Tuesday, November 10, 2026
spot_img
More
    spot_img
    HomeLatest newsಬಿಹಾರ ಚುನಾವಣೆ: ಯುವತಿ ಜತೆ ನಗ್ನ ವಿಡಿಯೊ ಕರೆಯ ವಿಡಿಯೊ ವೈರಲ್‌ ಆಗಿದ್ದ ಅಭ್ಯರ್ಥಿಗೆ ಜಯ!

    ಬಿಹಾರ ಚುನಾವಣೆ: ಯುವತಿ ಜತೆ ನಗ್ನ ವಿಡಿಯೊ ಕರೆಯ ವಿಡಿಯೊ ವೈರಲ್‌ ಆಗಿದ್ದ ಅಭ್ಯರ್ಥಿಗೆ ಜಯ!

    ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ( ನವೆಂಬರ್‌ 14 ) ಪ್ರಕಟಗೊಂಡಿತು. 243 ಕ್ಷೇತ್ರಗಳುಳ್ಳ ಬಿಹಾರದಲ್ಲಿ ಅಧಿಕಾರಕ್ಕೆ ಬರಲು 112 ಮ್ಯಾಜಿಕ್‌ ನಂಬರ್‌ ಆಗಿದ್ದು, ಎನ್‌ಡಿಎ ಮೈತ್ರಿಕೂಟ 202 ಕ್ಷೇತ್ರಗಳಲ್ಲಿ ಗೆದ್ದು ಅಬ್ಬರಿಸಿತು. ಇನ್ನು ಮಹಾಘಟ್‌ಬಂಧನ್‌ 34 ಕ್ಷೇತ್ರಗಳಲ್ಲಿ ಮಾತ್ರ ಜಯ ಸಾಧಿಸಿತು ಹಾಗೂ ಇತರರು 7 ಕ್ಷೇತ್ರಗಳಲ್ಲಿ ಗೆಲುವು ಕಂಡರು.

    ಎನ್‌ಡಿಎ ಪರ ಬಿಜೆಪಿ 89 ಕ್ಷೇತ್ರಗಳಲ್ಲಿ ಗೆದ್ದು ರಾಜ್ಯದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಸ್ಥಳೀಯ ಪಕ್ಷ ಜೆಡಿಯುಗಿಂತಲೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಬೀಗಿತು. ಹೀಗೆ ಐತಿಹಾಸಿಕ ಜಯ ಸಾಧಿಸಿದ ಬಿಜೆಪಿ ಪರ ಕೆಲ ಅಭ್ಯರ್ಥಿಗಳು ಚುನಾವಣೆಗೂ ಮುನ್ನ ತಮ್ಮ ಹೇಳಿಕೆಗಳು ಹಾಗೂ ತಮ್ಮ ಕುರಿತಾದ ಕೆಲ ವಿಷಯಗಳಿಂದ ಸುದ್ದಿಗೀಡಾಗಿ ಕುತೂಹಲ ಕೆರಳಿಸಿದ್ದರು.

    ಅಂಥವರ ಪೈಕಿ ಸುನಿಲ್‌ ಕುಮಾರ್‌ ಪಿಂಟು ಸಹ ಒಬ್ಬರು. ಮೊದಲ ಹಂತದ ಚುನಾವಣೆ ನಡೆಯುವುದಕ್ಕೂ ಮುನ್ನ ಸುನಿಲ್‌ ಕುಮಾರ್‌ ಪಿಂಟು ಅವರದ್ದು ಎಂದು ಹೇಳಲಾದ ವಿಡಿಯೊವೊಂದು ಭಾರೀ ವೈರಲ್‌ ಆಗಿತ್ತು. ಯುವತಿ ಜತೆಗಿನ ನಗ್ನ ವಿಡಿಯೊ ಕರೆ ಎಂದು ಇದು ಎಲ್ಲೆಡೆ ಹರಿದಾಡಿತ್ತು. ಆದರೆ ಈ ಅಭ್ಯರ್ಥಿ ಸೀತಾಮರ್ಹಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಆರ್‌ಜೆಡಿ ಅಭ್ಯರ್ಥಿ ಸುನಿಲ್‌ ಕುಮಾರ್‌ ವಿರುದ್ಧ 5562 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

    ಇನ್ನು ವಿಡಿಯೊ ವೈರಲ್‌ ಆದ ಬೆನ್ನಲ್ಲೆ ಸುನಿಲ್‌ ಕುಮಾರ್‌ ಪಿಂಟು ಇದು ನಕಲಿ ವಿಡಿಯೊ, ಕಿಡಿಗೇಡಿಗಳು ಚುನಾವಣೆಯಲ್ಲಿ ತನ್ನನ್ನು ಸೋಲಿಸಲು ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ದೂರು ದಾಖಲಿಸಿದ್ದರು.

    ಸಕಲ ಸರ್ಕಾರಿ ಗೌರವದೊಂದಿಗೆ ನಡೆದ ಸಾಲುಮರದ ತಿಮ್ಮಕ್ಕ ಅಂತ್ಯಕ್ರಿಯೆ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search