Tuesday, September 1, 2026
spot_img
More
    spot_img
    HomeStateDistrictಧರ್ಮಸ್ಥಳ: ಸುಳ್ಳು ಹೇಳಿ ಸಿಕ್ಕಿಬಿದ್ದೆ ಎಂದು ಮಾಧ್ಯಮಗಳನ್ನು ಕಂಡು ಓಡಿಹೋಗಿದ್ರಾ? ಕೊನೆಗೂ ಬಾಯಿಬಿಟ್ಟ ಜಯಂತ್‌

    ಧರ್ಮಸ್ಥಳ: ಸುಳ್ಳು ಹೇಳಿ ಸಿಕ್ಕಿಬಿದ್ದೆ ಎಂದು ಮಾಧ್ಯಮಗಳನ್ನು ಕಂಡು ಓಡಿಹೋಗಿದ್ರಾ? ಕೊನೆಗೂ ಬಾಯಿಬಿಟ್ಟ ಜಯಂತ್‌

    ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಈ ಹಿಂದೆ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸವನ್ನು ಮಾಡಿದ್ದ ಚಿನ್ನಯ್ಯ ಗ್ರಾಮದಲ್ಲಿ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳು ನಡೆದಿವೆ ಎಂದು ಆರೋಪಿಸಿ ದಾಖಲಿಸಿದ್ದ ದೂರಿನ ಅನ್ವಯ ನಡೆಯುತ್ತಿರುವ ಎಸ್‌ಐಟಿ ತನಿಖೆ ದಿನದಿಂದ ದಿನಕ್ಕೆ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ.

    Advertisement

    ಚಿನ್ನಯ್ಯನನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ಜಯಂತ್ ಟಿ, ಯುಟ್ಯೂಬರ್‌ ಅಭಿಷೇಕ್‌, ಗಿರೀಶ್‌ ಮಟ್ಟಣ್ಣವರ್‌ ಹಾಗೂ ಮಹೇಶ್‌ ಶೆಟ್ಟಿ ತಿಮರೋಡಿ ಅವರನ್ನು ಕರೆಸಿಕೊಂಡ ಎಸ್‌ಐಟಿ ಅಧಿಕಾರಿಗಳು ಸತತವಾಗಿ ವಿಚಾರಣೆ ನಡೆಸುತ್ತಿದ್ದು, ಕೆಲ ಮಾಧ್ಯಮಗಳಲ್ಲಿ ಇವರನ್ನೇ ಆರೋಪಿಗಳು ಎನ್ನುವ ಮಟ್ಟಕ್ಕೆ ಬಿಂಬಿಸಿ ಸುದ್ದಿ ಮಾಡಲಾಗುತ್ತಿದೆ.

    ಅದರಲ್ಲೂ ಎಸ್‌ಐಟಿ ವಿಚಾರಣೆ ಬಳಿಕ ಮಾಧ್ಯಮಗಳನ್ನು ಕಂಡು ಓಡಿಹೋಗಿದ್ದ ಜಯಂತ್‌ ವಿಡಿಯೊ ಬಳಸಿ ಭಯದಿಂದ ಓಡಿ ಹೋಗಿದ್ದರು ಎಂದೂ ಸಹ ಸುದ್ದಿಗಳು ಹರಿದಾಡಿದ್ದವು. ಈ ಕುರಿತು ನಿನ್ನೆ ( ಸೆಪ್ಟೆಂಬರ್‌ 10 ) ಎಸ್‌ಐಟಿ ವಿಚಾರಣೆಗೆ ಹಾಜರಾಗುವ ಮುನ್ನ ಮಾಧ್ಯಮಗಳ ಮುಂದೆ ಮಾತನಾಡಿದ ಜಯಂತ್‌ ನಗುತ್ತಲೇ ಕೆಲ ಮಾಧ್ಯಮಗಳನ್ನು ಕಡೆಗಣಿಸುವುದಕ್ಕಾಗಿ ಹಾಗೆ ಮಾಡಿದೆ ಅದು ನನ್ನ ವೈಯಕ್ತಿಕ ಎಂದರು. ಅಲ್ಲದೇ ಈಗ ನಿಮ್ಮ ಮುಂದೆಯೇ ಬಂದಿದ್ದೀನಲ್ಲ ಎಂದು ಹೇಳುವ ಮೂಲಕ ತನಗ್ಯಾವ ಭಯವೂ ಇಲ್ಲ ಎಂದು ಕೌಂಟರ್‌ ಕೊಟ್ಟರು.

