ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿ ಹೆಬ್ಗಗೋಡಿಯ ಅನಂತ್‌ನಗರದಲ್ಲಿನ ಹಾಲಿನ ಅಂಗಡಿಯೊಂದರಲ್ಲಿ ಕೌಂಟರ್ ಕಡೆ ಏಕಾಏಕಿ ನುಗ್ಗಿದ ವ್ಯಕ್ತಿಯೊಬ್ಬ ಮಾಲೀಕನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಡೆದಿದೆ.
ಈ ಘಟನೆ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಲ್ಲೆ ಮಾಡಿದ ಕಿಡಿಗೇಡಿ ಮೂಲತಃ ಬಿಹಾರದ ತರುಣ್ ಚೌಧರಿ ಎನ್ನಲಾಗಿದೆ.
ಅಂಗಡಿಗೆ ಬಂದ ಈತನಿಗೆ ಕಾರ್ ಪಾರ್ಕ್ ಮಾಡಲು ಸರಿಯಾದ ಜಾಗ ಇಲ್ಲ ಎಂಬ ಕಾರಣಕ್ಕೆ ಈ ರೀತಿ ಗೂಂಡಾ ವರ್ತನೆ ತೋರಿದ್ದು, ಆತ ಮಾಲೀಕನ ಹೆಂಡತಿ ಹಾಗೂ ಮಗುವಿನ ಮುಂದೆಯೇ ಹಲ್ಲೆ ಮಾಡಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.
ಈ ಹಲ್ಲೆ ಆಧಾರದ ಮೇಲೆ ಗೂಂಡಾ ತರುಣ್ ಚೌಧರಿಯನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.
ಸದ್ಯ ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲ್ಲೆ ಮಾಡಿದ ಗೂಂಡಾ ವಿರುದ್ಧ ಕನ್ನಡಿಗರು ಕಿಡಿಕಾರಿದ್ದಾರೆ. ಹೊರ ರಾಜ್ಯಗಳಿಂದ ಬಂದು ನಮ್ಮ ನಾಡಿನ ಜನರ ಮೇಲೆ ಹಲ್ಲೆ ನಡೆಸುವ ಇಂಥವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ಲಾಲ್‌ಬಾಗ್‌ಗೆ ಬರಲಿದೆ ಜಿಮ್; ಅಭಿವೃದ್ಧಿಗೆ 10 ಕೋಟಿ ಘೋಷಿಸಿದ ಡಿಕೆಶಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


