2,892 ಕೋಟಿ ರೂ. ಮೌಲ್ಯದ 533 ವಿಮೆಗಳು ಇತ್ಯರ್ಥವಾಗಬೇಕಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading