ಕಳೆದ ತಿಂಗಳಷ್ಟೇ ಐಪಿಎಲ್ ರಿಟೆನ್ಷನ್ ಪ್ರಕ್ರಿಯೆ ನಡೆದಿದ್ದು, ಎಲ್ಲ ಫ್ರಾಂಚೈಸಿಗಳು ಯಾವ ಆಟಗಾರರನ್ನು ಉಳಿಸಿಕೊಳ್ಳಲಿದ್ದೇವೆ ಎಂದು ಪ್ರಕಟಿಸಿದ್ದವು. ಹೀಗೆ ಫ್ರಾಂಚೈಸಿಗಳಿಂದ ಹೊರಬಿದ್ದ ಆಟಗಾರರ ಸ್ಥಾನಕ್ಕೆ ಬೇರೆ ಆಟಗಾರರನ್ನು ನೇಮಿಸಿಕೊಳ್ಳುವ ಸಲುವಾಗಿ ಇಂದು ( ಡಿಸೆಂಬರ್ 16 ) ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ.
ಹೌದು, ಅಬುಧಾಬಿಯ ಇತಿಹಾದ್ ಎರೆನಾದಲ್ಲಿ ಈ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಮಧ್ಯಾಹ್ನ 2.30ಕ್ಕೆ ಮಿನಿ ಹರಾಜು ಪ್ರಕ್ರಿಯೆ ಶುರುವಾಗಲಿದೆ. ಎಲ್ಲ 10 ತಂಡಗಳು ಸೇರಿದಂತೆ 237.55 ಕೋಟಿ ಮೊತ್ತದ ಒಟ್ಟು 77 ಖಾಲಿ ಇರುವ ಸ್ಥಾನಗಳಿಗೆ ಹರಾಜು ನಡೆಯಲಿದೆ. ಹಾಗಿದ್ದರೆ ಯಾವ ತಂಡದ ಬಳಿ ಎಷ್ಟು ಹಣ ಉಳಿದಿದೆ ಹಾಗೂ ಎಷ್ಟು ಆಟಗಾರರ ಸ್ಥಾನಗಳು ಖಾಲಿ ಇವೆ ಮತ್ತು ಈ ಪೈಕಿ ಎಷ್ಟು ವಿದೇಶಿ ಆಟಗಾರರು ಎಂಬ ಮಾಹಿತಿ ಮುಂದಿದೆ.
ಫ್ರಾಂಚೈಸಿಗಳ ಬಳಿ ಉಳಿದಿರುವ ಹಣ
ಕೋಲ್ಕತಾ ನೈಟ್ ರೈಡರ್ಸ್ – ರೂ. 64.30 ಕೋಟಿ
ಚೆನ್ನೈ ಸೂಪರ್ ಕಿಂಗ್ಸ್ – ರೂ. 43.40 ಕೋಟಿ
ಸನ್‌ರೈಸರ್ಸ್ ಹೈದರಾಬಾದ್ – ರೂ. 25.50 ಕೋಟಿ
ಲಕ್ನೋ ಸೂಪರ್ ಜೈಂಟ್ಸ್ – ರೂ. 22.95 ಕೋಟಿ
ದೆಹಲಿ ಕ್ಯಾಪಿಟಲ್ಸ್ – ರೂ. 21.80 ಕೋಟಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು – ರೂ. 16.40 ಕೋಟಿ
ರಾಜಸ್ಥಾನ ರಾಯಲ್ಸ್ – ರೂ. 16.05 ಕೋಟಿ
ಗುಜರಾತ್ ಟೈಟಾನ್ಸ್ – ರೂ. 12.90 ಕೋಟಿ
ಪಂಜಾಬ್ ಕಿಂಗ್ಸ್ – ರೂ. 11.50 ಕೋಟಿ
ಮುಂಬೈ ಇಂಡಿಯನ್ಸ್ – ರೂ. 2.75 ಕೋಟಿ
ಯಾವ ತಂಡದಲ್ಲಿ ಎಷ್ಟು ಆಟಗಾರರ ಸ್ಥಾನ ಖಾಲಿ?
ಚೆನ್ನೈ ಸೂಪರ್ ಕಿಂಗ್ಸ್: 9 (4 ವಿದೇಶಿ ಆಟಗಾರರು)
ದೆಹಲಿ ಕ್ಯಾಪಿಟಲ್ಸ್: 8 (5 ವಿದೇಶಿ ಆಟಗಾರರು)
ಗುಜರಾತ್ ಟೈಟಾನ್ಸ್: 5 (4 ವಿದೇಶಿ ಆಟಗಾರರು)
ಕೋಲ್ಕತಾ ನೈಟ್ ರೈಡರ್ಸ್: 13 (6 ವಿದೇಶಿ ಆಟಗಾರರು)
ಲಕ್ನೋ ಸೂಪರ್ ಜೈಂಟ್ಸ್: 6 (4 ವಿದೇಶಿ ಆಟಗಾರರು)
ಮುಂಬೈ ಇಂಡಿಯನ್ಸ್: 5 (1 ವಿದೇಶಿ ಆಟಗಾರರು)
ಪಂಜಾಬ್ ಕಿಂಗ್ಸ್: 4 (2 ವಿದೇಶಿ ಆಟಗಾರರು)
ರಾಜಸ್ಥಾನ ರಾಯಲ್ಸ್: 9 (1 ವಿದೇಶಿ ಆಟಗಾರರು)
ರಾಯಲ್ ಚಾಲೆಂಜರ್ಸ್ ಬೆಂಗಳೂರು: 8 (2 ವಿದೇಶಿ ಆಟಗಾರರು)
ಸನ್‌ರೈಸರ್ಸ್ ಹೈದರಾಬಾದ್: 10 (2 ವಿದೇಶಿ ಆಟಗಾರರು)
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


