ಕನ್ನಡ ಚಲನಚಿತ್ರರಂಗದ ಎವರ್‌ಗ್ರೀನ್ ಚಿತ್ರ ಮಿಲನ ನಿರ್ದೇಶಕ ಪ್ರಕಾಶ್ ವೀರ್ ನಿರ್ದೇಶನದ ಮತ್ತೊಂದು ಚಿತ್ರ ದಿ ಡೆವಿಲ್ ಇಂದು ( ಡಿಸೆಂಬರ್ 11 ) ಬಿಡುಗಡೆಯಾಗಿದೆ.
ದರ್ಶನ್ ಹಾಗೂ ಪ್ರಕಾಶ್ ವೀರ್ ಕಾಂಬಿನೇಷನ್‌ನ ಎರಡನೇ ಚಿತ್ರ ಇದಾಗಿದ್ದು, ತಾರಕ್ ಬಳಿಕ ಈ ಜೋಡಿ ಮತ್ತೆ ಒಂದಾಗಿದೆ. 2 ಗಂಟೆ 49 ನಿಮಿಷಗಳ ರನ್‌ಟೈಮ್ ಇರುವ ಡೆವಿಲ್ ಬೆಳಗ್ಗೆ 6.30ರಿಂದಲೇ ಪ್ರದರ್ಶನ ತೆರೆ ಕಂಡಿದ್ದು, ಬೆಂಗಳೂರು ನಗರವೊಂದರಲ್ಲೇ ಬೆಳಗ್ಗೆ 9 ಗಂಟೆವರೆಗೆ ಒಟ್ಟು 160 ಪ್ರದರ್ಶನಗಳನ್ನು ಕಂಡು ನಗರದಲ್ಲಿ ಅತಿಹೆಚ್ಚು ಅರ್ಲಿ ಮಾರ್ನಿಂಗ್ ಪ್ರದರ್ಶನಗಳನ್ನು ಕಂಡ ಮೂರನೇ ಚಿತ್ರ ಎಂಬ ದಾಖಲೆಯನ್ನೂ ಸಹ ಬರೆದಿದೆ.
ಬೆಂಗಳೂರು ನಗರವೊಂದರಲ್ಲಿಯೇ ಮೊದಲ ದಿನ ಬರೋಬ್ಬರಿ 939 ಪ್ರದರ್ಶನಗಳನ್ನು ಪಡೆದುಕೊಂಡಿರುವ ಡೆವಿಲ್ ಮೊದಲ ದಿನದ ಅಡ್ವಾನ್ಸ್ ಬುಕಿಂಗ್‌ನಲ್ಲಿ 5 ಕೋಟಿ ರೂ ಕಲೆಕ್ಷನ್ ಮಾಡಿದೆ. ಇನ್ನು ಒಟ್ಟಾರೆ ರಾಜ್ಯದ ಲೆಕ್ಕಾಚಾರಕ್ಕೆ ಬಂದರೆ ಕೇವಲ ಮುಂಗಡ ಬುಕಿಂಗ್‌ನಿಂದಲೇ ಡೆವಿಲ್ 7 ಕೋಟಿ ರೂ ಗಳಿಕೆ ಮಾಡಿದ್ದು, ಇಂದಿನ ಟಿಕೆಟ್ ಮಾರಾಟ ಸೇರಿದರೆ ಬಾಕ್ಸ್ ಆಫೀಸ್‌ನಲ್ಲಿ 15 ಕೋಟಿ ಗಳಿಕೆ ಮಾಡುವ ನಿರೀಕ್ಷೆಯಿದೆ.
ಅತ್ತ ಮೊದಲ ಪ್ರದರ್ಶನ ವೀಕ್ಷಿಸಿ ಹೊರಬಂದಿರುವ ಅಭಿಮಾನಿಗಳು ಚಿತ್ರಕ್ಕೆ ಒಳ್ಳೆಯ ವಿಮರ್ಶೆ ನೀಡಿದ್ದು, ಬೆಳಗಿನ ಪ್ರದರ್ಶನ ಮುಗಿದ ಬಳಿಕ ನಡೆಯುವ ಪ್ರದರ್ಶನ ವೀಕ್ಷಿಸುವ ನೈಜ ಸಿನಿ ರಸಿಕರ ವಿಮರ್ಶೆ ಚಿತ್ರದ ಭವಿಷ್ಯವನ್ನು ನಿರ್ಧರಿಸಲಿದೆ.
ಒಟ್ಟಿನಲ್ಲಿ ಚಿತ್ರ ಒಂದೊಳ್ಳೆ ಅಡ್ವಾನ್ಸ್ ಬುಕಿಂಗ್ ನಂಬರ್ ಗಿಟ್ಟಿಸಿದ್ದು, ಮೊದಲ ದಿನ ದರ್ಶನ್ ಸಿನಿ ವೃತ್ತಿ ಜೀವನದ ದೊಡ್ಡ ಓಪನಿಂಗ್ ಎಂಬ ದಾಖಲೆ ಬರೆಯುವ ಎಲ್ಲ ಲಕ್ಷಣಗಳು ಎದ್ದು ಕಾಣುತ್ತಿವೆ.
ಸ್ಲಿಮ್ ಆಗಲು ₹11 ಸಾವಿರ ಖರ್ಚು: ತೂಕ ಇಳಿಕೆ ಇಂಜೆಕ್ಷನ್ ಪಡೆದು ಜೀವವನ್ನೇ ಪಣಕ್ಕಿಟ್ಟ ಯುವತಿ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


