Sunday, November 8, 2026
spot_img
More
    spot_img
    HomeSportsCricketಐಪಿಎಲ್:‌ ಸಾಮ್ಸನ್‌ ಬೇಕೆಂದರೆ ಜಡೇಜಾ ಜತೆ ಆ ಆಟಗಾರನನ್ನು ಬಿಟ್ಟುಕೊಡಿ ಎಂದ ರಾಜಸ್ಥಾನ್;‌ ಡೀಲ್‌ ಕ್ಯಾನ್ಸಲ್‌...

    ಐಪಿಎಲ್:‌ ಸಾಮ್ಸನ್‌ ಬೇಕೆಂದರೆ ಜಡೇಜಾ ಜತೆ ಆ ಆಟಗಾರನನ್ನು ಬಿಟ್ಟುಕೊಡಿ ಎಂದ ರಾಜಸ್ಥಾನ್;‌ ಡೀಲ್‌ ಕ್ಯಾನ್ಸಲ್‌ ಮಾಡಿದ ಚೆನ್ನೈ!

    ಬೆಂಗಳೂರು: ಮುಂಬರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗೂ ಮುನ್ನವೇ ಈ ಬಾರಿ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಕಳೆದ ಬಾರಿ ಮೆಗಾ ಹರಾಜು ನಡೆದಿರುವ ಕಾರಣ ಈ ಬಾರಿ ಸಣ್ಣ ಪ್ರಮಾಣದಲ್ಲಿ ಹರಾಜು ಪ್ರಕ್ರಿಯೆ ಇರಲಿದ್ದು, ಡಿಸೆಂಬರ್‌ 13ರಿಂದ 15ರವರೆಗೆ ಒಂದು ದಿನ ಈ ಹರಾಜು ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ.

    ಇನ್ನು ಈ ಹರಾಜು ಪ್ರಕ್ರಿಯೆಗೂ ಮುನ್ನ ಎಲ್ಲ ಫ್ರಾಂಚೈಸಿಗಳಿಗೂ ಬಿಸಿಸಿಐ ಯಾವ ಆಟಗಾರರನ್ನು ಉಳಿಸಿಕೊಳ್ಳುತ್ತೀರ ಎಂಬ ಪಟ್ಟಿಯನ್ನು ನವೆಂಬರ್‌ 15ರೊಳಗೆ ಸಲ್ಲಿಸಿ ಎಂದು ತಿಳಿಸಿದೆ. ಹೀಗಾಗಿ ಫ್ರಾಂಚೈಸಿಗಳು ಯಾವ ಆಟಗಾರರನ್ನು ರಿಟೈನ್‌ ಮಾಡಿಕೊಳ್ಳಲಿವೆ ಎಂಬ ಚರ್ಚೆಗಳು ಏರ್ಪಟ್ಟಿದೆ.

    ಇನ್ನು ಫ್ರಾಂಚೈಸಿಗಳು ಈ ಬಾರಿ ಇಂತಿಷ್ಟೇ ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬೇಕು ಎಂಬ ನಿಯಮವೇನಿಲ್ಲ. ಅಲ್ಲದೇ ಹರಾಜಿಗೂ ಮುನ್ನ ಒಂದು ಫ್ರಾಂಚೈಸಿಯಿಂದ ಇನ್ನೊಂದು ಫ್ರಾಂಚೈಸಿಗೆ ಆಟಗಾರರನ್ನು ಟ್ರೇಡ್‌ ಮಾಡಿಕೊಳ್ಳಬಹುದು. ಈ ವಿಷಯವಾಗಿ ಸದ್ಯ ಐಪಿಎಲ್‌ ದೊಡ್ಡ ಮಟ್ಟದಲ್ಲಿ ಸುದ್ದಿಯಲ್ಲಿದೆ. ರಾಜಸ್ಥಾನ್‌ ರಾಯಲ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳ ನಡುವೆ ದೊಡ್ಡ ಟ್ರೇಡ್‌ ನಡೆಯಲಿದೆ ಎಂದು ಹೇಳಲಾಗುತ್ತಿದೆ.

    ಚೆನ್ನೈ ಸೂಪರ್‌ಕಿಂಗ್ಸ್‌ ಸಂಜು ಸಾಮ್ಸನ್‌ಗೆ ಬೇಡಿಕೆ ಇಟ್ಟಿದ್ದು, ಬದಲಾಗಿ ರವೀಂದ್ರ ಜಡೇಜಾರನ್ನು ಬಿಟ್ಟುಕೊಡಲು ಸಿದ್ಧವಾಗಿದೆ ಎಂದು ಹಲವು ಕ್ರೀಡಾ ವೆಬ್‌ಸೈಟ್‌ಗಳು ವರದಿ ಮಾಡಿವೆ. ಎಕ್ಸ್‌ಪ್ರೆಸ್‌ ಸ್ಪೋರ್ಟ್ಸ್‌ ವರದಿಯ ಪ್ರಕಾರ ರಾಜಸ್ಥಾನ್‌ ರಾಯಲ್ಸ್‌ ಸಂಜು ಸಾಮ್ಸನ್‌ ನೀಡುತ್ತೇವೆ, ನೀವು ರವೀಂದ್ರ ಜಡೇಜಾ, ಶಿವಮ್ ದುಬೆ ಹಾಗೂ ಡಿವಾಲ್ಡ್‌ ಬ್ರೆವಿಸ್‌ ಬಿಟ್ಟುಕೊಡಿ ಎಂದು ಕೇಳಿದೆ. ಆದರೆ ಚೆನ್ನೈ ರವೀಂದ್ರ ಜಡೇಜಾ ಹಾಗೂ ಸಾಮ್‌ ಕರನ್‌ ನೀಡುತ್ತೇವೆ ಎಂದು ತಿಳಿಸಿದೆ. ರಾಜಸ್ಥಾನ್‌ ರಾಯಲ್ಸ್‌ ಇದಕ್ಕೆ ಒಪ್ಪದೇ ಜಡೇಜಾ ಹಾಗೂ ಪತಿರಾಣಾರನ್ನು ನೀಡಿ ಎಂದು ಕೇಳಿದೆ. ಈ ಡೀಲ್‌ಗೂ ಸಹ ಒಪ್ಪದ ಚೆನ್ನೈ ಸೂಪರ್‌ ಕಿಂಗ್ಸ್‌ ಟ್ರೇಡ್‌ನಿಂದ ಹೊರಬಿದ್ದಿದೆ ಎಂದು ತಿಳಿದುಬಂದಿದೆ.

    ಕಾಂತಾರ ರೀತಿಯೇ ದೈವ ನಮ್ಮಪ್ಪನ್ನ ಉಳಿಸ್ತೀನಿ ಎಂದಿತ್ತು, ಈಗ ಎಲ್ಲಿ ಆ ದೈವ?; ಹರೀಶ್‌ ರಾಯ್‌ ಮಗನ ಆಕ್ರೋಶ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search