ಬೆಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ನಗರಕ್ಕೆ ಆಗಮಿಸಿದ್ದು, ರಾಜ್ಯ ಕಾಂಗ್ರೆಸ್‌ನ ಪ್ರತಿ ಶಾಸಕ ಹಾಗೂ ಸಚಿವರನ್ನು ಒಬ್ಬೊಬ್ಬರನ್ನಾಗಿ ಭೇಟಿಯಾಗಿ ಚರ್ಚೆ ನಡೆಸುತ್ತಿದ್ದಾರೆ.
ಒಂದೆಡೆ ಈ ಭೇಟಿ ಮುಖ್ಯಮಂತ್ರಿ ಬದಲಾವಣೆಗೆ ಎಂದು ವಿರೋಧ ಪಕ್ಷಗಳು ಟೀಕಿಸಿದ್ದು, ಕಾಂಗ್ರೆಸ್ ಶಾಸಕರ ಹಾಗೂ ಸಚಿವರ ಕಾರ್ಯ ವೈಖರಿ ಅರಿಯುವ ಸಲುವಾಗಿ ಈ ಭೇಟಿ ಎಂದು ಸಮರ್ಥಿಸಿಕೊಂಡಿದೆ.
ಹೀಗೆ ಭಾರೀ ಕುತೂಹಲ ಹುಟ್ಟುಹಾಕಿರುವ ಸುರ್ಜೇವಾಲ ಅವರನ್ನು ಇಂದು ( ಜುಲೈ 16 ) ಗೃಹ ಸಚಿವ ಜಿ ಪರಮೇಶ್ವರ್ ಸಹ ಭೇಟಿ ಮಾಡಿ ಮಾತನಾಡಿದರು. ಭೇಟಿ ಬಳಿಕ ಮಾತನಾಡಿದ ಪರಮೇಶ್ವರ್ ಹೈಕಮಾಂಡ್ ನನಗೆ, ಮುಖ್ಯಮಂತ್ರಿಗಳಿಗೆ ಹಾಗೂ ಉಪ ಮುಖ್ಯಮಂತ್ರಿಗಳಿಗೆ ಕಾರ್ಯಕರ್ತರನ್ನು ಆರಿಸಿ ನಿಗಮ ಮಂಡಳಿಗೆ ಪಟ್ಟಿ ಮಾಡಬೇಕೆಂದು ಸೂಚಿಸಿತ್ತು. ನಮ್ಮ ಸಮಿತಿ ಆ ಪಟ್ಟಿಯನ್ನು ಮಾಡಿ ಮುಖ್ಯಮಂತ್ರಿಗಳಿಗೆ ಹಾಗೂ ಉಪಮುಖ್ಯಮಂತ್ರಿಗಳಿಗೆ ಕೊಟ್ಟಿತ್ತು. ಸಮಿತಿಯ ಅಧ್ಯಕ್ಷನಾದ ನನ್ನನ್ನು ಈ ಕುರಿಬತು ಚರ್ಚಿಸಲು ಕರೆದಿದ್ದರು ಎಂದು ಪರಮೇಶ್ವರ್ ಸುರ್ಜೇವಾಲರನ್ನು ಭೇಟಿಯಾದದ್ದೇಕೆ ಎಂಬುದನ್ನು ಬಿಚ್ಚಿಟ್ಟರು.
ಇನ್ನು ನಿಗಮ ಮಂಡಳಿ ಪಟ್ಟಿಯ ಕುರಿತು ನನಗೇನು ಗೊತ್ತಿತ್ತೋ ಅದನ್ನೆಲ್ಲ ತಿಳಿಸಿದ್ದೇನೆ, ಮುಂದೆ ಅವರಿಗೆ ಬಿಟ್ಟಿದ್ದು ಎಂದೂ ಸಹ ಪರಮೇಶ್ವರ್ ಹೇಳಿದರು. ಇನ್ನು ಇದಕ್ಕೆ ಈಗ ಚಾಲನೆ ಕೊಟ್ಟಿದ್ದು, ಆದಷ್ಟು ಬೇಗ ಅಂತ್ಯ ಕಾಣಿಸುತ್ತಾರೆ ಎಂದು ಪರಮೇಶ್ವರ್ ಶೀಘ್ರದಲ್ಲಿ ನಿಗಮ ಮಂಡಳಿ ನೇಮಕ ನಡೆಯಲಿದೆ ಎಂದರು.
ಗಾಳಿ ಆಂಜನೇಯ ಪ್ರಕರಣದಲ್ಲಿ ಸರ್ಕಾರಕ್ಕೆ ಮೇಲುಗೈ; ದೇವಸ್ಥಾನ ಮುಜರಾಯಿ ಸುಪರ್ದಿಗೆ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


