ಬೆಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಸಚಿವರಿಂದ ಮಾಹಿತಿ ಪಡೆದಿರುವುದಕ್ಕೆ ಯಾವುದೇ ಅಸಮಾಧಾನ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಸುರ್ಜೆವಾಲ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಆಗುಹೋಗುಗಳ ಬಗ್ಗೆ ನೋಡಿಕೊಳ್ಳುವ ಜವಾಬ್ದಾರಿ ಅವರದು. ಹೀಗಾಗಿ ಅವರು ಸಚಿವರಿಂದ ವಿವರಣೆ ಕೇಳಿದ್ದಾರೆ. ಅದರಲ್ಲಿ ತಪ್ಪು ಹುಡುಕುವುದು ಸರಿಯಲ್ಲ ಎಂದರು.
ಚುನಾವಣಾ ಸಂದರ್ಭದಲ್ಲಿ ಸ್ಪರ್ಧಿಸಲು ಅವಕಾಶ ಕೋರಿ ಟಿಕೆಟ್ ಬೇಕೆಂದು ನಮ್ಮ ಉಸ್ತುವಾರಿಗಳನ್ನು ಕೇಳುವುದಿಲ್ಲವೇ? ಟಿಕೆಟ್ ಸಿಗಲಿಲ್ಲವೆಂದರೆ ರಾಹುಲ್ ಗಾಂಧಿವರೆಗೂ ನಾವು ಹೋಗುವುದಿಲ್ಲವೇ ಎಂದು ಪ್ರಶ್ನಿಸಿದರು.
ವಿಧಾನಸಭೆ ಚುನಾವಣೆಗೂ ಮುನ್ನವೇ ಅವರು ರಾಜ್ಯದ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಎಲ್ಲಾ ಜಿಲ್ಲೆಯಲ್ಲೂ ಪ್ರವಾಸ ಮಾಡಿದ್ದರು. ನಾವು ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದ್ದೇವೆ. ನಂತರ ಅವರ ಜವಾಬ್ದಾರಿಯನ್ನು ಮುಂದುವರೆಸಲಾಗಿದೆ. ಈಗಾಗಲೇ 60 ರಿಂದ 70 ಶಾಸಕರನ್ನು ಭೇಟಿ ಮಾಡಿ ಅವರ ಸಮಸ್ಯೆ ಮತ್ತು ಬೇಡಿಕೆಗಳನ್ನು ಆಲಿಸಿದ್ದಾರೆ.
ಶಾಸಕರು ಪ್ರಸ್ತಾಪಿಸಿರುವ ಬೇಡಿಕೆಗಳ ಬಗ್ಗೆ ಕೇಳಿದರು. ಕೆಲವು ಶಾಸಕರು ಬಸ್ ನಿಲ್ದಾಣ ಬೇಕು ಎಂದು ಕೇಳಿದ್ದಾರೆ. ಅದರ ಬಗ್ಗೆ ವಿವರಣೆ ಕೊಟ್ಟಿದ್ದೇನೆ. ಮುಜರಾಯಿ ಇಲಾಖೆ ಬಗ್ಗೆ ಪ್ರಸ್ತಾಪಿಸುವ ವಿಚಾರ ಏನೂ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಗಾಳಿ ಆಂಜನೇಯ ಪ್ರಕರಣದಲ್ಲಿ ಸರ್ಕಾರಕ್ಕೆ ಮೇಲುಗೈ; ದೇವಸ್ಥಾನ ಮುಜರಾಯಿ ಸುಪರ್ದಿಗೆ
ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


