ಬೆಂಗಳೂರು: ರಾಜ್ಯದ ರಸ್ತೆಗಳಲ್ಲಿ ಮಾಲಿನ್ಯ ಉಗುಳುತ್ತಾ ಸಂಚರಿಸುತ್ತಿರುವ ಹಳೆಯ ವಾಹನಗಳ ಓಟಕ್ಕೆ ಬ್ರೇಕ್ ಹಾಕಲು ಸರ್ಕಾರ ನಿರ್ಧರಿಸಿದೆ. 15 ವರ್ಷ ಪೂರೈಸಿದ ವಾಹನಗಳನ್ನು ಜಪ್ತಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧಾನ ಪರಿಷತ್‌ನಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ.
ರಾಜ್ಯದಲ್ಲಿ ಆಯಸ್ಸು ಮೀರಿದ ಸುಮಾರು 1.38 ಕೋಟಿ ವಾಹನಗಳನ್ನು ಗುಜರಿ (Scrap) ಹಾಕಬೇಕೆಂಬ ಒತ್ತಾಯ ಕೇಳಿಬಂದಿದೆ. ಇದರ ಬೆನ್ನಲ್ಲೇ ಸಚಿವರು ಜಪ್ತಿಯ ಎಚ್ಚರಿಕೆ ನೀಡಿದ್ದಾರೆ.ರಾಜಧಾನಿ ಬೆಂಗಳೂರೊಂದರಲ್ಲೇ 15 ವರ್ಷ ಮೀರಿದ ಬರೋಬ್ಬರಿ 37.45 ಲಕ್ಷ ವಾಹನಗಳಿವೆ! ಇದರಲ್ಲಿ 24.46 ಲಕ್ಷ ಬೈಕ್‌ಗಳು ಹಾಗೂ 7.05 ಲಕ್ಷ ಕಾರುಗಳು ಸೇರಿವೆ.
ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ 15 ವರ್ಷ ಮೀರಿದ ವಾಹನಗಳನ್ನು ಕಡ್ಡಾಯವಾಗಿ ಗುಜರಿ ಹಾಕಲು ಸೆಪ್ಟೆಂಬರ್ 12 ರಂದೇ ಆದೇಶ ಹೊರಡಿಸಲಾಗಿದೆ. ಸದ್ಯ 18,552 ಸರ್ಕಾರಿ ವಾಹನಗಳ ನೋಂದಣಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ್ದು, ಅವುಗಳಲ್ಲಿ 17,059 ವಾಹನಗಳನ್ನು ಸ್ಕ್ರ್ಯಾಪ್ ಮಾಡುವುದು ಇನ್ನೂ ಬಾಕಿ ಇದೆ.
ಕೇಂದ್ರದ ಗುಜರಿ ನೀತಿ ಏನು ಹೇಳುತ್ತೆ?
ವಾಯುಮಾಲಿನ್ಯ ತಡೆಗಟ್ಟಲು ಕೇಂದ್ರ ಸರ್ಕಾರವು ‘ವಾಹನ ಗುಜರಿ ನೀತಿ’ ಜಾರಿಗೆ ತಂದಿದೆ. ಇದರ ಪ್ರಕಾರ:
15 ವರ್ಷ ಪೂರೈಸಿದ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕುವುದು ಕಡ್ಡಾಯ.
20 ವರ್ಷ ಮೀರಿದ ಖಾಸಗಿ ವಾಹನಗಳಿಗೆ ‘ಫಿಟ್‌ನೆಸ್ ಟೆಸ್ಟ್’ ಕಡ್ಡಾಯ. ಪರೀಕ್ಷೆಯಲ್ಲಿ ಫೇಲ್ ಆದರೆ ಅಂತಹ ವಾಹನಗಳು ರಸ್ತೆಗಿಳಿಯುವಂತಿಲ್ಲ.
ಹಳೆಯ ವಾಹನ ಗುಜರಿ ಹಾಕಿದವರಿಗೆ ಹೊಸ ವಾಹನ ಖರೀದಿಯಲ್ಲಿ ತೆರಿಗೆ ವಿನಾಯಿತಿ ಹಾಗೂ ಪ್ರೋತ್ಸಾಹಧನ ನೀಡಲಾಗುತ್ತದೆ.
ಅಗ್ನಿಶಾಮಕ ಇಲಾಖೆಯಂತಹ ಕಡೆಗಳಲ್ಲಿ ಕೆಲವು ವಾಹನಗಳು 15 ವರ್ಷ ಕಳೆದಿದ್ದರೂ ಕಡಿಮೆ ಬಳಕೆಯಾಗಿರುತ್ತವೆ. ಅಂತಹ ವಾಹನಗಳಿಗೆ ವಿನಾಯಿತಿ ನೀಡುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ” ಎಂದು ಸಚಿವರು ಮಾಹಿತಿ ನೀಡಿದರು. ಸದ್ಯಕ್ಕೆ ರಾಜ್ಯದ ಸಾರಿಗೆ ನಿಗಮಗಳಲ್ಲಿ 15 ವರ್ಷ ಮೀರಿದ ಬಸ್‌ಗಳು ಸಂಚಾರದಲ್ಲಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ
ಚಿನ್ನ-ಬೆಳ್ಳಿ ಬೆಲೆ ಮತ್ತೆ ಏರಿಕೆ: ಪ್ರತಿ ಕೆಜಿ ಬೆಳ್ಳಿಗೆ ಒಂದೇ ದಿನ 8,900 ರೂ. ಹೆಚ್ಚಳ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


