Thursday, September 3, 2026
spot_img
More
    spot_img
    HomeLatest newsಗರಿಗರಿ ಬೆಂಡೆಕಾಯಿ ಮಸಾಲ ಫ್ರೈ: ಪೌಷ್ಟಿಕತೆಗೂ ಟೇಸ್ಟಿಗೂ ಪರಿಪೂರ್ಣ ಕಾಂಬಿನೇಷನ್

    ಗರಿಗರಿ ಬೆಂಡೆಕಾಯಿ ಮಸಾಲ ಫ್ರೈ: ಪೌಷ್ಟಿಕತೆಗೂ ಟೇಸ್ಟಿಗೂ ಪರಿಪೂರ್ಣ ಕಾಂಬಿನೇಷನ್

    ಬೆಂಡೆಕಾಯಿ ಫ್ರೈ ಹೆಸರು ಕೇಳಿದರೆ ಬಹುತೇಕ ಎಲ್ಲರ ಬಾಯಲ್ಲಿ ನೀರೂರುತ್ತದೆ. ಸಾಂಪ್ರದಾಯಿಕ ಅನ್ನದ ಜೊತೆಗೆ ಕರಿ, ಫ್ರೈ ಅಥವಾ ಮಸಾಲೆ ಸ್ಟೈಲ್‌ನಲ್ಲಿ ಬೆಂಡೆಕಾಯಿ ಡಿಶ್ ಮಾಡುವುದು ಮನೆ ಮನೆಗಳಲ್ಲಿ ಸಾಮಾನ್ಯ. ಅದರಲ್ಲೂ ಕಡಲೆ ಹಿಟ್ಟಿನಲ್ಲಿ ಲೇಪಿಸಿ ತಯಾರಿಸುವ ಗರಿಗರಿಯಾದ ಬೆಂಡೆಕಾಯಿ ಮಸಾಲ ಫ್ರೈ ಎಲ್ಲ ವಯಸ್ಸಿನ ಜನರಿಗೆ ಖಚಿತವಾಗಿಯೂ ಇಷ್ಟವಾಗುತ್ತದೆ.ಈ ಫ್ರೈ ಅನ್ನು ನೀವು ಪಲ್ಯವಾಗಿ ಅಥವಾ ಸೈಡ್ ಡಿಶ್‌ ಆಗಿ ಬಳಸಬಹುದು.ಗರಿಗರಿಯಾದ ಬೆಂಡೆಕಾಯಿ ಫ್ರೈ ಟೇಸ್ಟಿ ಮತ್ತು ಪೌಷ್ಟಿಕವಾಗಿರುತ್ತದೆ. ಬಿಸಿ ಅನ್ನ, ತುಪ್ಪ, ಟೊಮೇಟೊ ತೊಕ್ಕು ಅಥವಾ ಪಳ್ಯ ಜೋತೆಯಲ್ಲಿ ಈ ಮಸಾಲ ಫ್ರೈ ಸವಿದರೆ ರುಚಿಯೇ ಬೇರೆ. ಕೆವಲ ಈರುಳ್ಳಿ ಅಥವಾ ಹಸಿ ಮೆಣಸಿನಕಾಯಿ ಜೊತೆ ತಿನ್ನುವಷ್ಟು ರುಚಿಕರವಾಗಿರುವ ಈ ಡಿಶ್, ಹಪ್ಪಳದ ಬದಲು ಸರ್ವ್ ಮಾಡಬಹುದು.ಊಟದ ಜೊತೆಗೆ ಇಲ್ಲವೆ ಸ್ನ್ಯಾಕ್ಸ್ ಆಗಿ ಸವಿಯಬಹುದು. ರುಚಿಕರವಾದ ಬೆಂಡೆಕಾಯಿ ಮಸಾಲ ಫ್ರೈ ತಯಾರಿಸಲು ಹೆಚ್ಚಿನ ಸಮಯ ಬೇಕಾಗಿಲ್ಲ. ತ್ವರಿತವಾಗಿ ತಯಾರಿಸಬಹುದಾದ ಈ ರೆಸಿಪಿಯು ಹೊಸ ಅಡುಗೆ ಕಲಿಯುವವರಿಗೆ ಹೆಚ್ಚು ಸೂಕ್ತ.ಈ ಮಸಾಲೆ ಫ್ರೈ ಅನ್ನು ನೀವು ಒಮ್ಮೆ ಮಾಡಿ ಸವಿದರೆ ಅದರ ರುಚಿಗೆ ನೀವು ಮಾರು ಹೋಗುತ್ತೀರಿ ಇಂದು ನಾವು ಈ ಸುಲಭವಾದ, ತುಂಬಾ ರುಚಿಕರವಾದ ಬೆಂಡೆಕಾಯಿ ಮಸಾಲ ಫ್ರೈ ಮಾಡುವ ವಿಧಾನ, ಬೇಕಾಗುವ ಪದಾರ್ಥಗಳು, ಮತ್ತು ಪಾಕವಿಧಾನದ ವಿವರಗಳನ್ನು ತಿಳಿದುಕೊಳ್ಳೋಣ.

    Advertisement

    ಬೆಂಡೆಕಾಯಿ ಫ್ರೈ ತಯಾರಿಸಲು ಬೇಕಾಗುವ ಪದಾರ್ಥಗಳು

    ಬೆಂಡೆಕಾಯಿ – 250 ಗ್ರಾಂ

    ಕಡಲೆ ಹಿಟ್ಟು – 1/4 ಕಪ್

    ಅಕ್ಕಿ ಹಿಟ್ಟು – 1/4 ಕಪ್

    ಅರಿಶಿನ – 1/4 ಟೀಸ್ಪೂನ್

    ಕೆಂಪು ಮೆಣಸಿನ ಪುಡಿ – 1/2 ಟೀಸ್ಪೂನ್

    ಜೀರಿಗೆ ಪುಡಿ – 1/2 ಟೀಸ್ಪೂನ್

    ಕೊತ್ತಂಬರಿ ಪುಡಿ – 1/2 ಟೀಸ್ಪೂನ್

    ಚಾಟ್ ಮಸಾಲಾ – 1/2 ಟೀಸ್ಪೂನ್

    ನಿಂಬೆ ರಸ – 1 ಟೀಸ್ಪೂನ್

    ಎಣ್ಣೆ – ಹುರಿಯಲು

    ಉಪ್ಪು – ರುಚಿಗೆ ತಕ್ಕಂತೆ

    ತಯಾರಿಸುವ ವಿಧಾನ

    ಬೆಂಡೆಕಾಯಿಯನ್ನು ಚೆನ್ನಾಗಿ ತೊಳದು ಹತ್ತಿ ಬಟ್ಟೆಯಿಂದ ಒರೆಸಿ.ಸಮಾನವಾದ ತುಂಡುಗಳಾಗಿ ಕತ್ತರಿಸಿ.

    ಬೆಂಡೆಕಾಯಿ ತುಂಡುಗಳನ್ನು ದೊಡ್ಡ ಪಾತ್ರೆಗೆ ಹಾಕಿ.

    ಅರಿಶಿನ, ಕೊತ್ತಂಬರಿ ಪುಡಿ, ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ, ಚಾಟ್ ಮಸಾಲಾ ಸೇರಿಸಿ.

    ಉಪ್ಪು ಮತ್ತು ನಿಂಬೆ ರಸ ಸೇರಿಸಿ, ಚೆನ್ನಾಗಿ ಕಲಸಿ.10 ನಿಮಿಷ ಮ್ಯಾರಿನೇಟ್ ಮಾಡಲು ಪಕ್ಕಕ್ಕಿರಿಸಿ.

    ಕಡಲೆ ಹಿಟ್ಟು ಮತ್ತು ಅಕ್ಕಿ ಹಿಟ್ಟು ಸೇರಿಸಿ.2 ಟೇಬಲ್ ಸ್ಪೂನ್ ಎಣ್ಣೆ ಹಾಕಿ, ಹಿಟ್ಟು ಪರಿಮಿತವಾಗಿ ಬೆಂಡೆಕಾಯಿಗೆ ಸಮ್ಮಿಶ್ರಣವಾಗುವಂತೆ ಕಲಸಿ.

    ನೀರು ಸೇರಿಸಬೇಡಿ ಬಾಣಲೆಯಲ್ಲಿ ಎಣ್ಣೆ ಹಾಕಿ, ಮಧ್ಯಮ ಉರಿಯಲ್ಲಿ ಬಿಸಿ ಮಾಡಿ.

    ಬೆಂಡೆಕಾಯಿ ತುಂಡುಗಳನ್ನು ಹುರಿದು, ಗೋಲ್ಡನ್ ಬೌನ್ ಆಗುವವರೆಗೆ ಡೀಪ್/ಶಲ್ಲೋ ಫ್ರೈ ಮಾಡಿರಿ.

    ಫ್ರೈ ಆದ ಬೆಂಡೆಕಾಯಿಯನ್ನು ಪೇಪರ್ ಟೌಲ್ ಮೇಲಿಟ್ಟು ಹೆಚ್ಚಿನ ಎಣ್ಣೆ ಶೋಷಿಸಿಕೊಳ್ಳಿ.

    ಗರಿಗರಿಯಾಗಿರುವ ಬೆಂಡೆಕಾಯಿನ ಮೇಲೆ ಒಂದು ಚಿಟಿಕೆ ಚಾಟ್ ಮಸಾಲಾ ಸಿಂಪಡಿಸಿ.ಹಸಿ ಈರುಳ್ಳಿ, ಹಸಿ ಮೆಣಸಿನಕಾಯಿ ಅಥವಾ ನಿಂಬೆ ಸವರಸ ಜೊತೆಗೆ ಮಧ್ಯಾಹ್ನ ಅಥವಾ ರಾತ್ರಿಯ ಊಟದಲ್ಲಿ ಸವಿಯಿರಿ

    ಚಹಾ ಜೊತೆಗೆ ಕ್ರಿಸ್ಪಿ ಅಲಸಂದೆ ವಡೆ: ಮಳೆಗಾಲದ ಪರ್ಫೆಕ್ಟ್ ಕಾಂಬೊ!

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading