Monday, August 31, 2026
spot_img
More
    spot_img
    HomeLatest newsಬಹಳ ದೊಡ್ಡವರಾಗಿಬಿಟ್ಟವ್ರೆ ಅವ್ರು; ನಿಖಿಲ್‌ ಕುಮಾರಸ್ವಾಮಿ ಬಗ್ಗೆ ಚಲುವರಾಯಸ್ವಾಮಿ ವ್ಯಂಗ್ಯ

    ಬಹಳ ದೊಡ್ಡವರಾಗಿಬಿಟ್ಟವ್ರೆ ಅವ್ರು; ನಿಖಿಲ್‌ ಕುಮಾರಸ್ವಾಮಿ ಬಗ್ಗೆ ಚಲುವರಾಯಸ್ವಾಮಿ ವ್ಯಂಗ್ಯ

    ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಬದಲಾವಣೆ ಕೂಗು ಶಾಸಕರಿಂದಲೇ ಬಂದ ಕೂಡಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಬೆಂಗಳೂರಿಗೆ ಆಗಮಿಸಿದ್ದು, ಎಲ್ಲ ಶಾಸಕರು ಹಾಗೂ ಮಂತ್ರಿಗಳ ಜತೆ ಚರ್ಚೆ ನಡೆಸಿದ್ದಾರೆ.

    Advertisement

    ಇನ್ನು ಸುರ್ಜೇವಾಲ ಅವರು ಶಾಸಕರು ಹಾಗೂ ಸಚಿವರ ಕೆಲಸದ ವೈಖರಿಯ ಕುರಿತು ವರದಿ ರಚಿಸಲು ಆಗಮಿಸಿದ್ದಾರೆ ಎಂದರೆ, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಸಿಎಂ ಬದಲಾವಣೆಗಾಗಿಯೇ ಸುರ್ಜೇವಾಲ ರಾಜ್ಯಕ್ಕೆ ಆಗಮಿಸಿದ್ದಾರೆ ಎಂದು ಕಾಲೆಳೆದಿದ್ದಾರೆ.

    ಇತ್ತ ನಿಖಿಲ್‌ ಕುಮಾರಸ್ವಾಮಿ ಸುರ್ಜೇವಾಲ ಆಗಮನದ ಕುರಿತು ಪ್ರತಿಕ್ರಿಯಿಸಿ ಸುರ್ಜೇವಾಲ ಕರ್ನಾಟಕದ ಸೂಪರ್‌ ಸಿಎಂ ಎಂದು ವ್ಯಂಗ್ಯವಾಡಿದ್ದರು. ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ ನಿಖಿಲ್‌ ಕುರಿತ ಪ್ರಶ್ನೆ ಕೇಳುತ್ತಿದ್ದಂತೆಯೇ ʼಬಹಳ ದೊಡ್ಡವರಾಗಿಬಿಟ್ಟವ್ರೆ ಅವ್ರು. ಅವರ ಜೊತೆ ಮಾತನಾಡೋಕಾಗುತ್ತಾ?ʼ ಎನ್ನುತ್ತಾ ವ್ಯಂಗ್ಯವಾಡಿ ನಿಖಿಲ್‌ಗೆ ತಿರುಗೇಟು ನೀಡಿದರು.

    ಇನ್ನು ನಿಖಿಲ್‌ ಮಂಡ್ಯದಲ್ಲಿ ಮಾತನಾಡಿ ನಮ್ಮ ಶಾಸಕರಾರು ಪಕ್ಷ ಬಿಟ್ಟು ಹೋಗುವುದಿಲ್ಲ, ಎಲ್ಲರೂ ನಮ್ಮಲ್ಲಿಯೇ ಇರುತ್ತಾರೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೂ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ ನಾವು ಅವರನ್ನು ಕರೆದೇ ಇಲ್ಲವಲ್ಲಾ, ನಾವೇನಾದರೂ ಕರೆದಿದ್ವಾ? ಎಂದು ಪ್ರಶ್ನೆ ಹಾಕಿ ಮತ್ತೆ ನಿಖಿಲ್‌ ಕಾಲೆಳೆದರು. ನಮ್ಮ ಬಳಿ 138 ಶಾಸಕರಿದ್ದಾರೆ, ಸರ್ಕಾರ ರಚನೆಗೇನು ಅಗತ್ಯವಿಲ್ಲ, ಸ್ವ ಇಚ್ಛೆಯಿಂದ ಬರುತ್ತೇವೆ ಎಂದರೆ ಬನ್ನಿ ಎನ್ನುತ್ತೇವೆ ಎಂದೂ ಸಹ ಟಾಂಗ್‌ ಕೊಟ್ಟರು.

    ಪಹಲ್ಗಾಮ್‌ ದಾಳಿ ನಂತರ ಜಮ್ಮು-ಕಾಶ್ಮೀರ ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading