ನವದೆಹಲಿ: ಗುರುಗ್ರಾಮದ ಶಿಕೋಡ್‌ಪುರದಲ್ಲಿ ನಡೆದ ಭೂ ಅಕ್ರಮದಲ್ಲಿ ಸಂಸದೆ ಪ್ರಿಯಾಂಕಾ ಗಾಂಧಿ ಪತಿ, ಉದ್ಯಮಿ ರಾಬರ್ಟ್ ವಾದ್ರಾ 58 ಕೋಟಿ ರೂ. ಅಕ್ರಮ ಲಾಭ ಗಳಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
ಭೂ ಅಕ್ರಮಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಚಾರ್ಜ್ ಶೀಟ್ ಸಲ್ಲಿಸಿದ್ದು, ರಾಬರ್ಟ್ ವಾದ್ರಾ ಮತ್ತು ಅವರ ಸಹಚರರಾದ ಸತ್ಯಾನಂದ್ ಯಾಜೀ ಮತ್ತು ಕೇವಲ್ ಸಿಂಗ್ ವಿರ್ಕ್ ವಿರುದ್ಧ, ಅವರಿಗೆ ಸಂಬಂಧಿಸಿದ ಹಲವು ಕಂಪನಿಗಳ ವಿರುದ್ಧ ಆರೋಪ ಹೊರಿಸಲಾಗಿದೆ. ರಾಬರ್ಟ್ ವಿರುದ್ಧ ಮೂರು ಪ್ರಕರಣಗಳ ತನಿಖೆ ನಡೆಯುತ್ತಿದ್ದ ಮೊದಲ ಚಾರ್ಜ್‌ಶೀಟ್ ಜುಲೈ 17 ರಂದು ಸಲ್ಲಿಸಲಾಗಿತ್ತು.
ಭೂಮಿ ಖರೀದಿ ಹಗರಣದಲ್ಲಿ 5 ಕೋಟಿ ರೂ.ಗಳನ್ನು ಬ್ಲೂ ಬ್ರಿಜ್ ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್ ಮೂಲಕ ಮತ್ತು 53 ಕೋಟಿ ರೂ.ಗಳನ್ನು ಎಸ್‌ಎಲ್‌ಎಚ್‌ಪಿಎಲ್ ಮೂಲಕ ರವಾನಿಸಲಾಗಿದೆ. ವಾದ್ರಾ ಈ ಹಣವನ್ನು ಸ್ಥಿರ ಆಸ್ತಿಗಳ ಖರೀದಿ ಮತ್ತು ಹೂಡಿಕೆಗಳಲ್ಲಿ ಬಳಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
ಬೆಂಗಳೂರಲ್ಲಿ ನೇಪಾಳ ರುದ್ರಾಕ್ಷಿಗಳ ಪ್ರದರ್ಶನ; ಎಲ್ಲಿ, ಎಲ್ಲಿಯವರೆಗೆ?
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


