ರಾಕಿಂಗ್ ಸ್ಟಾರ್ ಯಶ್ ನಟನೆಯ ಹಾಗೂ ಮಲಯಾಳಂನ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಟಾಕ್ಸಿಕ್ ಸದ್ಯ ಚಿತ್ರೀಕರಣದ ಹಂತದಲ್ಲಿದೆ.
ಕೆಜಿಎಫ್ ಸಿನಿಮಾ ಸೀರೀಸ್ ಮುಕ್ತಾಯವಾಗುತ್ತಿದ್ದಂತೆ ಯಶ್ ನಾಯಕನಾಗಿ ಮುಂದೆ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಅಭಿಮಾನಿಗಳು ಕಾತರರಾಗಿ ಹಾಗೂ ಕುತೂಹಲದಿಂದ ಕಾಯುತ್ತಿದ್ದ ಸಂದರ್ಭದಲ್ಲಿ ಸೆಟ್ಟೇರಿದ ಟಾಕ್ಸಿಕ್ ಬಹುತಾರಾಗಣವನ್ನು ಹೊಂದಿದ್ದು, ವಿದೇಶಿ ತಂತ್ರಜ್ಞಾನರಿಂದ ಕೂಡಿದೆ.
ಹೀಗೆ ಪ್ಯಾನ್ ವರ್ಲ್ಡ್ ಲೆವೆಲ್‌ನಲ್ಲಿ ತಯಾರಾಗುತ್ತಿರುವ ಟಾಕ್ಸಿಕ್ ಯಾವ ರೀತಿ ಮೂಡಿ ಬರಲಿದೆ ಎಂಬ ಕುತೂಹಲ ಸಿನಿ ರಸಿಕರಲ್ಲಿ ಮನೆ ಮಾಡಿದ್ದು, ಯಶ್ ಹುಟ್ಟುಹಬ್ಬದಂದು ಬಿಡುಗಡೆಯಾಗಿದ್ದ ಗ್ಲಿಂಪ್ಸ್ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿತ್ತು.
ಇದೀಗ ಚಿತ್ರದ ಚಿತ್ರೀಕರಣದ ಸಣ್ಣ ವಿಡಿಯೊವೊಂದು ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅದು ಕಾಡ್ಗಿಚ್ಚಿನಂತೆ ವೈರಲ್ ಆಗಿದೆ.
ಈ ವಿಡಿಯೊದಲ್ಲಿ ಬಾಲ್ಕನಿಯೊಂದರಲ್ಲಿ ಹೊರಗೆ ನೋಡುತ್ತಾ ನಿಂತ ಯಶ್ ಕೈನಲ್ಲಿ ಸಿಗರೇಟ್ ಹಿಡಿದು, ತಮ್ಮ ಖಡಕ್ ಬಾಡಿ ತೋರಿಸುತ್ತಾ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದು, ಇದು ಚಿತ್ರದ ಮೇಲಿನ ನಿರೀಕ್ಷೆ ಎಂಬ ಬೆಂಕಿಗೆ ಪೆಟ್ರೋಲ್ ಸುರಿದಂತಾಗಿದೆ. ಅಲ್ಲದೇ ಚಿತ್ರೀಕರಣದ ಸೆಟ್‌ನಲ್ಲಿ ಗೌಪ್ಯತೆಯ ಕುರಿತ ಪ್ರಶ್ನೆಗಳೂ ಸಹ ಎದ್ದಿವೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


