ದುಬೈ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್ ( Asia Cup 2025 ) ಟೂರ್ನಿಯ ಎರಡನೇ ಪಂದ್ಯದಲ್ಲಿ ಭಾರತ ಯುಎಇ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಯುಎಇ 13.1 ಓವರ್‌ಗಳಲ್ಲಿ 57 ರನ್‌ಗಳಿಗೆ ಆಲ್‌ಔಟ್ ಆಗಿ ಭಾರತಕ್ಕೆ 58 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಭಾರತ 4.3 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 60 ರನ್ ಬಾರಿಸಿತು.
ಯುಎಇ ಇನ್ನಿಂಗ್ಸ್: ಯುಎಇ ಪರ ಆರಂಭಿಕರಾಗಿ ಕಣಕ್ಕಿಳಿದ ಆಟಗಾರರೇ 26 ರನ್ ಕಲೆಹಾಕಿದ್ದರು. ಅಲಿಶಾನ್ ಶರಫು 22 ಹಾಗೂ ನಾಯಕ ಮುಹಮ್ಮದ್ ವಸೀಮ್ 19 ರನ್ ಕಲೆಹಾಕಿದರು. ಬಳಿಕ ರಾಹುಲ್ ಚೋಪ್ರಾ 3 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಹೀಗೆ 47 ರನ್‌ಗಳಿಗೆ ತನ್ನ ಮೊದಲ 3 ವಿಕೆಟ್ ಕಳೆದುಕೊಂಡಿದ್ದ ಯುಎಇ ಉಳಿದ 7 ವಿಕೆಟ್‌ಗಳನ್ನು ನಂತರದ 10 ರನ್ ಕಲೆಹಾಕುವಷ್ಟರಲ್ಲಿ ಕಳೆದುಕೊಂಡಿತು.
ಯುಎಇ ಪರ ಮುಹಮ್ಮದ್ ಜೊಹೈಬ್ 3, ಅಸಿಫ್ ಖಾನ್ 2, ಹರ್ಷಿತ್ ಕೌಶಿಕ್ 2, ಧ್ರುವ್ ಪರಾಶರ್ 1, ಸಿಮ್ರಾನ್‌ಜೀತ್ ಸಿಂಗ್ 1, ಹೈದರ್ ಅಲಿ 1, ಜುನೈದ್ ಸಿದ್ದಿಕಿ ಡಕ್‌ಔಟ್ ಹಾಗೂ ಮುಹಮ್ಮದ್ ರೊಹಿದ್ ಖಾನ್ ಅಜೇಯ 2 ರನ್ ಗಳಿಸಿದ್ದಾರೆ.
ಭಾರತದ ಪರ ಕುಲ್‌ದೀಪ್ ಯಾದವ್ 4 ವಿಕೆಟ್, ಶಿವಮ್ ದುಬೆ 3 ವಿಕೆಟ್, ಜಸ್‌ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್ ಹಾಗೂ ವರುಣ್ ಚಕ್ರವರ್ತಿ ತಲಾ ಒಂದೊಂದು ವಿಕೆಟ್ ಪಡೆದರು.
ಭಾರತದ ಇನ್ನಿಂಗ್ಸ್: ಭಾರತದ ಪರ ಅಭಿಷೇಕ್ ಶರ್ಮಾ 30 (16) ರನ್, ಶುಭ್‌ಮನ್ ಗಿಲ್ 20 (9) ರನ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಅಜೇಯ 7 ರನ್ ಕಲೆಹಾಕಿದರು.
ಯುಎಇ ಪರ ಜುನೈದ್ ಸಿದ್ದಖಿ ಒಂದು ವಿಕೆಟ್ ಪಡೆದರು.
Asia Cup 2025: 47ಕ್ಕೆ 3 ವಿಕೆಟ್, 57ಕ್ಕೆ ಆಲ್‌ಔಟ್; ಭಾರತದ ಮುಂದೆ ಒದ್ದಾಡಿದ ಕ್ರಿಕೆಟ್ ಶಿಶು ಯುಎಇ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