    ಇನ್ನು ಜಯಂತ್‌ನನ್ನು ಎಸ್‌ಐಟಿ ಅಧಿಕಾರಿಗಳು ಏಕೆ ವಿಚಾರಣೆಗೆ ಕರೆಸಿದ್ದರು, ಏನೆಲ್ಲ ಪ್ರಶ್ನೆಗಳನ್ನು ಕೇಳಿದರು ಎಂದು ಈಗಾಗಲೇ ಸುದ್ದಿಗಳನ್ನು ಮಾಡಿರುವ ಮಾಧ್ಯಮಗಳು ಮತ್ತದೇ ಪ್ರಶ್ನೆಯನ್ನು ಜಯಂತ್‌ಗೆ ಕೇಳಿ ಉತ್ತರ ಪಡೆದುಕೊಳ್ಳಲು ಪ್ರಯತ್ನಿಸಿದವು. ಆದರೆ ಇದಕ್ಕೆ ಉತ್ತರಿಸದ ಜಯಂತ್‌ ಎಲ್ಲಕ್ಕೂ ಎಸ್‌ಐಟಿ ಉತ್ತರಿಸುತ್ತೆ, ಸತ್ಯ ಆಚೆ ಬರುತ್ತೆ ಎಂದು ವಿಶ್ವಾಸದಿಂದ ಹಾಗೂ ನಗುತ್ತಾ ಹೇಳಿದರು. ಅಲ್ಲದೇ ತನಗೇನೂ ತೊಂದರೆಯಿಲ್ಲ, ಎಸ್‌ಐಟಿ ಕಚೇರಿಯಲ್ಲೂ ಒಳ್ಳೆಯ ಉಪಚಾರ ಮಾಡಿದರು ಎಂದರು. ಮಾಧ್ಯಮದವರು ಉತ್ತರ ಪಡೆದುಕೊಳ್ಳಲು ಎಷ್ಟೇ ಯತ್ನಿಸಿದರೂ ನಗುತ್ತಲೇ ಎಸ್‌ಐಟಿ.. ಎಸ್‌ಐಟಿ.. ಎಸ್‌ಐಟಿ.. ಎನ್ನುತ್ತಾ ಜಯಂತ್‌ ವ್ಯಂಗ್ಯವನ್ನಾಡಿ ಅಲ್ಲಿಂದ ತೆರಳಿದರು. ಈ ಮೂಲಕ ತಮ್ಮ ಹೋರಾಟಕ್ಕೆ ಬೆಲೆ ಸಿಗಲಿದೆ ಎಂದು ಜಯಂತ್‌ ವಿಶ್ವಾಸ ಹೊರಹಾಕಿದರು. ತಾನು ಏನನ್ನೂ ಮಾತನಾಡುವುದಿಲ್ಲ, ನಿಮ್ಮ ಪ್ರಶ್ನೆಗೆ ಉತ್ತರ ಕೊಟ್ಟರೆ ಎಸ್‌ಐಟಿಯವರು ನನ್ನನ್ನು ಪ್ರಶ್ನೆ ಮಾಡುತ್ತಾರೆ ಎಂದರು.

    Asia Cup 2025: 47ಕ್ಕೆ 3 ವಿಕೆಟ್‌, 57ಕ್ಕೆ ಆಲ್‌ಔಟ್‌; ಭಾರತದ ಮುಂದೆ ಒದ್ದಾಡಿದ ಕ್ರಿಕೆಟ್‌ ಶಿಶು ಯುಎಇ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್ವ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading