ಬೆಂಗಳೂರು: ನಗರದ ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಸಮೀಪವಿರುವ ಗಾಳಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹಣ ದುರುಪಯೋಗದ ಆರೋಪ ಕೇಳಿಬಂದ ಕಾರಣ ರಾಜ್ಯ ಸರ್ಕಾರ ದೇವಾಲಯವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ತೆಗೆದುಕೊಳ್ಳಲು ತೀರ್ಮಾನಿಸಿತ್ತು.
ಆದರೆ ಸರ್ಕಾರದ ಈ ನಡೆಯನ್ನು ವಿರೋಧಿಸಿ ದೇವಾಲಯದ ಆಡಳಿತ ಮಂಡಳಿ ಹೈಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ನೀಡುವಂತೆ ಕೋರಿತ್ತು. ಈ ಕುರಿತು ವಿಚಾರಣೆ ನಡೆಸಿದ ಬಳಿಕ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಪೀಠ ತಡೆಯಾಜ್ಞೆ ಹೊರಡಿಸಲು ನಿರಾಕರಿಸಿ ಸರ್ಕಾರದ ನಡೆಯನ್ನು ಬೆಂಬಲಿಸಿದೆ.
ಇನ್ನು ದೇವಸ್ಥಾನದ ಹಣದಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಕೇಳಿಬಂದಿದ್ದ ಕಾರಣ ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ಸರಿಯಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಇನ್ನು ಸರ್ಕಾರದ ಪರ ವಾದ ಮಂಡಿಸಿದ ವಕೀಲರು ದೇವಾಲಯದಲ್ಲಿ ಅಕ್ರಮ ನಡೆದಿದೆ ಎಂಬುದನ್ನು ವಿಡಿಯೊ ಮೂಲಕ ಮನವರಿಕೆ ಮಾಡಿದರು. ವಿಡಿಯೊದಲ್ಲಿ ವ್ಯಕ್ತಿಗಳು ದೇವಸ್ಥಾನದಿಂದ ಹಣ ತೆಗೆದುಕೊಂಡು ಹೋಗುವ ದೃಶ್ಯಗಳಿದ್ದು, ನ್ಯಾಯಾಲಯ ಇದನ್ನು ಪರಿಗಣಿಸಿ ತನಿಖೆ ನಡೆಸುವ ಸಮಯದಲ್ಲಿ ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ಮೇಲ್ನೋಟಕ್ಕೆ ಸರಿಯಿದೆ ಎಂದಿದೆ.
ಶೀಘ್ರದಲ್ಲೇ ಸಿಹಿಸುದ್ದಿ; ಕುತೂಹಲ ಹುಟ್ಟಿಸಿದ ಯತ್ನಾಳ್ ಪೋಸ್ಟ್
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


