Tuesday, September 1, 2026
spot_img
More
    spot_img
    HomeSportsCricketAsia Cup 2025: 47ಕ್ಕೆ 3 ವಿಕೆಟ್‌, 57ಕ್ಕೆ ಆಲ್‌ಔಟ್‌; ಭಾರತದ ಮುಂದೆ ಒದ್ದಾಡಿದ ಕ್ರಿಕೆಟ್‌...

    Asia Cup 2025: 47ಕ್ಕೆ 3 ವಿಕೆಟ್‌, 57ಕ್ಕೆ ಆಲ್‌ಔಟ್‌; ಭಾರತದ ಮುಂದೆ ಒದ್ದಾಡಿದ ಕ್ರಿಕೆಟ್‌ ಶಿಶು ಯುಎಇ

    ದುಬೈ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಇಂದು ( ಸೆಪ್ಟೆಂಬರ್‌ 10 ) ಏಷ್ಯಾ ಕಪ್‌ 2025 ( Asia Cup 2025 ) ಟೂರ್ನಿಯ ಗ್ರೂಪ್‌ ಹಂತದ ಎರಡನೇ ಪಂದ್ಯ ನಡೆಯುತ್ತಿದ್ದು, ಮೊದಲು ಬ್ಯಾಟಿಂಗ್‌ ಮಾಡಿದ ಕ್ರಿಕೆಟ್‌ ಶಿಶು ಯುಎಇ ಅಲ್ಪ ಮೊತ್ತಕ್ಕೆ ಆಲ್‌ಔಟ್‌ ಆಗಿದೆ.

    Advertisement

    ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಫೀಲ್ಡಿಂಗ್‌ ಆರಿಸಿಕೊಂಡು ಎದುರಾಳಿ ಯುಎಇಯನ್ನು ಮೊದಲು ಬ್ಯಾಟಿಂಗ್‌ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್‌ ಮಾಡಿದ ಯುಎಇ 13.1 ಓವರ್‌ಗಳಲ್ಲಿ ಕೇವಲ 57 ರನ್‌ ಕಲೆಹಾಕಿ ಆಲ್‌ಔಟ್‌ ಆಗಿ ಭಾರತಕ್ಕೆ 58 ರನ್‌ಗಳ ಸುಲಭ ಗುರಿ ನೀಡಿದೆ.

    ಯುಎಇ ಪರ ಆರಂಭಿಕರಾಗಿ ಕಣಕ್ಕಿಳಿದ ಆಟಗಾರರೇ 26 ರನ್‌ ಕಲೆಹಾಕಿದ್ದರು. ಅಲಿಶಾನ್‌ ಶರಫು 22 ಹಾಗೂ ನಾಯಕ ಮುಹಮ್ಮದ್‌ ವಸೀಮ್ 19 ರನ್‌ ಕಲೆಹಾಕಿದರು. ಬಳಿಕ ರಾಹುಲ್‌ ಚೋಪ್ರಾ 3 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಹೀಗೆ 47 ರನ್‌ಗಳಿಗೆ ತನ್ನ ಮೊದಲ 3 ವಿಕೆಟ್‌ ಕಳೆದುಕೊಂಡಿದ್ದ ಯುಎಇ ಉಳಿದ 7 ವಿಕೆಟ್‌ಗಳನ್ನು ನಂತರದ 10 ರನ್‌ ಕಲೆಹಾಕುವಷ್ಟರಲ್ಲಿ ಕಳೆದುಕೊಂಡಿತು.

    ಯುಎಇ ಪರ ಮುಹಮ್ಮದ್‌ ಜೊಹೈಬ್‌ 3, ಅಸಿಫ್‌ ಖಾನ್‌ 2, ಹರ್ಷಿತ್‌ ಕೌಶಿಕ್‌ 2, ಧ್ರುವ್‌ ಪರಾಶರ್‌ 1, ಸಿಮ್ರಾನ್‌ಜೀತ್‌ ಸಿಂಗ್‌ 1, ಹೈದರ್‌ ಅಲಿ 1, ಜುನೈದ್‌ ಸಿದ್ದಿಕಿ ಡಕ್‌ಔಟ್‌ ಹಾಗೂ ಮುಹಮ್ಮದ್‌ ರೊಹಿದ್‌ ಖಾನ್‌ ಅಜೇಯ 2 ರನ್‌ ಗಳಿಸಿದ್ದಾರೆ.

    ಭಾರತದ ಪರ ಕುಲ್‌ದೀಪ್‌ ಯಾದವ್‌ 4 ವಿಕೆಟ್‌, ಶಿವಮ್‌ ದುಬೆ 3 ವಿಕೆಟ್‌, ಜಸ್‌ಪ್ರೀತ್‌ ಬುಮ್ರಾ, ಅಕ್ಷರ್‌ ಪಟೇಲ್‌ ಹಾಗೂ ವರುಣ್‌ ಚಕ್ರವರ್ತಿ ತಲಾ ಒಂದೊಂದು ವಿಕೆಟ್‌ ಪಡೆದರು.

    ಜನರ ದುಡ್ಡಲ್ಲಿ ಶೋಕಿ ಮಾಡುವ ರಾಜಕಾರಣಿಗಳ ಮಕ್ಕಳೇ ನೇಪಾಳ ಗಲಭೆಗೆ ಕಾರಣ; ಜನರನ್ನು ರೊಚ್ಚಿಗೆಬ್ಬಿಸಿತ್ತು ಆ ಒಂದು ರೀಲ್!

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading