ಅಬುಧಾಬಿಯ ಇತಿಹಾದ್ ಹೋಟೆಲ್‌ನಲ್ಲಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಲುವಾಗಿ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ.
ಈಗಾಗಲೇ ಸಮತೋಲನದ ತಂಡವನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಕೈಬಿಟ್ಟ ಆಟಗಾರರ ಸ್ಥಾನಕ್ಕೆ ತಕ್ಕನಾದ ಆಟಗಾರರನ್ನು ಖರೀದಿಸಿ ತಂಡವನ್ನು ಮತ್ತಷ್ಟು ಬಲಿಷ್ಟಗೊಳಿಸುವ ನಿಟ್ಟಿನಿಂದ ಹರಾಜಿಗಿಳಿದಿದೆ.
16.40 ಕೋಟಿ ಹಣದೊಂದಿಗೆ ಹರಾಜಿಗೆ ಪ್ರವೇಶಿಸಿದ ಆರ್‌ಸಿಬಿ ಮೊದಲಿಗೆ ವೆಂಕಟೇಶ್ ಐಯ್ಯರ್ ಖರೀದಿಸಿದೆ. 2 ಕೋಟಿ ಮುಖಬೆಲೆಯ ವೆಂಕಟೇಶ್ ಐಯ್ಯರ್‌ನನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ಕೋಟಿ ರೂಪಾಯಿಗೆ ಖರೀದಿಸಿದೆ.
ಇನ್ನು ಎಡಗೈ ಬ್ಯಾಟ್ಸ್‌ಮನ್ ಆಗಿರುವ ವೆಂಕಟೇಶ್ ಐಯ್ಯರ್ ಬಲಗೈ ಮೀಡಿಯಮ್ ಫಾಸ್ಟ್ ಬೌಲರ್ ಸಹ ಆಗಿದ್ದು, ಕೆಳ ಕ್ರಮಾಂಕದಲ್ಲಿ ಇಳಿದು ಒತ್ತಡದ ಸ್ಥಿತಿಯಲ್ಲಿ ಬ್ಯಾಟ್ ಬೀಸಬಲ್ಲ ಆಟಗಾರನಾಗಿದ್ದಾರೆ. ಈ ಮೂಲಕ ಲಿಯಾಮ್ ಲಿವಿಂಗ್‌ಸ್ಟನ್ ಸ್ಥಾನ ತುಂಬಬಲ್ಲ ಸಾಮರ್ಥ್ಯವಿರುವ ಬ್ಯಾಟ್ಸ್‌ಮನ್ ತಂಡ ಸೇರಿದ್ದು, ಇದು ಆರ್‌ಸಿಬಿಗೆ ಪ್ಲಸ್ ಪಾಯಿಂಟ್ ಆಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


