Monday, August 31, 2026
spot_img
More
    spot_img
    HomeCrimeಮೈಸೂರು: ಫೇಸ್‌ಬುಕ್‌ನಲ್ಲಿ ಪರಿಚಯ; ಸರ್ಕಾರಿ ಮಹಿಳೆಗೆ 500 ಗ್ರಾಂ ಚಿನ್ನ, 10 ಲಕ್ಷ ರೂ ವಂಚನೆ

    ಮೈಸೂರು: ಫೇಸ್‌ಬುಕ್‌ನಲ್ಲಿ ಪರಿಚಯ; ಸರ್ಕಾರಿ ಮಹಿಳೆಗೆ 500 ಗ್ರಾಂ ಚಿನ್ನ, 10 ಲಕ್ಷ ರೂ ವಂಚನೆ

    ಮೈಸೂರು: ಸರ್ಕಾರಿ ಉದ್ಯೋಗಿ ಯುವಕನನ್ನು ಬಂಧಿಸಿರುವ ಜಯಪುರ ಠಾಣಾ ಮಹಿಳೆಯೊಬ್ಬರನ್ನು ಪರಿಚಯ ಮಾಡಿಕೊಂಡ ವಂಚಕನೋರ್ವ, ಆಕೆಯ ಬಳಿ ಇದ್ದ 500 ಗ್ರಾಂ ಚಿನದ ಆಭರಣಗಳು ಹಾಗೂ 10.50 ರೂ.ಗಳನು ಲಪಟಾಯಿಸಿರುವ ಘಟನೆ
    ನಡೆದಿದೆ.

    Advertisement

    ಲೋಕೋಪಯೋಗಿ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿರುವ ಹಾಗೂ ವಿಜಯನಗರದಲ್ಲಿ ಒಂಟಿಯಾಗಿ ವಾಸಿಸುತ್ತಿರುವ ಮಹಿಳೆಗೆ ಫೇಸ್‌ ಬುಕ್ ಮೂಲಕ ತಿರುವಂತಪುರಂ ಮೂಲದ ವೈದ್ಯ ಡಾ.ಎ.ಎಂ.ಶಿವಕುಮಾರ್ ಪರಿಚಯವಾಗಿ
    ದ್ದಾನೆ.

    ನಂತರ ಆತ್ಮೀಯನಂತೆ ನಟಿಸಿದ ವಂಚಕ ಮಹಿಳೆಯ ಮನೆಗೆ ಆಗಾಗ್ಗೆ ಬರುತ್ತಿದ್ದ. ಈ ನಡುವೆ ಒಂಟಿಯಾಗಿರುವ ನೀವು ಚಿನ್ನಾಭರಣವನ್ನು ಜೊತೆಯಲ್ಲಿ ಇಟ್ಟುಕೊಳ್ಳಬೇಡಿ. ಬ್ಯಾಂಕ್‌ನ ಲಾಕರ್‌ನಲ್ಲಿ ಇಡಿ ಎಂದು ಹೇಳಿ ಆತನೇ ಬ್ಯಾಂಕ್‌ಗೆ ಕರೆದೊಯ್ದು ಲಾಕರ್‌ನಲ್ಲಿ ಚಿನ್ನಾಭರಣ ಗಳನ್ನು ಇರಿಸುವಂತೆ ನಾಟಕವಾಡಿ ನಕಲಿ ಕೀಲಿಯನ್ನು ನೀಡಿದ್ದಾನೆ.

    ನಂತರ ನಿಮ್ಮ ಬಳಿ ಇರುವ ಹಣವನ್ನು ವ್ಯಾಪಾರ ದಲ್ಲಿ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭಗಳಿಸಬಹುದು ಎಂದು ಆಸೆ ಹುಟ್ಟಿಸಿ ಆಕೆಯ ಬಳಿ ಇದ್ದ 10.50 ಲಕ್ಷ ರೂ.ಗಳನ್ನು ಪಡೆದಿದ್ದಾನೆ.

    ಈ ನಡುವೆ ತಾನು ಲಾಕರ್‌ನಲ್ಲಿ ಇಟ್ಟಿದ್ದ ವಜ್ರದ ಉಂಗುರ ಆತನ ಕೈಲಿ ಇದ್ದುದನ್ನು ಗಮನಿಸಿದ ಮಹಿಳೆ ‘ನಾನು ಲಾಕರ್‌ನಲ್ಲಿ ಇಟ್ಟಿದ್ದ ಉಂಗುರ ನಿನ್ನ ಕೈಲಿ ಹೇಗೆ ಬಂತು’ ಎಂದು ದಬಾಯಿಸಿ, ನನ್ನ ಚಿನ್ನಾಭರಣ ಹಾಗೂ ಹಣವನ್ನು ವಾಪಸ್ ಕೊಡು ಎಂದು ಒತ್ತಾಯಿಸಿದ್ದಾರೆ. ಈ ವೇಳೆ ಆತನೇ ಆಕೆಯ ಮೇಲೆ ಹರಿಹಾಯ್ದಿದ್ದಾನೆ.

    ತಾನು ವಂಚನೆಗೆ ಒಳಗಾಗಿರುವುದು ಆಕೆಗೆ ಗೊತ್ತಾಗಿ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

    ಡಿ‌ ಬಾಸ್‌ ಕೈನಲ್ಲಿನ ಮೊಬೈಲ್‌ ಬೆಲೆ ಕಂಡು ಹೌಹಾರಿದ ನೆಟ್ಟಿಗರು

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading