ಭಾರತ ಪ್ರವಾಸವನ್ನು ಕೈಗೊಂಡಿದ್ದ ವೆಸ್ಟ್‌ಇಂಡೀಸ್ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಿದ ಭಾರತ ಮೊದಲ ಪಂದ್ಯದಲ್ಲಿ 140 ರನ್‌ಗಳ ಗೆಲುವು ಹಾಗೂ ಎರಡನೇ ಪಂದ್ಯದಲ್ಲಿ 7 ವಿಕೆಟ್‌ಗಳ ಜಯವನ್ನು ಸಾಧಿಸಿ ಸರಣಿಯನ್ನು ವೈಟ್‌ವಾಷ್ ಮಾಡಿದೆ.
ಈ ಸರಣಿ ಗೆಲುವಿನ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ಭಾರತದ ಯುವ ಕ್ರಿಕೆಟಿಗ ಹರ್ಷಿತ್ ರಾಣಾ ಪರ ಬ್ಯಾಟ್ ಬೀಸಿದ್ದಾರೆ.
ಗೌತಮ್ ಗಂಭೀರ್ ಕೋಚ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ವಿವಿಧ ಮಾದರಿಯ ಕ್ರಿಕೆಟ್ ತಂಡಗಳಲ್ಲಿ ಭಾರೀ ಬದಲಾವಣೆಗಳು ನಡೆದಿದ್ದು, ಹಲವು ದಿಗ್ಗಜರೇ ತಂಡದಿಂದ ಹೊರಗುಳಿದಿದ್ದಾರೆ. ಅಂದರೆ ಟೆಸ್ಟ್ ಆಡುವವರು ಟಿ20, ಏಕದಿನಕ್ಕಿಲ್ಲ, ಏಕದಿನ ಆಡುವವರಿಗೆ ಉಳಿದ ಮಾದರಿಯಲ್ಲಿ ಸ್ಥಾನವಿಲ್ಲ ಎಂಬಂತಾಗಿದೆ.
ಆದರೆ ಹರ್ಷಿತ್ ರಾಣಾಗೆ ಮಾತ್ರ ಎಲ್ಲ ಮೂರು ಮಾದರಿಯ ತಂಡದಲ್ಲಿಯೂ ಸ್ಥಾನ ಸಿಕ್ಕಿದೆ. ಈ ವಿಷಯವನ್ನಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರ್ಷಿತ್ ರಾಣಾಗೆ ಬಿಸಿಸಿಐ ಮಣೆ ಹಾಕುತ್ತಿದ್ದು, ಇತರೆ ಆಟಗಾರರಿಗೆ ತಾರತಮ್ಯ ನಡೆಯುತ್ತಿದೆ ಎಂದು ಟ್ರೋಲ್ ಮಾಡಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿದ ಗೌತಮ್ ಗಂಭೀರ್ ʼ23 ವರ್ಷದ ಕ್ರಿಕೆಟಿಗನನ್ನು ನೀವು ಗುರಿಯನ್ನಾಗಿಸಿ ಟ್ರೋಲ್ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಹರ್ಷಿತ್ ರಾಣಾ ತಂದೆ ಮಾಜಿ ಅಧ್ಯಕ್ಷರಲ್ಲ. ಓರ್ವ ಆಟಗಾರನನ್ನು ಗುರಿಯಾಗಿಸುವುದು ಸರಿಯಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಟ್ರೋಲ್ ಸರಿಯಲ್ಲ, ಆತನ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ. ಯಾರ ಮಕ್ಕಳು ಬೇಕಾದರೂ ಕ್ರಿಕೆಟ್ ಆಡಬಹುದು. ಎಲ್ಲರಿಗೂ ಭಾರತ ಕ್ರಿಕೆಟ್ ಚೆನ್ನಾಗಿ ಆಗಲು ಶ್ರಮಿಸಬೇಕಾದ ನೈತಿಕ ಹೊಣೆಗಾರಿಕೆ ಇದೆ. ನಿಮ್ಮ ಯುಟ್ಯೂಬ್ ಚಾನೆಲ್ ನಡೆಸಲು ಏನೇನೋ ಹೇಳಬೇಡಿ. ನಿಮಗೆ ಬೇಕಿದ್ದರೆ ನನ್ನನ್ನು ಟ್ರೋಲ್ ಮಾಡಿ. ಅದನ್ನು ನಾನು ನಿಭಾಯಿಸುತ್ತೇನೆ ಹಾಗೂ ಆ ಹುಡುಗನನ್ನು ಬಿಟ್ಟುಬಿಡಿ. ಇದು ಎಲ್ಲ ಯುವ ಕ್ರಿಕೆಟಿಗರಿಗೂ ಅನ್ವಯಿಸಲಿದೆʼ ಎಂದು ಹೇಳಿಕೆ ನೀಡಿದರು.
ಚಿಕ್ಕಬಳ್ಳಾಪುರ: ಕೆಲಸ ಅರಸಿ ಬಂದವಳ ಮೇಲೆ ಅತ್ಯಾಚಾರ ಎಸಗಿ ಸ್ನೇಹಿತನಿಗೂ ಕರೆ ಮಾಡಿ ಅತ್ಯಾಚಾರ ಮಾಡಿಸಿದ ಕೀಚಕ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


