Wednesday, September 2, 2026
spot_img
More
    spot_img
    HomeEntertainmentಯಶ್‌ ತಾಯಿ ನಿರ್ಮಾಣದ ʼಕೊತ್ತಲವಾಡಿʼ ಕಲಾವಿದನ ಅಳಲು; 3 ತಿಂಗಳು ದುಡಿಸಿಕೊಂಡ ದುಡ್ಡು ಕೊಡಿ ಎಂದ...

    ಯಶ್‌ ತಾಯಿ ನಿರ್ಮಾಣದ ʼಕೊತ್ತಲವಾಡಿʼ ಕಲಾವಿದನ ಅಳಲು; 3 ತಿಂಗಳು ದುಡಿಸಿಕೊಂಡ ದುಡ್ಡು ಕೊಡಿ ಎಂದ ಕಲಾವಿದ!

    ರಾಕಿಂಗ್‌ ಸ್ಟಾರ್‌ ಯಶ್‌ ತಾಯಿ ಪುಷ್ಪ ಅರುಣ್‌ ಕುಮಾರ್‌ ನಿರ್ಮಾಣದ ಮೊದಲ ಚಿತ್ರ ಕೊತ್ತಲವಾಡಿ ಇದೇ ಆಗಸ್ಟ್‌ 1ರಂದು ಬಿಡುಗಡೆಯಾಗಿತ್ತು. ಚಿತ್ರ ಚಿತ್ರಮಂದಿರದಲ್ಲಿ ಪ್ರದರ್ಶನಗೊಂಡು ಇದೀಗ ಸದ್ದಿಲ್ಲದೇ ಒಟಿಟಿಗೂ ಸಹ ಬಂದಿದೆ.

    Advertisement

    ಚಿತ್ರ ತನ್ನ ಟ್ರೈಲರ್‌ ಹಾಗೂ ಹಾಡುಗಳಿಗಿಂತ ಹೆಚ್ಚು ಸುದ್ದಿಯಾಗಿದ್ದು ಯಶ್‌ ತಾಯಿ ಪುಷ್ಪ ಅರುಣ್‌ ಕುಮಾರ್‌ ಅವರ ಸಂದರ್ಶನಗಳಿಂದಲೇ. ಆರಂಭದಲ್ಲಿ ನೇರ ಉತ್ತರಗಳ ಮೂಲಕ ವೈರಲ್‌ ಆಗಿದ್ದ ಪುಷ್ಪ ಬಳಿಕ ಅದೇ ಹೇಳಿಕೆಗಳು ಅತಿಯಾದಾಗ ವಿರೋಧವನ್ನೂ ಸಹ ಎದುರಿಸಿದರು.

    ಹೀಗೆ ಮೊದಲ ನಿರ್ಮಾಣದಲ್ಲಿಯೇ ಸಾಮಾಜಿಕ ಜಾಲತಾಣದಲ್ಲೀ ಭಾರೀ ಚರ್ಚೆಗೀಡಾದ ಯಶ್‌ ತಾಯಿ ವಿರುದ್ಧ ಇದೀಗ ಸಂಭಾವನೆ ಕೊಡದ ಗಂಭೀರ ಆರೋಪ ಕೇಳಿಬಂದಿದೆ. ಮಹೇಶ್‌ ಗುರು ಎಂಬ ರಂಗಭೂಮಿ ಕಲಾವಿದ ಕೊತ್ತಲವಾಡಿ ಚಿತ್ರದಲ್ಲಿ ಸಹ ನಟನಾಗಿ ನಟಿಸಿದ್ದು, ನಿರ್ದೇಶಕರ ಕಡೆಯಿಂದ ಚಿತ್ರಕ್ಕೆ ಆಯ್ಕೆಯಾದೆ ಎಂದಿದ್ದಾರೆ.

    ಮೊದಲಿಗೆ ಅಡ್ವಾನ್ಸ್‌ ಕೇಳಿದಾಗ ದುಡ್ಡು ಕೊಡಲಿಲ್ಲ, ಮುಹೂರ್ತದ ಸಮಯದಲ್ಲಿ ಕೇಳಿದರೂ ನಿರ್ಮಾಣ ಸಂಸ್ಥೆ ಇನ್ನೂ ಹಣ ಕೊಟ್ಟಿಲ್ಲ ಕೊಟ್ಟ ನಂತರ ಕೊಡುತ್ತೇನೆ ಎಂದು ನಿರ್ದೇಶಕ ಹೇಳಿದರಂತೆ. ಬಳಿಕ ಚಿತ್ರ ಬಿಡುಗಡೆಯೂ ಆಯಿತು, ಒಟಿಟಿಗೂ ಬಂತು. ಹಲವಾರು ಪ್ರಚಾರಗಳನ್ನು ಮಾಡಿದರೂ ತಮ್ಮನ್ನು ಕರೆದಿಲ್ಲ ಎಂದರು.

    ಅಲ್ಲದೇ ತಮಗೆ ನಿರ್ಮಾಪಕರನ್ನು ಭೇಟಿಯಾಗುವುದಕ್ಕೂ ಸಹ ಅವಕಾಶವಿಲ್ಲ, ಅವರ ನಂಬರ್‌, ಅಡ್ರೆಸ್‌ ಏನೂ ಇಲ್ಲದ ಕಾರಣ ವಿಡಿಯೊ ಮೂಲಕ ತಮಗಾದ ಮೋಸವನ್ನು ಸರಿಪಡಿಸುವಂತೆ ಕೇಳಿಕೊಳ್ಳುತ್ತಿದ್ದೇನೆ, ದಯವಿಟ್ಟು ತನ್ನ ಹಣವನ್ನು ಕೊಡಿ ಎಂದು ಮಹೇಶ್‌ ಗುರು ಕೇಳಿಕೊಂಡಿದ್ದಾರೆ.

    ಧರ್ಮಸ್ಥಳ: 13ನೇ ಗುಂಡಿ ಅಗೆಯುವಾಗಲೇ ಎಸ್‌ಐಟಿ ತನಿಖೆ ನಿಲ್ಲಿಸಲು ಯುಟ್ಯೂಬರ್ಸ್‌ ಮೇಲೆ ಹಲ್ಲೆ; ಸುಮಂತ್‌ನ ಮತ್ತೊಂದು ಆಡಿಯೊ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading