ಮಧ್ಯಪ್ರದೇಶ: ನಾವೆಲ್ಲರೂ ಒಂದು ಎಂದು ಹೇಳುವ ಜನರ ನಡುವೆ ಇನ್ನೂ ಸಹ ಜಾತಿ ವಿಷಯದಲ್ಲಿ ತಾರತಮ್ಯ ಮಾಡುವ, ದಬ್ಬಾಳಿಕೆ ಮಾಡುವ ಜನರಿದ್ದಾರೆ ಎನ್ನುವುದಕ್ಕೆ ಮಧ್ಯ ಪ್ರದೇಶದ ದಾಮೊ ಜಿಲ್ಲೆಯಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿ.
ಪುರುಷೋತ್ತಮ್ ಖುಸ್ವಾಹಾ ಎಂಬ ದಲಿತ ಯುವಕ ಬ್ರಾಹ್ಮಣ ಸಮುದಾಯದ ಅನುಜ್ ಪಾಂಡೆ ಎಂಬ ಯುವಕನ ಕಾಲು ತೊಳೆದಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಲ್ಲದೇ ಕಾಲು ತೊಳೆದ ನೀರನ್ನು ದಲಿತ ಯುವಕನಿಗೆ ಕುಡಿಯುವಂತೆ ಮಾಡಲಾಗಿದೆ ಎಂಬ ಆರೋಪವೂ ಸಹ ಕೇಳಿಬಂದಿದೆ. ಇಷ್ಟು ಮಾತ್ರವಲ್ಲದೇ ದಲಿತ ಯುವಕ ಪುರುಷೋತ್ತಮ್‌ನಿಂದ ತಮ್ಮ ಸಮುದಾಯಕ್ಕೆ 5100 ರೂಪಾಯಿಗಳನ್ನು ತಪ್ಪು ಕಾಣಿಕೆ ಎಂದೂ ಸಹ ಸ್ವೀಕರಿಸಲಾಗಿದೆ.
ಇಷ್ಟೆಲ್ಲ ನಡೆಯಲು ಕಾರಣ ಪುರುಷೋತ್ತಮ್ ಸಾಮಾಜಿಕ ಜಾಲತಾಣದಲ್ಲಿ ಅನುಜ್ ಪಾಂಡೆಗೆ ಚಪ್ಪಲಿ ಹಾರ ಹಾಕಿ ಫೋಟೊ ಎಡಿಟ್ ಮಾಡಿ ಅದನ್ನು ಹರಿಬಿಟ್ಟಿದ್ದ. ಇದು ವೇಗವಾಗಿ ಹರಡಿ ಅನುಜ್ ಪಾಂಡೆ ಹಾಗೂ ಆತನ ಸಮುದಾಯದವರ ಗಮನಕ್ಕೆ ಬಂದಿದೆ. ಇದರಿಂದ ಕೋಪಗೊಂಡ ಸಮುದಾಯದ ಮಂದಿ ಪುರುಷೋತ್ತಮ್‌ನನ್ನು ಹಿಡಿದು ತಂದು ಈ ರೀತಿ ಸೇಡು ತೀರಿಸಿಕೊಂಡಿದ್ದಾರೆ.
ತಪ್ಪು ಮಾಡಿದವನನ್ನು ಶಿಕ್ಷಿಸಲೆಂದೇ ಕಾನೂನಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಫೋಟೊಗೆ ದೂರು ದಾಖಲಿಸುವ ಬದಲಾಗಿ ಆತನನ್ನು ಎಳೆತಂದು ಈ ರೀತಿ ಪಾದ ತೊಳೆದ ನೀರು ಕುಡಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ.
ಏರಿಕೆ ಮುಂದುವರೆಸಿದ ಚಿನ್ನ, ಬೆಳ್ಳಿ! ಇಂದಿನ ರೇಟ್ ಚೆಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


