Tuesday, November 3, 2026
spot_img
More
    spot_img
    HomeLatest newsಬಿಹಾರದಲ್ಲಿ ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಹೀನಾಯ ಸೋಲು; ಚುನಾವಣೆಯಲ್ಲಿ ಸ್ಪರ್ಧಿಸಲೇಬಾರದಿತ್ತು ಎಂದ ಧ್ರುವ್‌ ರಾಠಿ

    ಬಿಹಾರದಲ್ಲಿ ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಹೀನಾಯ ಸೋಲು; ಚುನಾವಣೆಯಲ್ಲಿ ಸ್ಪರ್ಧಿಸಲೇಬಾರದಿತ್ತು ಎಂದ ಧ್ರುವ್‌ ರಾಠಿ

    ಬಿಹಾರ ಚುನಾವಣೆಯ ಫಲಿತಾಂಶ ಬಹುತೇಕ ಹೊರಬಿದ್ದಿದ್ದು, ಎನ್‌ಡಿಎ ಬೃಹತ್‌ ಮುನ್ನಡೆ ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಹೆಜ್ಜೆ ಹಾಕಿದೆ. ಇನ್ನೇನು ಕೆಲವೇ ಸುತ್ತುಗಳ ಮತಎಣಿಕೆ ಮಾತ್ರ ಬಾಕಿ ಉಳಿದಿದ್ದು, ಎನ್‌ಡಿಎ 197 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದು, ಮಹಾಘಟ್‌ಬಂಧನ್‌ 40 ಹಾಗೂ ಇತರೆ ಅಭ್ಯರ್ಥಿಗಳು 6 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ.

    ಎನ್‌ಡಿಎ ಬಣದಲ್ಲಿನ ಬಿಜೆಪಿ 90 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಜೆಡಿಯು 78 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ, ಎಲ್‌ಜೆಪಿ 20 ಕ್ಷೇತ್ರಗಳಲ್ಲಿ, ಎಚ್‌ಎಎಮ್‌ 5 ಕ್ಷೇತ್ರಗಳಲ್ಲಿ ಹಾಗೂ ಆರ್‌ಎಲ್‌ಎಮ್‌ 4 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಅತ್ತ ಮಹಾಘಟ್‌ಬಂದನ್‌ ಪೈಕಿ ಆರ್‌ಜೆಡಿ 30 ಕ್ಷೇತ್ರಗಳಲ್ಲಿ, ಕಾಂಗ್ರೆಸ್‌ ಕೇವಲ 5 ಕ್ಷೇತ್ರಗಳಲ್ಲಿ ಹಾಗೂ ಲೆಫ್ಟ್‌ 5 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿವೆ.

    ಸದ್ಯ ಈ ಅಂಕಿಅಂಶಗಳು ಎಲ್ಲರಲ್ಲೂ ಆಶ್ಚರ್ಯವನ್ನು ಮೂಡಿಸಿವೆ. ಬಿಹಾರದಲ್ಲಿ ಚುನಾವಣೆಯ ಆರಂಭಕ್ಕೂ ಮುನ್ನ ಹಾಗೂ ಮುಕ್ತಾಯದ ಬಳಿಕ ಎನ್‌ಡಿಎ ಹಾಗೂ ಮಹಾಘಟ್‌ಬಂಧನ್‌ ಎರಡೂ ಬಣಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇರಲಿದೆ, ಯಾರೇ ಗೆದ್ದರೂ ಸ್ವಲ್ಪ ಮಟ್ಟದ ಅಂತರದಲ್ಲಿ ಗೆಲ್ಲಲಿದ್ದಾರೆ ಎಂದು ಊಹಿಸಲಾಗಿತ್ತು.

    ಚುನಾವಣೋತ್ತರ ಸಮೀಕ್ಷೆಗಳು ಸಹ ಎನ್‌ಡಿಎ ಗೆಲ್ಲಲಿದೆ ಆದರೆ ದೊಡ್ಡ ಅಂತರದಲ್ಲಿ ಅಲ್ಲ ಎಂದು ಹೆಚ್ಚಾಗಿ ಹೇಳಿದ್ದವು. ಆದರೆ ಈಗಿನ ಫಲಿತಾಂಶ ಆ ಎಲ್ಲ ಊಹೆ ಹಾಗೂ ಸಮೀಕ್ಷೆಗಳನ್ನೂ ಮೀರಿಸಿದೆ. ಸದ್ಯ ಇದೇ ವಿಷಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.

    ಅದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ಧ್ರುವ್‌ ರಾಠಿ ಸಹ ಫಲಿತಾಂಶದ ಕುರಿತು ಮೂರು ಟ್ವೀಟ್‌ ಮಾಡಿ ಮೋಸ ನಡೆದಿದೆ ಎಂದಿದ್ದಾರೆ. ಅರ್ಧದಷ್ಟು ಜನರಿಗೆ ಮೋಸ ಎಂದು ಗೊತ್ತಿರುವಾಗ ಗೆಲ್ಲುವುದರಲ್ಲಿ ಸಂತೋಷವೇಕೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಬಿಹಾರದ ಚುನಾವಣೆಯಲ್ಲಿ ಬಿಜೆಪಿಯಿಂದ ಮೋಸ ನಡೆದಿದೆ ಎಂದು ಆರೋಪಿಸಿದ್ದಾರೆ.

    ಮತ್ತೊಂದು ಟ್ವೀಟ್‌ನಲ್ಲಿ ಜ್ಞಾನೇಶ್‌ ಕುಮಾರ್‌ ಮಾರ್ಚ್‌ 2024ರಲ್ಲಿ ಚುನಾವಣಾ ಆಯೋಗದ ಅಧ್ಯಕ್ಷರಾಗಿ
    ಆಯ್ಕೆಯಾದರು, ಆ ಬಳಿಕ ಏನಾಯಿತೆಂದು ಎಲ್ಲರಿಗೂ ತಿಳಿದೇ ಇದೆ ಎಂದು ಮತ್ತಷ್ಟು ಅನುಮಾನ ಹೊರಹಾಕಿದೆ.

    ಬಳಿಕ ಮತ್ತೊಂದು ಟ್ವೀಟ್‌ ಮಾಡಿದ ಧ್ರುವ್‌ ರಾಠಿ ವಿರೋಧ ಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಬೇಕಿತ್ತು. ಎಸ್‌ಐಆರ್‌ ಹಾಗೂ ವೋಟ್‌ ಚೋರಿ ಬಳಿಕ ಚುನಾವಣೆಯಲ್ಲಿ ಏನಾಗಲಿದೆ ಎಂಬುದು ಅವರಿಗೆ ಮೊದಲೇ ತಿಳಿದಿತ್ತು ಎಂದು ಬೇಸರ ಹೊರಹಾಕಿದ್ದಾರೆ.

    ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ಹಲವರು 101 ಕ್ಷೇತ್ರಗಳಲ್ಲಿ ಕಣಕ್ಕಿಳಿದ ಬಿಜೆಪಿ 90 ಕ್ಷೇತ್ರಗಳಲ್ಲಿ ಗೆಲ್ಲುವುದೆಂದರೆ ಅರ್ಥವೇನು? ಯಾವ ಪಕ್ಷವೂ ಸಹ ಅಷ್ಟು ಸರಾಸರಿ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ ಎಂದು ಕಾಮೆಂಟ್‌ ಮಾಡಿದ್ದಾರೆ.

    ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್‌ ಧೂಳೀಪಟ; ವೋಟ್‌ ಚೋರಿಯೂ ಇಲ್ಲ ಏನೂ ಇಲ್ಲ, ಒಂದೇ ಮಾತಿನಲ್ಲಿ ಪ್ರತಿಕ್ರಿಯಿಸಿದ ಡಿಕೆಶಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search