ಶ್ರೀನಗರ: ಉತ್ತರ ರೈಲ್ವೆ ಹೊಸದಾಗಿ ಆರಂಭಿಸಿದ ಸರಕುಸಾಗಣೆ ರೈಲು ಶನಿವಾರ ಕಾಶ್ಮೀರದ ಅನಂತನಾಗ್‌ಗೆ ತಲುಪಿತು.
ಇದು ಕಾಶ್ಮೀರ ಕಣಿವೆಗೆ ಆಗಮಿಸಿದ ಪ್ರಥಮ ಸರಕುಸಾಗಣಿ ರೈಲಾಗಿದೆ. ಪಂಜಾಬ್‌ನ ರೂಪನಗರದಿಂದ ಹೊರಟ ರೈಲು, 18 ಗಂಟೆಗಳಲ್ಲಿ ಸುಮಾರು 600 ಕಿಮೀ ದೂರವನ್ನು ಕ್ರಮಿಸಿ ಅನಂತನಾಗ್ ನಲ್ಲಿರುವ ಹೊಸ ಗೂಡ್ಸ್ ಶೆಡ್‌ಗೆ ಆಗಮಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ರೈಲ್ವೆ ತನ್ನ ಉದ್ದದ ಉಧಂಪುರ- ಶ್ರೀನಗರ-ಬಾರಾಮುಲ್ಲಾ ರೈಲ್ ಲಿಂಕ್ (ಯುಎಸ್‌ಬಿಆರ್‌ಎಲ್) ಯೋಜನೆಯಡಿ ಈ ಫೈಟ್ ಟ್ರೇನ್ ಸಂಚಾರವನ್ನು ಆರಂಭಿಸಿದೆ. 21 ಬಿಸಿಎನ್ ವ್ಯಾಗನ್‌ಗಳಿರುವ ರೈಲು ಸಿಮೆಂಟ್ ಹೊತ್ತು ರೂಪ್‌ನಗರದಿಂದ ಪ್ರಯಾಣ ಆರಂಭಿಸಿತ್ತು.
ಬೆಂಗಳೂರಲ್ಲಿ ನೇಪಾಳ ರುದ್ರಾಕ್ಷಿಗಳ ಪ್ರದರ್ಶನ; ಎಲ್ಲಿ, ಎಲ್ಲಿಯವರೆಗೆ?
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


