ಆಳಪ್ಪುಳ: ಕಾಡುಹಂದಿಗಳು ರೈತ ಬೆಳೆದ ಬೆಳೆಗಳನ್ನು ಹಾನಿ ಮಾಡುವ ಕಾರಣದಿಂದಾಗಿ ಅವುಗಳ ಉಪಟಳ ತಡೆಯಲು ರೈತರು ನಾನಾ ಹಾದಿಗಳನ್ನು ಕಂಡುಕೊಂಡಿದ್ದಾರೆ. ಆದರೂ ಸಹ ಕಾಡು ಹಂದಿಗಳ ಹಾವಳಿ ಸಂಪೂರ್ಣವಾಗಿ ಹತೋಟಿಗೆ ಬಂದಿಲ್ಲ. ಈ ಕುರಿತಾಗಿ ಕೇರಳದ ಸಚಿವರೊಬ್ಬರು ಮಾತನಾಡಿದ್ದು, ಕಾಡು ಹಂದಿಗಳನ್ನು ಕೊಂದರೆ ಸಮಸ್ಯೆ ತಪ್ಪಲಿದೆ ಎಂದಿದ್ದಾರೆ.
ಆಳಪ್ಪುಳ ಜಿಲ್ಲೆಯ ಪಲಮೇಲ್ ಗ್ರಾಮ ಪಂಚಾಯತ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೇರಳದ ಕೃಷಿ ಸಚಿವ ಪಿ. ಪ್ರಸಾದ್ ʼಕಾನೂನು ಕಾಡು ಹಂದಿಯ ಮಾಂಸ ಸೇವನೆಯನ್ನು ನಿಷೇಧಿಸುತ್ತದೆ. ನನ್ನ ಪ್ರಕಾರ ಕೃಷಿ ಜಮೀನಿನಲ್ಲಿ ಕೊಲ್ಲಲ್ಪಟ್ಟ ಕಾಡು ಹಂದಿಗಳ ಮಾಂಸವನ್ನು ಸೇವಿಸಲು ಜನರಿಗೆ ಅವಕಾಶ ನೀಡಬೇಕು. ಜನರು ಕಾಡು ಹಂದಿಗಳನ್ನು ಕೊಂದು ಅದರ ಮಾಂಸ ತಿನ್ನಲು ಅನುಮತಿ ಹೊಂದಿದ್ದರೆ ಅವುಗಳ ಸಮಸ್ಯೆಯನ್ನು ವೇಗವಾಗಿ ಪರಿಹರಿಸಬಹುದು. ಆದರೆ ಅದಕ್ಕೆ ಕಾನೂನು ಅನುಮತಿ ನೀಡುವುದಿಲ್ಲʼ ಎಂದು ಹೇಳಿದ್ದಾರೆ.
ಈ ಹೇಳಿಕೆ ಸದ್ಯ ವಿವಾದ ಹುಟ್ಟುಹಾಕಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧಗಳ ಚರ್ಚೆ ಏರ್ಪಟ್ಟಿದೆ.
ದಕ್ಷಿಣ ಭಾರತದ ಜನಪ್ರಿಯ ತಿಂಡಿ ‘ಇಡ್ಲಿ’ಗೆ ಗೂಗಲ್‌ನಿಂದ ಸ್ಪೆಷಲ್ ಡೂಡಲ್ ಗೌರವ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


