ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬಿಎಸ್‌ಸಿ ನರ್ಸಿಂಗ್ ಸೀಟ್ ಮ್ಯಾಟ್ರಿಕ್ಸ್ ಹಾಗೂ ಶುಲ್ಕ ವಿವರಗಳನ್ನು ಪ್ರಕಟಿಸಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 109 ಕಾಲೇಜು ಹಾಗೂ 7 ಸಾವಿರ ಸೀಟು ಹೆಚ್ಚಳವಾಗಿವೆ. ಕಳೆದ ವರ್ಷ 541 ಕಾಲೇಜುಗಳಿಂದ 24,642 ಸೀಟು ಲಭ್ಯವಾಗಿದ್ದವು. ಈ ಪೈಕಿ 12,970 ಸೀಟು ಭರ್ತಿಯಾಗಿದ್ದವು. ಈ ಬಾರಿ ಪ್ರಾಧಿಕಾರ ಬಿಡುಗಡೆ ಮಾಡಿರುವ ಮೊದಲ ಸುತ್ತಿನ ಸೀಟು ಹಂಚಿಕೆಗೆ 650 ಕಾಲೇಜುಗಳಲ್ಲಿ ಕೆಇಎ ಮೂಲಕ ಹಂಚಿಕೆಗೆ 31,658 ಸೀಟು ಲಭ್ಯವಿವೆ ಎಂದು ತಿಳಿಸಿದೆ. ಕಲ್ಯಾಣ ಕರ್ನಾಟಕ ಕೋಟಾದಲ್ಲಿ 1,510 ಸೀಟು, ಉಳಿಕೆ ವಲಯಕ್ಕೆ 8,046 ಸೀಟುಗಳನ್ನು ನಿಗದಿ ಮಾಡಲಾಗಿದೆ. ಮುಕ್ತ ವಿಭಾಗದಲ್ಲಿ ಒಟ್ಟು 17,239 ಸೀಟುಗಳಿವೆ. ಇನ್ನು ವಿಶೇಷ ವರ್ಗದ ಮೀಸಲಾತಿಗಾಗಿ 4,087 ಸೀಟು ಲಭ್ಯವಾಗಲಿವೆ.
ಶುಲ್ಕ ವಿವರ: ಸರ್ಕಾರಿ ಕಾಲೇಜುಗಳ ಶೇ.100 ಸೀಟುಗಳು ಕೆಇಎಯಿಂದಲೇ ಹಂಚಿಕೆಯಾಗಲಿದ್ದು, ವಾರ್ಷಿಕ 10,000 ರೂ. ಶುಲ್ಕ ನಿಗದಿ ಮಾಡಲಾಗಿದೆ. ಖಾಸಗಿ ಕಾಲೇಜುಗಳ ಶೇ.20 ಸರ್ಕಾರಿ ಸೀಟುಗಳಿಗೂ ಇದೇ ಶುಲ್ಕ ಅನ್ವಯವಾಗಲಿದೆ. ಖಾಸಗಿ ಕಾಲೇಜುಗಳ ಮ್ಯಾನೇಜ್‌ಮೆಂಟ್ ಕೋಟಾದ ಶೇ.60 ಸೀಟುಗಳನ್ನು ಪ್ರಾಧಿಕಾರವೇ ಹಂಚಿಕೆ ಮಾಡಲಿದೆ. ಈ ಸೀಟುಗಳಿಗೆ ಕರ್ನಾಟಕದ ಅಭ್ಯರ್ಥಿಗಳಿಗೆ ಒಂದು ಲಕ್ಷ ರೂ., ಹೊರ ರಾಜ್ಯದ ವಿದ್ಯಾರ್ಥಿಗಳಿಗೆ 1.40 ಲಕ್ಷ ರೂ. ಶುಲ್ಕ ನಿಗದಿ ಮಾಡಲಾಗಿದೆ. ಮ್ಯಾನೇಜ್‌ಮೆಂಟ್ ಮೂಲಕ ಭರ್ತಿ ಮಾಡಲಾಗುವ ಶೇ.20 ಸೀಟುಗಳಿಗೂ ಇದೇ ಶುಲ್ಕ ಇರುತ್ತದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಟಿ. ಜ್ಯೋತಿಶ್ರೀ ಅಧಿಸೂಚನೆ ಹೊರಡಿಸಿದ್ದಾರೆ.
ಡಿ ಬಾಸ್ ಕೈನಲ್ಲಿನ ಮೊಬೈಲ್ ಬೆಲೆ ಕಂಡು ಹೌಹಾರಿದ ನೆಟ್ಟಿಗರು
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


