Tuesday, August 4, 2026
spot_img
More
    spot_img
    HomeEntertainmentಜೈಲಿನಲ್ಲಿ ಕೈದಿಗಳಿಂದ ಮೊಬೈಲ್‌ ಬಳಕೆ ಕೇಸ್:‌ ಪೊಲೀಸರನ್ನೇ ಯಾಮಾರಿಸಿದ್ರಾ ನಟ ಧನ್ವೀರ್?

    ಜೈಲಿನಲ್ಲಿ ಕೈದಿಗಳಿಂದ ಮೊಬೈಲ್‌ ಬಳಕೆ ಕೇಸ್:‌ ಪೊಲೀಸರನ್ನೇ ಯಾಮಾರಿಸಿದ್ರಾ ನಟ ಧನ್ವೀರ್?

    ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಮೊಬೈಲ್‌ ಬಳಕೆ ಮಾಡುತ್ತಿದ್ದ ವಿಡಿಯೊ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಿಸಿಬಿ ಪೊಲೀಸರು ಈ ಹಿಂದೆ ನಟ ಧನ್ವೀರ್‌ನನ್ನು ಕರೆದು ವಿಚಾರಣೆ ನಡೆಸಿದ್ದರು.

    Advertisement

    ಜೈಲಿನ ವಿಡಿಯೊಗಳನ್ನು ಧನ್ವೀರ್‌ ಹರಿಬಿಟ್ಟಿದ್ದಾರಾ ಎಂಬ ಅನುಮಾನದೊಂದಿಗೆ ಈ ವಿಚಾರಣೆಯನ್ನು ನಡೆಸಲಾಗಿತ್ತು. ಅಲ್ಲದೇ ಪರಪ್ಪನ ಅಗ್ರಹಾರ ಪೊಲೀಸರೂ ಸಹ ಪ್ರಕರಣವನ್ನು ದಾಖಲಿಸಿಕೊಂಡು ಧನ್ವೀರ್‌ ವಿಚಾರಣೆಯನ್ನು ನಡೆಸಿದ್ದರು.

    ಸಿಸಿಬಿ ಹಾಗೂ ಪರಪ್ಪನ ಅಗ್ರಹಾರ ಪೊಲೀಸರು ಧನ್ವೀರ್‌ ಮೊಬೈಲ್‌ ಪಡೆದು ಪರಿಶೀಲನೆಯನ್ನು ಮಾಡಿದ್ದರು. ಆದರೆ ಇದೀಗ ಹೊಸ ಅನುಮಾನ ಶುರುವಾಗಿದ್ದು, ಧನ್ವೀರ್‌ ಸಿಸಿಬಿ ಪೊಲೀಸರಿಗೆ ಹಾಗೂ ಪರಪ್ಪನ ಅಗ್ರಹಾರ ಪೊಲೀಸರಿಗೆ ಕೊಟ್ಟ ಮೊಬೈಲ್‌ ಬೇರೆ ಬೇರೆ ಎನ್ನಲಾಗುತ್ತಿದೆ.

    ಪೊಲೀಸರು ವಶಪಡಿಸಿಕೊಂಡ ಮೊಬೈಲ್‌ನಲ್ಲಿ ಯಾವುದೇ ವಿಡಿಯೊಗಳು ಇಲ್ಲವಾದ ಕಾರಣ ಹೊಸ ಮೊಬೈಲ್‌ನನ್ನೇದಾರೂ ಕೊಟ್ಟಿದ್ದಾರಾ ಎಂಬುದನ್ನು ಡೇಟಾ ರಿಟ್ರೀವ್‌ ಮಾಡಿಕೊಳ್ಳುವ ಮೂಲಕ ಪತ್ತೆಹಚ್ಚಲು ಮುಂದಾಗಿದ್ದಾರೆ.

    ಒಂದು ವೇಳೆ ಧನ್ವೀರ್‌ ಬೇರೆ ಮೊಬೈಲ್‌ ನೀಡಿ ಅಥವಾ ವಿಡಿಯೊಗಳನ್ನು ಡಿಲಿಟ್‌ ಮಾಡಿ ಪೊಲೀಸರನ್ನು ಯಾಮಾರಿಸಲು ಯತ್ನಿಸಿದ್ದೇ ಆಗಿದ್ದಲ್ಲಿ ಸಾಕ್ಷ್ಯನಾಶ ಪ್ರಕರಣದಲ್ಲಿ ಬಂಧನಕ್ಕೊಳಗಾಗಲಿದ್ದಾರೆ.

    ಚಿನ್ನ, ಬೆಳ್ಳಿ ಬೆಲೆ ಇಳಿಕೆ: ಕೊಳ್ಳಲು ಇದು ಸುವರ್ಣಾವಕಾಶ! ಇಲ್ಲಿದೆ ಇಂದಿನ ದರಪಟ್ಟಿ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading