ಹೊಸದಿಲ್ಲಿ: ನೋಯ್ದಾದ ಸೆಕ್ಟರ್ 70ರಲ್ಲಿ ನಕಲಿ ಪೊಲೀಸ್ ಠಾಣಿ ನಡೆಸುತ್ತಿದ್ದ ಪಶ್ಚಿಮ ಬಂಗಾಳ ಮೂಲದ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಸೆಕ್ಟರ್ 70 ರ ಬಿಎಸ್ -136 ರ ಆವರಣದಲ್ಲಿ ಅಂತಾರಾಷ್ಟ್ರೀಯ ಪೊಲೀಸ್ ಮತ್ತು ಅಪರಾಧ ತನಿಖಾ ಬ್ಯೂರೋ ಎಂಬ ಹೆಸರಿನಲ್ಲಿ ಪೊಲೀಸ್ ಠಾಣೆ ನಡೆಸುತ್ತಿದ್ದರು. ಗೌತಮ ಬುದ್ಧ ನಗರ ಪೊಲೀಸರು ಶನಿವಾರ ಮಧ್ಯರಾತ್ರಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರು ನಕಲಿ ಪೊಲೀಸ್ ಠಾಣೆ ಮತ್ತು ನಕಲಿ ದಾಖಲೆಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ವಂಚಿಸಿ ಹಣ ಸಂಗ್ರಹಿಸುತ್ತಿದ್ದರು. ಇವರಿಂದ ಹಲವು ನಕಲಿ ಪ್ರಮಾಣ ಪತ್ರಗಳು, ದಾಖಲೆಗಳು, ಗುರುತಿನ ಚೀಟಿಗಳು, ಚೆಕ್ ಪುಸ್ತಕಗಳು, ವಿಸಿಟಿಂಗ್ ಕಾರ್ಡ್‌ಗಳು, 42 ಸಾವಿರ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಜೂನ್ 4 ರಂದು ಇವರ ಕಟ್ಟಡವನ್ನು ಬಾಡಿಗೆಗೆ ಪಡೆದಿದ್ದರು, ಪೊಲೀಸ್ ಠಾಣಿಯ ಬೋರ್ಡ್ ನಂತೆಯೇ ಹೋಲುವ ಸೈನ್ ಬೋರ್ಡ್ ಅನ್ನು ಹಾಕಿ 10 ದಿನಗಳಿಂದ ಕಾರ್ಯ ಆರಂಭಿಸಿದ್ದರು. ಅವರು ಇತ್ತೀಚೆಗೆ ವಂಚನೆ ಆರಂಭಿಸಿದ್ದರಿಂದ ಕೆಲವು ಮಂದಿಗೆ ಮಾತ್ರ ವಂಚಿಸಿರುವ ಸಾಧ್ಯತೆ ಇದೆ. ಇವರಿಂದ ವಂಚನೆಗೆ ಒಳಗಾದವರ ವಿವರ ಸಂಗ್ರಹಿಸಲಾಗುತ್ತಿದೆ. ಎಲ್ಲಾ ಆರೋಪಿಗಳು ಪಶ್ಚಿಮ ಬಂಗಾಳ ಮೂಲದವರಾಗಿದ್ದು ನೋಯ್ಡಾದ ಸೆಕ್ಟರ್ 70ರಲ್ಲಿ ನೆಲೆಸಿದ್ದರು ಎಂದು ಸೆಂಟ್ರಲ್ ನೋಯ್ಡಾದ ಡಿಸಿಪಿ ಶಕ್ತಿ ಮೋಹನ್ ಅವಸ್ಥಿ ತಿಳಿಸಿದ್ದಾರೆ.
ಬೆಂಗಳೂರಲ್ಲಿ ನೇಪಾಳ ರುದ್ರಾಕ್ಷಿಗಳ ಪ್ರದರ್ಶನ; ಎಲ್ಲಿ, ಎಲ್ಲಿಯವರೆಗೆ?
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


