Monday, November 2, 2026
spot_img
More
    spot_img
    HomeBreaking Newsಬಿಹಾರ ಚುನಾವಣೆ ಫಲಿತಾಂಶ: ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ಹಿನ್ನಡೆ

    ಬಿಹಾರ ಚುನಾವಣೆ ಫಲಿತಾಂಶ: ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ಹಿನ್ನಡೆ

    ಬಿಹಾರ ವಿಧಾನಸಭೆ ಚುನಾವಣೆ 2025ರ ಮತ ಎಣಿಕೆ ನಡೆಯುತ್ತಿದ್ದು, ಮಹಾಘಟಬಂಧನ್ ಮೈತ್ರಿಕೂಟ ಭಾರೀ ಮುಖಭಂಗ ಅನುಭವಿಸಿದೆ. ಸದ್ಯದ ಮಾಹಿತಿಯಂತೆ ಎನ್‌ಡಿಎ ಮೈತ್ರಿಕೂಟ 189 ಸೀಟುಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಎನ್‌ಡಿಎ ಸರ್ಕಾರ ರಚನೆಯತ್ತ ಸಾಗುತ್ತಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 122.

    ಬಿಹಾರ ರಾಜ್ಯದ 243 ಸೀಟುಗಳಿಗೆ ನವೆಂಬರ್ 6, 11ರಂದು ಎರಡು ಹಂತದಲ್ಲಿ ಮತದಾನ ನಡೆದಿತ್ತು. ಶುಕ್ರವಾರ ಮತ ಎಣಿಕೆ ನಡೆಯುತ್ತಿದೆ. ಮಹಾಘಟಬಂಧನ್ ಕೇವಲ 50 ಸೀಟುಗಳಲ್ಲಿ ಮುನ್ನಡೆಯಲ್ಲಿದೆ.

    ಚುನಾವಣೆಯಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ರಾಘೋಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಕ್ಷೇತ್ರದಿಂದ ಅವರು 3ನೇ ಬಾರಿಗೆ ಆಯ್ಕೆ ಬಯಸಿದ್ದಾರೆ. ಆದರೆ ಮಹಾಘಟಬಂಧನ್ ಮೈತ್ರಿಕೂಟದ ಸಿಎಂ ಅಭ್ಯರ್ಥಿಯಾದ ಅವರು ಹಿನ್ನಡೆಯನ್ನು ಪಡೆದಿದ್ದಾರೆ.

    ತೇಜಸ್ವಿ ಯಾದವ್ ಚುನಾವಣೆಯಲ್ಲಿ 20052 ಮತಗಳನ್ನು ಪಡೆದಿದ್ದು ಬಿಜೆಪಿಯ ಸತೀಶ್ ಕುಮಾರ್ ಯಾದವ್ ವಿರುದ್ಧ 106 ಮತಗಳ ಹಿನ್ನಡೆಯನ್ನು ಅನುಭವಿಸಿದ್ದಾರೆ. 2000 ಮತಗಳ ಹಿನ್ನಡೆಯಲ್ಲಿದ್ದ ಅವರು ಪುನಃ ಮುನ್ನಡೆಯನ್ನು ಕಾಯ್ದುಕೊಳ್ಳುತ್ತಿದ್ದಾರೆ.

    ಸಿಎಂ ಅಭ್ಯರ್ಥಿ: ಮತದಾನಕ್ಕೂ ಮೊದಲೇ ಮಹಾಘಟಬಂಧನ್ ಮೈತ್ರಿಕೂಟ ತೇಜಸ್ವಿ ಯಾದವ್ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಒಂದು ವೇಳೆ ಅವರು ಸೋತರೆ ಮೈತ್ರಿಕೂಟ ಭಾರೀ ಮುಖಭಂಗ ಅನುಭವಿಸಲಿದೆ.

    ಲಾಲೂ ಪ್ರಸಾದ್ ಯಾದವ್ ಕುಟುಂಬಕ್ಕೂ ರಾಘೋಪುರ ಕ್ಷೇತ್ರಕ್ಕೂ ಭಾರೀ ನಂಟು. ಈ ಹಿಂದೆ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಲಾಲೂ ಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ ಇಬ್ಬರು ಸಹ ಬಿಹಾರದ ಮುಖ್ಯಮಂತ್ರಿಯಾಗಿದ್ದರು.

    ಆದ್ದರಿಂದ ಪೋಷಕರ ಬಳಿಕ ತೇಜಸ್ವಿ ಯಾದವ್ ರಾಘೋಪುರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕ್ಷೇತ್ರದಲ್ಲಿ 2 ಬಾರಿ ಗೆಲುವು ಸಾಧಿಸಿರುವ ಅವರು 3ನೇ ಬಾರಿಗೆ ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿದ್ದಾರೆ.

    ರಾಘೋಪುರ ಕ್ಷೇತ್ರದಲ್ಲಿ ಪ್ರಶಾಂತ್ ಕಿಶೋರ್ ನೇತೃತ್ವದ ಜನ್ ಸುರಜ್ ಪಕ್ಷದ ಅಭ್ಯರ್ಥಿ ಚಂಚುಲ್ ಕುಮಾರ್ ಸಹ ಬಿಜೆಪಿ, ತೇಜಸ್ವಿ ಯಾದವ್‌ಗೆ ಪೈಪೋಟಿಯನ್ನು ನೀಡುತ್ತಿದ್ದಾರೆ.

    ತೇಜಸ್ವಿ ಯಾದವ್ ಎರಡು ಬಾರಿ ಬಿಹಾರದ ಉಪ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಈ ಬಾರಿ ಮಹಾಘಟಬಂಧನ್ ಅವರನ್ನು ಸಿಎಂ ಅಭ್ಯರ್ಥಿ ಎಂದು ಚುನಾವಣೆಗೂ ಮೊದಲೇ ಘೋಷಣೆ ಮಾಡಿದೆ.

    ತೇಜಸ್ವಿ ಯಾದವ್ ಚುನಾವಣಾ ಪ್ರಚಾರ ನಡೆಸುವಾಗಲೇ ನವೆಂಬರ್ 1ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತೇನೆ. ಇಂಡಿಯಾ ಮೈತ್ರಿಕೂಟ ಚುನಾವಣೆ ಗೆಲ್ಲಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದರು.

    ಚುನಾವಣೋತ್ತರ ಸಮೀಕ್ಷೆ ಪ್ರಕಟಗೊಂಡ ಬಳಿಕ ಇದು ಬಿಜೆಪಿ ನಾಯಕರು ಮಾಡಿಸಿರುವ ಸಮೀಕ್ಷೆ, ರಾಜ್ಯದಲ್ಲಿ ಮಹಾಘಬಂಧನ್ ಗೆಲ್ಲಲಿದೆ ಜನರ ಮೇಲೆ ನನಗೆ ನಂಬಿಕೆ ಇದೆ ಎಂದು ಹೇಳಿದ್ದರು.

    ಸದ್ಯದ ಮಾಹಿತಿಯಂತೆ ಮಹಾಘಟಬಂಧನ್ ಮೈತ್ರಿಕೂಟ 51 ಸೀಟುಗಳಲ್ಲಿ ಮುನ್ನಡೆಯಲ್ಲಿದೆ. ಆರ್‌ಜೆಡಿ 35, ಕಾಂಗ್ರೆಸ್ 7, ವಿಐಪಿ 1, ಎಡಪಕ್ಷಗಳು 8 ಸೀಟುಗಳಲ್ಲಿ ಮುನ್ನಡೆಯಲ್ಲಿವೆ.

    ತೇಜಸ್ವಿ ಯಾದವ್ ಹಿನ್ನಡೆ ಕಂಡು, ಚುನಾವಣೆಯಲ್ಲಿ ಆರ್‌ಜೆಡಿ ಪಕ್ಷದ ಹಿನ್ನಡೆ ನೋಡಿ ಪಾಟ್ನಾದಲ್ಲಿರುವ ಪಕ್ಷದ ಕಚೇರಿಯಿಂದ ಕಾರ್ಯಕರ್ತರು ಹೊರ ಹೋಗಿದ್ದಾರೆ.

    ಬಿಹಾರದಲ್ಲಿ ಮಹಾಘಬಂಧನ್ ಮೈತ್ರಿಕೂಟ ಸೋಲು ಕಾಣಲಿದೆ ಎಂದು ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ಅಂದಾಜಿಸಿದ್ದವು. ಈಗ ಫಲಿತಾಂಶ ಸಹ ಹಾಗೆಯೇ ಬರುತ್ತಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search